ಹಿತ್ತಲ ಗಿಡ ಮರೆಯದಿರೋಣ


Team Udayavani, Aug 23, 2021, 4:00 AM IST

ಹಿತ್ತಲ ಗಿಡ ಮರೆಯದಿರೋಣ

ಉಡುಪಿಗೆ ಆ. 19ರಂದು ಆಗಮಿಸಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರು ಖಾದ್ಯತೈಲ ಉತ್ಪಾದನೆಯ ಕೊರತೆ ಇದೆ. ಇದರ ಉತ್ಪಾದನೆ ಹೆಚ್ಚಿಸಲು ಸರಕಾರ ಪ್ರೋತ್ಸಾಹ ನೀಡಲಿದೆ ಎಂದು ಹೇಳುವಾಗ, ಕರಾವಳಿಯವರು ತೆಂಗಿನೆಣ್ಣೆಯನ್ನು ಬಳಸುವುದರಿಂದ ಭಾಗ್ಯವಂತರು. ಇಲ್ಲಿ ತಾಜಾ ಖಾದ್ಯತೈಲ ಸಿಗುತ್ತಿದೆ ಎಂದರು. ಹೊರ ರಾಷ್ಟ್ರಗಳಿಂದ ಪಾಮ್‌ಆಯಿಲ್‌ ತರಿಸಿ ಕಲಬೆರಕೆ ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆಂದೂ ಶೋಭಾ ಕರಂದ್ಲಾಜೆಯವರು ಕಳವಳ ವ್ಯಕ್ತಪಡಿಸಿದ್ದರು.

ಕರಾವಳಿಯಲ್ಲಿ ತೆಂಗಿನೆಣ್ಣೆ ಬಳಕೆ ಲಾಗಾಯ್ತಿನಿಂದ ಬಂದಿರುವುದು ಸತ್ಯ.  ಇಂದಿಗೂ ಒಂದಿಷ್ಟು ಮಟ್ಟಿಗೆ ಚಾಲ್ತಿಯಲ್ಲಿರುವುದೂ ಸತ್ಯ. ಈಗ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ತಿಂಡಿತಿನಿಸುಗಳ ಅಂಗಡಿಗಳಿಗೆ ಹೋಗಿ ಅಲ್ಲಿರುವ ಎಣ್ಣೆಯಲ್ಲಿ ಹುರಿದ ತಿಂಡಿಗಳನ್ನು ಕೇಳಿದರೆ ಅವುಗಳಲ್ಲಿ ಶೇ.99ರಷ್ಟು ತಿನಿಸುಗಳು ಪಾಮ್‌ಆಯಿಲ್‌ನಲ್ಲಿ ಮಾಡಿದ್ದಾಗಿರುತ್ತದೆ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿಯೂ ಪಾಮ್‌ಆಯಿಲ್‌ನಲ್ಲಿ ಹುರಿದ ತಿನಿಸುಗಳನ್ನು ಉಣ ಬಡಿಸುತ್ತಿದ್ದಾರೆ. ಸಚಿವರು ಬೆಟ್ಟು ಮಾಡಿದ ದೇಶದ ನಾನಾ ಭಾಗಗಳಲ್ಲಿರುವ ಕಲಬೆರಕೆ ಎಣ್ಣೆ ಕರಾವಳಿಯಲ್ಲಿಯೂ ದಾಳಿ ಮಾಡುತ್ತಿದೆ ಎಂಬುದು ವಾಸ್ತವ.

