ಲಸಿಕೆಗೆ ಪರದಾಟ..ಖಾಸಗಿಯತ್ತ ನೋಟ


Team Udayavani, Aug 23, 2021, 2:11 PM IST

covid news

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಕೊರತೆಯೇಖಾಸಗಿ ಆಸ್ಪತ್ರೆಗಳಿಗೆ ವರವಾಗಿ ಪರಿಣಮಿಸಿದೆ. ಸದ್ಯ ರಾಜಧಾನಿಯಲಸಿಕೆ ಅಭಿಯಾನದಲ್ಲಿ ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಖಾಸಗಿ ಆಸ್ಪತ್ರೆಗಳೇ ಮುಂಚೂಣಿಯಲ್ಲಿವೆ. ದೇಶದಲ್ಲಿಯೇ ಅತಿಹೆಚ್ಚುಖಾಸಗಿ ಲಸಿಕಾಕೇಂದ್ರಗಳನ್ನು ಬೆಂಗಳೂರು ಹೊಂದಿದ್ದು, ಸರ್ಕಾರಿ ಲಸಿಕೆಕೇಂದ್ರಗಳಿಗಿಂತಲೂ ಇವುಗಳಸಂಖ್ಯೆಯೇ ಹೆಚ್ಚಿದೆ. ಈ ಅಂಶವೂ ದೇಶದಲ್ಲಿಯೇ ಅತಿ ವೇಗದ ಲಸಿಕೆ ಅಭಿಯಾನ ಬೆಂಗಳೂರಿನಲ್ಲಿ ನಡೆಯಲು ಪ್ರಮುಖಕಾರಣವಾಗಿದೆ.

ಆರಂಭದಲ್ಲಿಖಾಸಗಿ ಆಸ್ಪತ್ರೆಗಳು ಲಸಿಕೆ ಅಭಿಯಾನದಲ್ಲಿ ದಂಧೆ ನಡೆಸುತ್ತಿವೆ ಎಂಬ ಅಭಿಪ್ರಾಯವ್ಯಕ್ತವಾದರೂ, ನಗರದಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಮಂದಿಗೆ ಲಸಿಕೆ ನೀಡುವ ಮೂಲಕ ಪ್ರಮುಖಪಾತ್ರವಹಿಸಿವೆ.ಹೆಲ್ತ್‌ ಟೂರಿಸಂ ಹಬ್‌ ಆದ ಬೆಂಗಳೂರಿನ ಲಸಿಕೆ ಅಭಿಯಾನದಲ್ಲಿ ಸರ್ಕಾರಿ ಲಸಿಕೆಕೇಂದ್ರಗಳಿಗಾಗಿ ಪರದಾಟವೇಖಾಸಗಿಆಸ್ಪತ್ರೆಗಳತ್ತ ಜನರ ನೋಟ… ಇದಕ್ಕೆಕಾರಣವಾದ ಅಂಶಗಳ ಪತ್ತೆಗೆ ಈ ಬಾರಿ “ಸುತ್ತಾಟ’…

ಕೊರೊನಾ ಸೋಂಕಿನಿಂದ ರಕ್ಷಣೆಗೆ ಸದ್ಯಕೊರೊನಾ ಲಸಿಕೆಯೊಂದೇಬ್ರಹ್ಮಾಸ್ತ್ರ. ಶೀಘ್ರ ಹೆಚ್ಚು ಮಂದಿ ಲಸಿಕೆ ಪಡೆದಷ್ಟು ಮುಂಬರುವಅಲೆ ಆರ್ಭಟದಿಂದ ತಪ್ಪಿಸಿಕೊಳ್ಳಬಹುದು ಎಂದು ವೈದ್ಯಕೀಯಸಂಶೋಧನಾ ಸಂಸ್ಥೆಗಳು ಮತ್ತು ತಜ್ಞರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಲಸಿಕೆಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲು ಖಾಸಗಿ ಆಸ್ಪತ್ರೆಗಳಿಗೂಲಸಿಕೆ ವಿತರಿಸಲು ಅನುಮತಿ ನೀಡಲಾಯಿತು. ಆರಂಭದಲ್ಲಿ ಸರ್ಕಾರದಿಂದನೀಡಿದ ಲಸಿಕೆಯನ್ನು 250 ರೂ. ಸೇವಾ ಶುಲ್ಕ ಪಡೆದು ಲಸಿಕೆವಿತರಿಸಲಾಗುತ್ತಿತ್ತು. ಆದರೆ, ನಿಗದಿಗಿಂತ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆಎಂದು ತಿಂಗಳ ಮಟ್ಟಿಗೆ ಲಸಿಕೆ ಅಭಿಯಾನ ಸ್ಥಗಿತಗೊಳಿಸಲಾಗಿತ್ತು.

