‘ಹೆಡ್ ಬುಷ್’ ಫಸ್ಟ್ ಲುಕ್ ಟೀಸರ್ ರಿಲೀಸ್ | ಡಾನ್ ಜಯರಾಜ್ ಗೆಟಪ್ಪಿನಲ್ಲಿ ಡಾಲಿ ಖದರ್
Team Udayavani, Aug 22, 2021, 7:38 PM IST
ಬೆಂಗಳೂರು: ಡಾಲಿ ಧನಂಜಯ್ ನಟಿಸಿರುವ ‘ಹೆಡ್ ಬುಷ್’ ಚಿತ್ರದ ಫಸ್ಟ್ ಲುಕ್ ಟೀಸರ್ ಇಂದು (ಆ.22) ಸಂಜೆ ಬಿಡುಗಡೆಯಾಗಿದೆ.
ಹೆಡ್ ಬುಷ್’ ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಲಿದ್ದಾರೆ. ಇಂದು ರಿಲೀಸ್ ಆಗಿರುವ ಟೀಸರ್ ನಲ್ಲಿ ಡಾಲಿ ಪಕ್ಕಾ ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಜಗತ್ತಿನಲ್ಲಿ ಮಿಂಚಿದ ಡಾನ್ ಜಯರಾಜ್ ಅವರ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ ಎನ್ನುವುದು ಟೀಸರ್ ನೋಡಿದರೆ ಗೊತ್ತಾಗುತ್ತದೆ.
Here is the first look teaser of #HeadBush written by @agnishreedhar and directed by #Shoonya @sunojvelayudhan @starlingpayal @aanandaaudio @baadalvirus @charanrajmr2701 https://t.co/8HdACAkspC pic.twitter.com/OoO8J8E12W
— Dhananjaya (@Dhananjayaka) August 22, 2021
ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದಾರೆ. ಶೂನ್ಯ ಎಂಬ ಹೊಸ ಪ್ರತಿಭೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಪಾಯಲ್ ರಜಪೂತ್ ಅವರು ಧನಂಜಯ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದೆಹಲಿ ಮೂಲದ ಈಕೆ ಹಿಂದಿ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಪ್ನೋಂ ಸೇ ಭರೇ ನೈನಾ’, ‘ಯೇ ಹೇ ಆಶಿಕಿ’, ‘ಪ್ಯಾರ್ ತುನೇ ಕ್ಯಾ ಕಿಯಾ’ ಮುಂತಾದ ಹಿಂದಿ ಸೀರಿಯಲ್‌ಗಳಲ್ಲಿ ಪಾಯಲ್ ರಜಪೂತ್ ಮಿಂಚಿದ್ದರು. ‘ಆರ್ ಎಕ್ಸ್ 100’, ‘ಆರ್ ಡಿಎಕ್ಸ್ ಲವ್’, ‘ವೆಂಕಿ ಮಾಮ’, ‘ವೀರೇ ಕಿ ವೆಡ್ಡಿಂಗ್’, ‘ಡಿಸ್ಕೋ ರಾಜಾ’, ‘ಅನಗನಗಾ ಓ ಅತಿಥಿ’ ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾಯಲ್ ರಜಪೂತ್ ನಟಿಸಿದ್ದಾರೆ.
ಆಗಸ್ಟ್ 9 ರಿಂದ ‘ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ ‘ಹೆಡ್ ಬುಷ್’ ಸಿನಿಮಾ ತಯಾರಾಗಲಿದೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.