ಎಳ್ಳು ಬಂಪರ್ ಇಳುವರಿಗೆ ಬಂಪರ್ ಬೆಲೆ ನಿರೀಕ್ಷೆ..!
Team Udayavani, Aug 23, 2021, 10:51 AM IST
ಕುಷ್ಟಗಿ (ಕೊಪ್ಪಳ ) : ಮುಂಗಾರು ಹಂಗಾಮಿನ ಪ್ರತಿ ವರ್ಷ ಎಳ್ಳು ಬೆಳೆ ಒಂದಿಲ್ಲೊಂದು ರೋಗ, ಮಳೆ ಕೊರತೆಯಿಂದ ಬೆಳೆ ಅಷ್ಟಕಷ್ಟೇ ಇರುತ್ತಿತ್ತು. ಆದರೆ ಈ ಬಾರಿ ಉತ್ತಮ ಮಳೆ, ರೋಗ ರುಜಿನ ಸುಳಿಯದೇ ಇರುವುದು ಎಳ್ಳು ಬಂಪರ್ ಇಳುವರಿಗೆ ಬಂಪರ್ ಬೆಲೆ ನಿರೀಕ್ಷಿಸಲಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ, ಶೇಂಗಾ ಖಾದ್ಯ ತೈಲ ಬೆಲೆ ಹೆಚ್ಚಿದ್ದು, ಅದೇ ರೀತಿ ಎಳ್ಳು ಉತ್ಪನ್ನದ ಬೆಲೆ ಯಾವತ್ತಿಗೂ ಕಡಿಮೆ ಆಗಿಲ್ಲ. ಈ ಬಾರಿ ಮಳೆ ಹಾಗೂ ರೋಗ ರುಜಿನ ಕಡಿಮೆ ಹಿನ್ನೆಲೆಯಲ್ಲಿ ಸಮೃದ್ದ ಬೆಳೆ ನಿರೀಕ್ಷೆಯಲ್ಲಿ ಕಟಾವಿಗೆ ಮುಂದಾಗುವ ರೈತರಿಗೆ ಮಳೆ ಅಡಚಣೆಯಾಗಿದೆ. ಇನ್ನೂ ವಾರಂತ್ಯದಲ್ಲಿ ಕಡಾವು ಆಗುವ ಬೆಳೆಗೆ ಆಗಾಗ್ಗೆ ಹಿಂಗಾರು ಮಳೆ ಕಾಟ, ಕಟಾವಿಗೆ ಹಿನ್ನೆಡೆಗೆ ಕಾರಣವಾಗಿದೆ.
ಇದನ್ನೂ ಓದಿ : ಇಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ: ಗುಡಿಬಂಡೆ ತಾಲ್ಲೂಕಿಗಿಲ್ಲ ಸೂಕ್ತ ಸ್ಥಾನ ಮಾನ
ಕುಷ್ಟಗಿಯ ರೈತ ಹನಮಂತಪ್ಪ ಹಳ್ಳಿ ಕುಷ್ಟಗಿ ಸೀಮಾದಲ್ಲಿ 9 ಎಕರೆಯಲ್ಲಿ ಏಕ ಬೆಳೆ ಬೆಳೆದಿದ್ದಾರೆ. ಎರಡು ಸೇರು ಎಳ್ಳಿನ ಬಿತ್ತನೆ ಬಳಿಕ ಹದವರಿತ ಬೆಳೆಯಿಂದ ಇಳುವರಿ ಸಮೃದ್ಧ ಬೆಳೆಯಿಂದ ನಳನಳಿಸುತ್ತಿದೆ. ರೈತ ಹನಮಂತಪ್ಪ ಹಳ್ಳಿ ಅವರು ಕೃಷಿ ಇಲಾಖೆಯ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು ಸುಧಾರಿತ ದಾರವಾಡ ಎಸ್ ಎಸ್-ಎಂ ತಳಿ ಶಿಫಾರಸ್ಸು ಮೇರೆಗೆ ನಾಟಿ ಮಾಡಿದ್ದು ಅದೇ ಪ್ರಕಾರ ಬೆಳೆದಿದ್ದಾರೆ. ಈ ಜಮೀನಿನಲ್ಲಿ ಇದೇ ಬೆಳೆ ಮೊದಲಾಗಿದ್ದು ಈ ಬೆಳೆಯ ಬಿತ್ತನೆ ಪೂರ್ವದಲ್ಲಿ 17 ಗಾಡಿ ತಿಪ್ಪೆ ಗೊಬ್ಬರ ಹಾಕಿದ್ದರಿಂದ ಅಪಾರ ಬೆಳೆ ಬಂದಿದೆ.
ಬಿತ್ತನೆಯು ಸಹ ಅಚ್ಚುಕಟ್ಟಾಗಿದ್ದರಿಂದ ಸಾಲಿನಿಂದ ಸಾಲಿಗೆ 2 ಅಡಿ ಇದ್ದು ಸಾಕಷ್ಟು ಗಾಳಿ ಬೆಳಕಿನ ಅವಕಾಶ ಇರುವ ಹಿನ್ನೆಲೆಯಲ್ಲಿ ರೋಗ ರುಜಿನ ಬಾಧಿಸಿಲ್ಲ.ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬಿಳಿ ಎಳ್ಳು ಧಾರಣಿ 9 ಸಾವಿರಾರು ಇದೆ. ಈ ಉತ್ಪನ್ನ ಬೇಡಿಕೆಯಲ್ಲಿರುವುದರಿಂದ ಇನ್ನು ಬೆಲೆ ಹೆಚ್ಚು ಸಾದ್ಯತೆ ಇದೆ ಎನ್ನುವುದು ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರ ಮಾತು.
ಇದನ್ನೂ ಓದಿ : ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿ ಅಜೀಜುಲ್ಲಾ ಫಜ್ಲಿ ಮರು ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.