ತೆಂಗಿನೆಣ್ಣೆಯನ್ನು ಹಿಂದೊಮ್ಮೆ ವೈದ್ಯಕೀಯ ಲೋಕ ಟೀಕಿಸಿತ್ತು.  ತೆಂಗಿನೆಣ್ಣೆ ಆರೋಗ್ಯಕ್ಕೆ ಉತ್ತಮ ಎಂದು ಹೆಸರಾಂತ ವೈದ್ಯ ಡಾ|ಬಿ.ಎಂ.ಹೆಗ್ಡೆಯವರು ಪ್ರತಿಪಾದನೆ ಮಾಡಿದ ಅನಂತರ ನೇತ್ಯಾತ್ಮಕ ಪ್ರಚಾರ ಸ್ವಲ್ಪ ಕಳಚಿ ಬಿತ್ತು ಎನ್ನಬಹುದು. ಈಗ ತೆಂಗಿನೆಣ್ಣೆ ಬದಲು ಬೇರೆ ಎಣ್ಣೆಗಳು ಚಾಲ್ತಿಗೆ ಬರಲು ಕಾರಣ ತಿನಿಸುಗಳು ಕೆಡದಂತೆ ಇರುವ ದೀರ್ಘಾವಧಿ. ಯಾವತ್ತೂ ನೇತ್ಯಾತ್ಮಕ ಶಕ್ತಿಗಳು ಬಲಿಷ್ಠ ಆಗಿರುವುದು ನಿಸರ್ಗದ ಒಂದು ನಿಯಮ. ಕೃಷಿಯಲ್ಲಿಯೂ ಕೀಟ ಬಾಧೆ ನಿವಾರಿಸಲು ರಾಸಾಯನಿಕ ಕ್ರಿಮಿನಾಶಕ ಬಳಸುತ್ತಾರೆ. ಕೀಟಗಳು ನಿವಾರಣೆಯಾಗುವ ಜತೆಗೆ ಕ್ರಿಮಿನಾಶಕದ ಅಂಶಗಳು ಆಹಾರಧಾನ್ಯದಲ್ಲಿಯೂ ಸೇರುತ್ತವೆ, ಅವುಗಳೇ ನಮ್ಮ ದೇಹಕ್ಕೂ ಸೇರಿ ಆರೋಗ್ಯವನ್ನೂ ಕೆಡಿಸುತ್ತವೆ ಎನ್ನುವುದು ವಾಸ್ತವ. ರಾಸಾಯನಿಕ ಕ್ರಿಮಿನಾಶಕದ ಬದಲು ಸಾವಯವ ಮಾದರಿ ಕ್ರಿಮಿನಾಶಕ ಬಳಸಿದರೆ ಇದರ ಅಡ್ಡ ಪರಿಣಾಮ ರಾಸಾಯನಿಕದಂತೆ ಇರುವುದಿಲ್ಲ. ಅದೇ ರೀತಿ ತೆಂಗಿನೆಣ್ಣೆಯಲ್ಲಿ ಹುರಿದ ತಿಂಡಿಗಳು   ಹಾಳಾಗದೆ ಇರುವ ದಿನಗಳು ಕಡಿಮೆ ಇರಬಹುದು, ಇತರ ಕಲಬೆರಕೆ ಎಣ್ಣೆಗಳಲ್ಲಿ ಮಾಡಿದ ತಿನಿಸುಗಳು ಹೆಚ್ಚು ದಿನ ಹಾಳಾಗದೆ ಇರಬಹುದು. ಆರೋಗ್ಯದ ದೃಷ್ಟಿಯಿಂದ ತೆಂಗಿನೆಣ್ಣೆಯಲ್ಲಿ ಮಾಡಿದ ತಿನಿಸುಗಳೇ ಉತ್ತಮ ಎಂಬ ವಾಸ್ತವ ಅಂಶವನ್ನು ಅರಿತರೆ ಇತರ ಸಣ್ಣಪುಟ್ಟ ಸಮಸ್ಯೆಗಳು ನಗಣ್ಯವಾಗದೆ ಇರದು.

ಕರಾವಳಿಯ ಬಹುತೇಕ ಮನೆಗಳಲ್ಲಿ ತೆಂಗಿನ ಮರಗಳಿದ್ದರೂ ತೆಂಗಿನೆಣ್ಣೆ ತಿನಿಸುಗಳು ಕಡಿಮೆಯಾಗಲು ಜನಸಾಮಾನ್ಯರೇ ಮುಖ್ಯ ಕಾರಣ ಎನ್ನದೆ ವಿಧಿ ಇಲ್ಲ. ಜನರಿಗೆ ತಮ್ಮದೇ ಆರೋಗ್ಯ ಕಾಳಜಿ ಬೇಡವಾದರೆ ಇನ್ನಾರಿಗೆ ಬೇಕಾಗುತ್ತದೆ? ಗ್ರಾಹಕರು ತೆಂಗಿನೆಣ್ಣೆಯ ತಿನಿಸುಗಳನ್ನು ಹೆಚ್ಚು ಹೆಚ್ಚು ಪಡೆದುಕೊಂಡರೆ ಸಹಜವಾಗಿ ಮಾರುಕಟ್ಟೆಯಲ್ಲಿ ಇದೇ ಬಗೆಯ ತಿನಿಸುಗಳು ಲಗ್ಗೆ ಇರಿಸುತ್ತವೆ. ಗ್ರಾಹಕರು ಆರೋಗ್ಯರುಚಿಯನ್ನು ಕಾಣದೆ ಹೋದರೆ ಮಾರುಕಟ್ಟೆಯೂ, ಉತ್ಪಾದಕರೂ ಆರೋಗ್ಯರುಚಿಯನ್ನು  ಸಹಜವಾಗಿ ಅವಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಚಿವೆ ಶೋಭಾ ಅವರ ಆರೋಗ್ಯಪೂರ್ಣ ಮಾತನ್ನು ನಮ್ಮ ಆರೋಗ್ಯದ ದೃಷ್ಟಿಯಿಂದ ಸತ್ಯಗೊಳಿಸಬೇಕಾಗಿದೆ. ಇಂದು ನಾವು ಬಳಸುವ ದಿನನಿತ್ಯದ ದೀಪದ ಎಣ್ಣೆ, ತುಪ್ಪ ಇತ್ಯಾದಿಗಳಿಗೂ ಈ ಮಾತನ್ನು ಅನ್ವಯಗೊಳಿಸಬೇಕಾಗಿದೆ.

-ಸಂ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.