![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 23, 2021, 4:10 AM IST
ಉಡುಪಿ: ಸ್ವಂತ ಮನೆ ಕಟ್ಟಬೇಕು ಎಂದು ಆಸೆ ಹೊತ್ತು ಈಡೇರದಾಗ ನೆನಪಾಗುವುದೇ ಅಪಾರ್ಟ್‌ಮೆಂಟ್‌ಗಳಲ್ಲಿ ರೂಂ ಪಡೆಯುವುದು. ಕೆಲವು ಮಂದಿ ಸ್ವಂತ ರೂಂ ಪಡೆದರೆ ಮತ್ತೆ ಕೆಲವು ಮಂದಿ ಬಾಡಿಗೆ ಆಧಾರದಲ್ಲಿ ನೆಲೆಸುತ್ತಾರೆ. ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳಿಂದ ಇವುಗಳು ಎಷ್ಟು “ಸೇಫ್’ ಅನ್ನುವ ಪ್ರಶ್ನೆ ಉದ್ಭವಿಸುತ್ತವೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 250ರಷ್ಟು ಅಪಾರ್ಟ್‌ಮೆಂಟ್‌ಗಳಿದ್ದು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳ ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಭದ್ರತೆ ಇರುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವವಾಗಿ ನಡೆಯುತ್ತಿರುವುದೇ ಬೇರೆಯಾಗಿದೆ.
ಮಾರ್ಗಸೂಚಿಗಷ್ಟೇ ಸೀಮಿತ :
ಗ್ರಾಹಕರನ್ನು ಹುಡುಕುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪೂರಕವಾಗಿರುವಂತಹ ಅಂಶಗಳನ್ನು ನಮೂದಿಸುತ್ತವೆ. ಆದರೆ ವಾಸ್ತವವಾಗಿ ಆ ಅಪಾರ್ಟ್ ಮೆಂಟ್‌ಗಳನ್ನು ಪ್ರವೇಶಿಸಿದಾಗ ಮಾತ್ರ ಗ್ರಾಹಕರಿಗೆ ತಮ್ಮ ತಪ್ಪಿನ ಅರಿವಾಗತೊಡಗುತ್ತದೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರ ಸೊಸೈಟಿ ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಂತ ರೂಂ ಖರೀದಿಸುವವರು ಒಟ್ಟಾಗಿ ಸೊಸೈಟಿ ನಿರ್ಮಿಸುವ ಸಂಪ್ರದಾಯ ಎಲ್ಲ ಕಡೆಯೂ ಇದೆ. ಆದರೆ ಕೆಲವೊಂದು ಅಪಾರ್ಟ್‌ಮೆಂಟ್‌ಗಳಲ್ಲಿ ಈ ವ್ಯವಸ್ಥೆಯೇ ಇಲ್ಲವಾಗಿದೆ. ಇಂತಹ ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ವಹಣೆ, ಲಿಫ್ಟ್ ಕೂಡ ಸರಿ ಇರುವುದಿಲ್ಲ. ಸೆಕ್ಯೂರಿಟಿ ಗಾರ್ಡ್ ಗಳೂ ಇರುವುದಿಲ್ಲ. ಕಾಟಾಚಾರಕ್ಕಷ್ಟೇ ಸಿಸಿಟಿವಿಗಳಿರುತ್ತವೆ. ದೂರು-ದುಮ್ಮಾನಗಳನ್ನು ಆಂತರಿಕವಾಗಿ ನಿವಾಸಿಗಳೇ ನಿವಾರಿಸುವ ಘಟನೆಗಳೂ ನಡೆಯುತ್ತಿವೆ.
ಸೊಸೈಟಿ ಇದ್ದರೂ ಭದ್ರತೆ ಮರೀಚಿಕೆ :
ಇನ್ನು ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸೊಸೈಟಿಗಳಿದ್ದರೂ ಹಣ ಉಳಿಸುವ ಉದ್ದೇಶದಿಂದ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡುತ್ತಿಲ್ಲ. ಇಂತಹ ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ವಹಣೆ ಶುಲ್ಕ ಕಡಿಮೆ ಇದ್ದರೂ ಭದ್ರತೆ ಮರೀಚಿಕೆಯಾಗಿರುತ್ತದೆ.
