ತಾಲಿಬಾನ್ ಹಿಡಿತದಲ್ಲಿ 74 ಕೋಟಿ ಮೌಲ್ಯದ ಸಂಪನ್ಮೂಲ!
Team Udayavani, Aug 23, 2021, 7:00 AM IST
ಕಾಬೂಲ್: ಅಫ್ಘಾನಿಸ್ಥಾನ, ತಾಲಿಬಾನಿಗಳ ಕೈವಶವಾದ ಕಾರಣ ಅಲ್ಲಿರುವ ವಿವಿಧ ಲೋಹಗಳ ದೈತ್ಯ ನಿಕ್ಷೇಪಗಳು ಉಗ್ರರ ಹಿಡಿತಕ್ಕೆ ಬಂದಿವೆ. ಮೂಲಸೌಕರ್ಯಗಳ ಕೊರತೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಆ ನಿಕ್ಷೇಪಗಳನ್ನು ಯಾರೂ ಮುಟ್ಟಿಲ್ಲ. ಸುಮಾರು 74 ಲಕ್ಷ ಕೋಟಿ ರೂ.ಗಳಷ್ಟು ಬೆಲೆಬಾಳುವ ಈ ನಿಕ್ಷೇಪಗಳು ಭವಿಷ್ಯದಲ್ಲಿ ತಾಲಿಬಾನಿಗರು ಹಾಗೂ ಅವರ ಮಿತ್ರ ರಾಷ್ಟ್ರಗಳ ಭಾಗ್ಯದ ಬಾಗಿಲು ತೆರೆಯಬಹುದು ಎನ್ನಲಾಗಿದೆ.
ಆರ್ಥಿಕ ಮುಗ್ಗಟ್ಟಿನಲ್ಲಿ ತಾಲಿಬಾನಿಗರು: ಇತ್ತೀಚಿನ ವಿದ್ಯಮಾನ ಹಿನ್ನೆಲೆಯಲ್ಲಿ ಕೆಲವು ರಾಷ್ಟ್ರಗಳು ತಾವು ಅಫ್ಘಾನಿಸ್ಥಾನ ಅಭಿವೃದ್ಧಿಗಾಗಿ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿವೆ. ಹಾಗಾಗಿ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ತಾಲಿಬಾನಿಗಳಿಗೆ ಸರಕಾರ ನಡೆಸಲು ಹಣದ ಅವಶ್ಯಕತೆ ಇದೆ. ಸಹಜವಾಗಿ ಅವರ ಕಣ್ಣು ಈ ನಿಕ್ಷೇಪಗಳ ಮೇಲೆ ಬೀಳಲಿದ್ದು, ಮುಂದೆ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ಆರಂಭಿಸಿ, ಕೋಟಿ ಕೋಟಿ ರೂ.ಗಳನ್ನು ಸಂಪಾದಿಸುವ ಸಾಧ್ಯತೆಯಿದೆ. ತಾಲಿಬಾನಿಗಳ ಜೊತೆಗೆ ಸ್ನೇಹ ಹಸ್ತ ಚಾಚಿರುವ ಚೀನ, ಪಾಕಿಸ್ಥಾನದಂಥ ರಾಷ್ಟ್ರಗಳೂ ಇದರ ಲಾಭವನ್ನು ಪಡೆಯಬಹುದು.
ಚೀನಕ್ಕೆ ಹೆಚ್ಚು ಲಾಭ?: ತಾಲಿಬಾನಿಗಳು ಅಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ಮೇಲೆ, ಅಲ್ಲಿ ವಿದೇಶಿ ಹೂಡಿಕೆಯಿನ್ನು ಕನಸಿನ ಮಾತು. ಆದರೆ, ಚೀನ ಮಾತ್ರ ಅಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿದೆ. ಉದಾಹರಣೆಗೆ, ವಿಶ್ವದ 2ನೇ ಅತಿ ದೊಡ್ಡ ತಾಮ್ರದ ನಿಕ್ಷೇಪವಾದ ಅಫ್ಘಾನಿಸ್ಥಾನದ ಮೆಸ್ ಅಯ°ಕ್‌ನಿಂದ 30 ವರ್ಷಗಳವರೆಗೆ ತಾಮ್ರದ ಅದಿರನ್ನು ತೆಗೆಯುವ ಗುತ್ತಿಗೆಯನ್ನು 2007ರಲ್ಲೇ ಚೀನ ಒಡೆತನದ ಚೀನ ಮೆಟಲರ್ಜಿಕಲ್ ಗ್ರೂಪ್ ಕಾರ್ಪೊರೇಷನ್ ಸಂಸ್ಥೆ ಪಡೆದುಕೊಂಡಿತ್ತು. ಅದರಂತೆ, 11.5 ದಶಲಕ್ಷ ಟನ್ ಅದಿರನ್ನು ಚೀನ ತೆಗೆಯಲಿದೆ. ಸದ್ಯಕ್ಕೆ ತಟಸ್ಥವಾಗಿರುವ ಇಲ್ಲಿನ ಗಣಿಗಾರಿಕೆಯನ್ನು ಪುನರಾರಂಭಿಸುವುದಾಗಿ ಚೀನ ಹೇಳಿದೆ.
ಯಾವ್ಯಾವ ನಿಕ್ಷೇಪಗಳಿವೆ?: ಅಮೆರಿಕದ ಜಿಯಾಲಜಿಕಲ್ ಸರ್ವೆ ವರದಿ ಪ್ರಕಾರ, ಬಾಕ್ಸೆ„ಟ್, ತಾಮ್ರ, ಕಬ್ಬಿಣ ಅದಿರು, ಲೀಥಿಯಂ ಹಾಗೂ ಇನ್ನಿತರ ತೀರಾ ವಿರಳವೆನಿಸಿರುವ ಖನಿಜಗಳ ಬೃಹತ್ ನಿಕ್ಷೇಪಗಳು ಅಫ್ಘನ್‌ನಲ್ಲಿವೆ. ಇವುಗಳಲ್ಲಿ ತಾಮ್ರ ಮತ್ತು ಲೀಥಿಯಂಗೆ ಪ್ರಸ್ತುತ ಹೆಚ್ಚು ಬೇಡಿಕೆಯಿದೆ. ಈ ವರ್ಷ, ಜಾಗತಿಕ ಮಟ್ಟದಲ್ಲಿ ಒಂದು ಟನ್ ತಾಮ್ರದ ಅದಿರಿನ ಬೆಲೆ 7.45 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಬರುವ ದಿನಗಳಲ್ಲಿ ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು, ವಾಹನಗಳ ಬ್ಯಾಟರಿ, ಸೋಲಾರ್ ಪ್ಯಾನೆಲ್, ಪವನ ವಿದ್ಯುತ್ ಪರಿಕರಗಳ ತಯಾರಿಕೆಯಲ್ಲಿ ಬೇಕಾಗುವ ಲೀಥಿಯಂನ ಬೇಡಿಕೆಗೆ 2040ರ ಹೊತ್ತಿಗೆ ಈಗಿರುವುದಕ್ಕಿಂತ ಶೇ.40ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.