ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತ ಫುಟ್ಬಾಲ್ ಆಟಗಾರ ‘ಹಕೀಬ್ ಸಾಬ್’ ನಿಧನ
Team Udayavani, Aug 22, 2021, 6:26 PM IST
ಕಲಬುರಗಿ : ಭಾರತೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ, ತರಬೇತುದಾರ, ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತ ಸೈಯದ್ ಸಾಹೀದ್ ಹಕೀಮ್ (82) ಇನ್ನಿಲ್ಲ. ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
50ರ ದಶಕದಲ್ಲಿ ಫುಟ್ಬಾಲ್ ತಂಡದ ಖ್ಯಾತ ತರಬೇತುದಾರಾಗಿದ್ದ ಸೈಯದ್ ಅಬ್ದುಲ್ ರಹೀಮ್ ಅವರ ಪುತ್ರ ಸಾಹೀದ್ ಹಕೀಮ್. 1960ರ ರೋಮ್ ಒಲಿಂಪಿಕ್ಸ್ ನಲ್ಲಿ ಭಾರತದ ಕೋಚ್ ತಂದೆ ಸೈಯದ್ ಅಬ್ದುಲ್ ರಹೀಮ್ ಅವರು ಆಗಿದ್ದರೆ, ಸಾಹೀದ್ ಹಕೀಮ್ ತಂಡದ ಸದಸ್ಯರಾಗಿದ್ದರು. ಸಾಹೀದ್ ಹಕೀಮ್ ಅವರು “ಹಕೀಮ್ ಸಾಬ್” ಎಂದೇ ಹೆಸರುವಾಸಿಯಾಗಿದ್ದಾರೆ.
ಮೂಲತಃ ಹೈದರಾಬಾದ್ ನವರು ಆಗಿವರು ಇವರು, 1939ರಲ್ಲಿ ಹೈದರಾಬಾದ್‍ನಲ್ಲೇ ಜನಿಸಿದ್ದರು. ಕಳೆದ ಮೂರೂವರೆ ವರ್ಷಗಳ ಹಿಂದೆಯಷ್ಟೇ ಕಲಬುರಗಿಗೆ ಬಂದು ನೆಲೆಸಿದ್ದರು. ಪತ್ನಿ ಸಾದಿಯಾ ಸೈಯದಾ, ಇಬ್ಬರು ಪುತ್ರಿಯರೊಂದಿಗೆ ಇಲ್ಲಿನ ಪಿ ಅಂಡ್ ಟಿ ಕಾಲೋನಿಯಲ್ಲಿ ವಾಸವಾಗಿದ್ದರು.
ಕಳೆದ ವಾರ ಹೈದರಾಬಾದ್‍ಗೆ ಅವರು ತೆರಳಿದ್ದರು. ಅಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಅವರು ಅದರ ಬಗ್ಗೆ ಅಷ್ಟು ಲಕ್ಷ್ಯ ಕೊಟ್ಟಿರಲಿಲ್ಲ. ಹೈದರಾಬಾದ್ ನಿಂದ ವಾಪಸ್ ಬಂದ ಮೇಲೆ ಇಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಾಪಸಣೆ ಮಾಡಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಅವರು ವಿಧಿವಶರಾದರು ಎಂದು ಪತ್ನಿ ಸಾದಿಯಾ ಸೈಯದಾ ಅವರು ಕಣ್ಣೀರು ಹಾಕಿದರು.
ತಂದೆ-ತಾಯಿ ಸಮಾಧಿಗಳು ಹೈದರಾಬಾದ್‍ನಲ್ಲಿ ಇರುವುದರಿಂದ ಇವರ ಅಂತ್ಯಸಂಸ್ಕಾರವೂ ಅಲ್ಲಿಯೇ ನಡೆಯಲಿದೆ. ಈಗಾಗಲೇ ಇವರ ಪಾರ್ಥಿವ ಶರೀರವನ್ನು ಹೈದರಾಬಾದ್‍ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದರು.
80ರ ಇಳಿಯಸ್ಸಿನಲ್ಲೂ ಅವರಿಗೂ ಫುಟ್ಬಾಲ್ ಬಗ್ಗೆ ಅತೀಯ ಆಸಕ್ತಿ ಇತ್ತು. ಇಲ್ಲಿನ ಆಟಗಾರರಿಗೆ ಅವರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಸಿಎಎ ವಿರೋಧಿ ಮತ್ತು ರೈತರ ಪರ ಹೋರಾಟದಲ್ಲೂ ಅವರು ಭಾಗಿಯಾಗಿದ್ದರು. ಕಳೆದ ವರ್ಷ ಕೋವಿಡ್ ನಿಂದ ಅವರು ಕೊರೊನಾದಿಂದ ಗುಣಮುಖರಾಗಿದ್ದರು.
ಹಕೀಮ್ ಅವರು ಐದು ದಶಕಗಳ ಕಾಲ ಭಾರತೀಯ ಫುಟ್ಬಾಲ್‍ನ ಭಾಗವಾಗಿದ್ದರು. ಭಾರತೀಯ ಫುಟ್ಬಾಲ್ ತಂಡದ ಅಭಿವೃದ್ಧಿಗೆ ಆಟಗಾರರರಾಗಿ, ತರಬೇತುದಾರರಾಗಿ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಇವರ ಜೀವಮಾನದ ಸಾಧನೆಗೆ 2017ರಲ್ಲಿ ಧ್ಯಾನಚಂದ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಧ್ಯಾನಚಂದ್ ಪ್ರಶಸ್ತಿಗೆ ಭಾಜನರಾದ ಎರಡನೇ ಫುಟ್ಬಾಲ್ ಆಟಗಾರರ ಎಂಬ ಕೀರ್ತಿ ಇವರಾಗಿತ್ತು.
ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿಯೂ ಇವರು ಸೇವೆ ಸಲ್ಲಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರು ಹಾಗೂ 2017ರ 17 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಾಜೆಕ್ಟ್ ವ್ಯವಾಸ್ಥಾಪಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.