ದಾಖಲು ಮಾಡಿದರೆ ನೇರ ಪ್ರವೇಶ:
ಅಪಾರ್ಟ್‌ಮೆಂಟ್‌ನೊಳಗೆ ಅನ್ಯ ವ್ಯಕ್ತಿಗಳು, ಸೇಲ್ಸ್‌ಮ್ಯಾನ್‌ಗಳ ಸಹಿತ ಇತರರು ಆಗಮಿಸುವಾಗ ನೋಂದಣಿ ಪುಸ್ತಕದಲ್ಲಿ ದಾಖಲಿಸಿದರೆ ಒಳಪ್ರವೇಶಿಸಲು ಅವಕಾಶ ಕಲ್ಪಿಸುವ ಘಟನೆಗಳೂ ನಡೆಯುತ್ತಿವೆ. ಎಲ್ಲ ಭಾಗಗಳಲ್ಲಿ ಸಿಸಿಟಿವಿ ಇಲ್ಲದ ಕಾರಣ ಅನಂತರ ಅವರು ಯಾವ ಕಡೆಗೆ ತೆರಳುತ್ತಾರೆ ಎಂಬ ಮಾಹಿತಿಯೂ ಇರುವುದಿಲ್ಲ. ಕೆಲವೊಂದು ಘಟನೆಗಳು ನಡೆದಾಗಲಷ್ಟೇ ಈ ಬಗ್ಗೆ ತನಿಖೆ ಚುರುಕು ಪಡೆಯುತ್ತವೆ.
ಬೇಕಿದೆ ಸೂಕ್ತ ಕಾನೂನು :
ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಮಂದಿ ನೆಲೆಸಲು ಆಸಕ್ತಿ ವಹಿಸುತ್ತಿರುವುದರಿಂದ ಅದರ ಭದ್ರತೆಗೂ ಸೂಕ್ತ ಒತ್ತು ನೀಡುವ ಅಗತ್ಯವಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು, ಸಿಸಿ ಕೆಮರಾ, ಸೊಸೈಟಿ, ತುರ್ತುಸೇವಾ ವ್ಯವಸ್ಥೆಗಳ ಅವಕಾಶಗಳನ್ನು ಕಡ್ಡಾಯಗೊಳಿಸಿದರಷ್ಟೇ ಮತ್ತೂ ಹೆಚ್ಚಿನ ಮಂದಿ ಅಪಾರ್ಟ್‌ಮೆಂಟ್‌ಗಳತ್ತ ಆಗಮಿಸಲು ಸಾಧ್ಯವಿದೆ.
ಜಿಲ್ಲೆಯ ಬಹುತೇಕ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಸಿಸಿಟಿವಿ ಕೆಮರಾ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಸೊಸೈಟಿ ಮೂಲಕ ಇದು ಕಾರ್ಯನಿರ್ವಹಿಸುತ್ತವೆ. ಈ ಬಗ್ಗೆ ಯಾವುದೇ ಕಡ್ಡಾಯ ನಿಯಮಗಳಿಲ್ಲದ ಕಾರಣ ಕೆಲವೊಂದು ಅಪಾರ್ಟ್ ಮೆಂಟ್‌ಗಳು ಭದ್ರತಾ ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ರಾಜ್ಯಮಟ್ಟದಲ್ಲಿ ವಿಶೇಷ ನಿಯಮಾವಳಿ ಬಂದರೆ ಸೂಕ್ತ. -ಮನೋಹರ ಶೆಟ್ಟಿ,, ಮಾಲಕರು, ಜಿಲ್ಲಾ ಬಿಲ್ಡರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ, ಉಡುಪಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.