ನಾಳೆಯಿಂದ ಭೌತಿಕ ತರಗತಿಗಳು ಆರಂಭ
ಆರಂಭಕ್ಕೆ ಶೈಕ್ಷಣಿಕ ಜಿಲ್ಲೆಯಲ್ಲಿ ಸಕಲ ಸಿದ್ಧತೆ ;ಮಧ್ಯಾಹ್ನದವರೆಗೆ ಮಾತ್ರ ವಿದ್ಯಾರ್ಥಿಗಳಿಗೆ ಬೋಧನೆ
Team Udayavani, Aug 22, 2021, 5:42 PM IST
ಕೋವಿಡ್ ಮಹಾಮಾರಿ ಆರ್ಭಟದಿಂದ ಆರಂಭ ಆಗದೇ ಇದ್ದ ಶಾಲೆಗಳನ್ನು ಕೋವಿಡ್ ಸೋಂಕು ಕಡಿಮೆಯಾಗಿರುವ ಹಿನ್ನೆಲೆ ಸರ್ಕಾರಆರಂಭ
ಮಾಡಲು ಮುಂದಾಗಿದ್ದು ಆ.23ರ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಶೈಕ್ಷಣಿಕ ಜಿಲ್ಲೆಯೂ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದ್ದು, ಪೋಷಕರ ಅನುಮತಿ ಪತ್ರದೊಂದಿಗೆ ಮಕ್ಕಳು ಶಾಲೆಗೆ ಹಾಜರಾಗಬೇಕು. ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಿಲ್ಲ. ಆನ್‌ಲೈನ್,ಆಫ್ಲೈನ್ ಎರಡರಲ್ಲೂ ಪಾಠ ಮಾಡಲು ಶಿಕ್ಷಣಇಲಾಖೆ ತಯಾರಿ ನಡೆಸಿದೆ.
ತುಮಕೂರು: ಸರ್ಕಾರದ ಮಾರ್ಗಸೂಚಿ ಅನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆಗಸ್ಟ್ 23ರಿಂದ ಭೌತಿಕ ತರಗತಿ ಪ್ರಾರಂಭವಾಗಲಿರುವ ಹಿನ್ನೆಲೆ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಶಿಕ್ಷಣ ಇಲಾಖೆಯ ಆದೇಶದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ದಂತೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಭೌತಿಕ ತರಗತಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಮಕ್ಕಳು ತಮ್ಮ ಪೋಷಕರ ಅನುಮತಿ ಪತ್ರ ಪಡೆದು ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಶಾಲೆಗೆ ಹಾಜರಾಗಲು ತಿಳಿಸಲಾಗಿದೆ.
ಎಸ್‌ಒಪಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಸೂಚನೆ ನೀಡಲಾಗಿದ್ದು, ಇಲಾಖೆಯ ಸೂಚನೆಯಂತೆ ಭೌತಿಕ ತರಗತಿಗೆ ಹಾಜರಾಗದ ವಿದ್ಯಾರ್ಥಿಗೆ ಆನ್‌ಲೈನ್ ತರಗತಿ ನಡೆಸಲು ಕ್ರಮವಹಿಸಲು ಸೂಚಿಸಲಾಗಿದೆ. ಶಾಲೆಗಳನ್ನು ಆರಂಭ ಮಾಡುವ ಕುರಿತು ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಹೈಸ್ಕೂಲ್ ಮುಖ್ಯ ಶಿಕ್ಷಕರ ಸಭೆ ನಡೆಸಿ ಎಸ್‌ಒಪಿ ಪಾಲನೆ ಆಗಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ:ಬಿಲ್ ಗೇಟ್ಸ್ ಗೆ ಪಾಕಿಸ್ತಾನದ ನಖ್ವಿ 100 ಮಿಲಿಯನ್ ಪಂಗನಾಮ ಹಾಕಿದ್ದು ಹೇಗೆ..?
ವ್ಯಾಕ್ಸಿನ್ ಕೊಡಿಸಲು ಕ್ರಮ: ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಶಾಲೆಯ ಅಡುಗೆಯವರನ್ನು ಕರೆಸಿ ಮಕ್ಕಳಿಗೆ ಬಿಸಿ ನೀರು ಕಾಯಿಸಿಕೊಡಬೇಕು. ಮಕ್ಕಳು ಊಟ ಮತ್ತು ಲಘು ಉಪಾಹಾರ ಬಿಸಿ ನೀರನ್ನು ಮನೆಯಿಂದಲೇ ತರಬೇಕು. ಕೋವಿಡ್ ಇರುವ ಮಕ್ಕಳ ಕುಟುಂಬಕ್ಕೆ ವ್ಯಾಕ್ಸಿನ್ ಕೊಡಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಶೇ. 95ರಷ್ಟು ಶಿಕ್ಷಕರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 11 ಸಾವಿರ ಶಿಕ್ಷಕರು ಇದ್ದು, ಅದರಲ್ಲಿ 1,100 ಮಂದಿ ಶಿಕ್ಷಕರಿಗೆ ವ್ಯಾಕ್ಸಿನ್ ಇನ್ನೂ ಆಗಿಲ್ಲ ಎನ್ನುವ ಮಾಹಿತಿ ಇದೆ. ಅವರು ತಕ್ಷಣ ವ್ಯಾಕ್ಸಿನ್ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.
ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆ: ಜಿಲ್ಲೆಯಲ್ಲಿ 2 ಲಕ್ಷ 30ಸಾವಿರ ವಿದ್ಯಾರ್ಥಿಗಳು ಇದ್ದು, ಈಗ ಸರ್ಕಾರ 9 ಮತ್ತು 10 ನೇ ತರಗತಿ ಶಾಲೆ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದೆ. ಮುಂದೆ ಕೋವಿಡ್ ಪ್ರಮಾಣ ನೋಡಿಕೊಂಡು ಸರ್ಕಾರ ಇತರೆ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಲಿದೆ. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ನಮ್ಮಲ್ಲಿ ಕೋವಿಡ್ ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆ ಇದೆ. ಆದರೂ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೂ, ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂದು ಒತ್ತಾಯ ಇಲ್ಲ, ಆಫ್ಲೈನ್, ಆನ್‌ಲೈನ್ ಎರಡರಲ್ಲಿಯೂ ಇರುತ್ತದೆ. ಶಾಲೆಗಳನ್ನು ಆರಂಭ ಮಾಡಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಶಾಲೆಗಳಿಗೆ ಎಷ್ಟು ಮಕ್ಕಳು ಬರುತ್ತಾರೆ ಎನ್ನುವುದು ಕುತೂಹಲ ಮೂಡಿದೆ.
ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆ ಪ್ರಾರಂಭಿಸಲು ಕ್ರಮ
ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದರಿಂದ ತಜ್ಞರ ಸಲಹೆ ಮೇರೆಗೆ ಆ. 23ರ ನಂತರ ಪ್ರೌಢಶಾಲೆಗಳು ಆರಂಭಗೊಳ್ಳಲಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಡಿಪಿಐ ಹಾಗೂ ಬಿಇಒಗಳು ಕೋವಿಡ್ ಮಾರ್ಗಸೂಚಿನ್ವಯ ಶಾಲೆ ಪ್ರಾರಂಭಿಸಲು ಕ್ರಮ
ವಹಿಸುವರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ರಾಜ್ಯದಲ್ಲಿ ಈ ಬಾರಿ 8.75 ಲಕ್ಷ ಮಕ್ಕಳು ಯಾವುದೇ ಕೋವಿಡ್ ಸೋಂಕಿಗೆ ಒಳಗಾಗದೇ ಎಸ್‌ಎಸ್ ಎಲ್‌ಸಿ ಪರೀಕ್ಷೆ ಬರೆದಿದ್ದು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸಂಭಾವ್ಯ ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ದೃಢಪಟ್ಟರೆ ಅಂತಹ ಶಾಲೆಯನ್ನು ಒಂದು ವಾರಗಳ ಕಾಲಮುಚ್ಚಿ ಸ್ಯಾನಿಟೈಸ್ ಮಾಡಿದ ನಂತರ ಪ್ರಾರಂಭಿಸಲಾಗುವುದು ಎಂದರು.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 9 ಮತ್ತು 10 ನೇ ತರಗತಿಗಳನ್ನು ಪ್ರಾರಂಭ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ. ಪ್ರತಿ ಶಾಲೆಗಳಲ್ಲಿಯೂ ಕೋವಿಡ್ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಲು ಸೂಚಿಸಲಾಗಿದೆ. ಮಕ್ಕಳು ಶಾಲೆಗೆ ಬರಬೇಕು ಎನ್ನುವ ಕಡ್ಡಾಯ ಹೊಂದಿಲ್ಲ. ಆನ್‌ಲೈನ್ ಮೂಲಕವೂ ಮಕ್ಕಳಿಗೆ ಶಿಕ್ಷಣ ಕೊಡಲಾಗುವುದು.
– ಸಿ.ನಂಜಯ್ಯ, ಉಪನಿರ್ದೇಶಕ,
ಸಾರ್ವಜನಿಕ ಶಿಕ್ಷಣ ಇಲಾಖೆ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಪಾಸಿಟಿವಿಟಿದರ ಒಂದಕ್ಕಿಂತ ಕಡಿಮೆಬಂದಿದೆ. ಈಗಿನ ವಾತಾವರಣದಲ್ಲಿ ಅಗತ್ಯ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶಾಲೆ ಆರಂಭಿಸಲು ತಜ್ಞರು ನೀಡಿರುವ ಸಲಹೆಯಂತೆ ಶಾಲೆಗಳು ಆರಂಭವಾಗುತ್ತಿವೆ.
– ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.