ನಂತರಮತ್ತೆ ಅಭಿಯಾನಕ್ಕೆ ವೇಗ ನೀಡಲು ಮತ್ತು ದಾಸ್ತಾನು ಕೊರತೆ ನೀಗಿಸಲುನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಖರೀದಿಸಿ ವಿತರಿಸಲು ಜುಲೈನಲ್ಲಿಅನುಮತಿ ನೀಡಲಾಯಿತು. ಅಲ್ಲದೆ, ಹಣ ವಸೂಲಿ ತಪ್ಪಿಸಲು ಕೊವಿಶೀಲ್ಡ್‌ಗೆ720 ರೂ.ಕೊವ್ಯಾಕ್ಸಿನ್‌ಗೆ1,410 ರೂ. ದರ ನಿಗದಿ ಮಾಡಲಾಯಿತು.ಇನ್ನೊಂದೆಡೆ ಉಚಿತ ಲಸಿಕೆ ನೀಡುತ್ತಿದ್ದ ಸರ್ಕಾರಿ ವಲಯದಲ್ಲಿ ತೀವ್ರದಾಸ್ತಾನು ಕೊರತೆ ಉಂಟಾಗಿ ಲಸಿಕೆಗೆ ಜನ ಪರದಾಡುತ್ತಿದ್ದರು.

ಈಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಬೆಂಗಳೂರಿನಲ್ಲಿಮೇಲುಗೈ ಸಾಧಿಸಿವೆ.ಶೇ.45 ರಷ್ಟು ಲಸಿಕೆ ಖಾಸಗಿಯಲ್ಲಿ ವಿತರಣೆ: ಜನವರಿ 16 ರಿಂದಇಲ್ಲಿಯವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 85 ಲಕ್ಷ ಡೋಸ್‌ನಷ್ಟುಕೊರೊನಾ ಲಸಿಕೆ ವಿತರಿಸಲಾಗಿದೆ. ಈ ಪೈಕಿ ಶೇ. 55 ರಷ್ಟು ಲಸಿಕೆಯನ್ನುಮಾತ್ರ ಬಿಬಿಎಂಪಿ ವಿತರಿಸಿದ್ದು, ಶೇ.45 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗಳುನೀಡಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯ ಲಸಿಕೆ ಅಭಿಯಾನದಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಖಾಸಗಿ ಪಾಲಿದೆ.

ಬೇಕಿರುವುದು 75ಸಾವಿರ, ಸಿಗುತ್ತಿರುವುದು30 ಸಾವಿರಕ್ಕಿಂ ಕಮ್ಮಿ

ನಿತ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷ ಡೋಸ್‌ಗೂ ಅಧಿಕ ಲಸಿಕೆ ಹಂಚುವ ಸಾಮರ್ಥಯವಿದೆ.ಅಲ್ಲದೆ, ಲಸಿಕಾಕೇಂದ್ರಗಳಿಂದ ನಿತ್ಯಕನಿಷ್ಠ75ಸಾವಿರ ಡೋಸ್‌ ಬೇಡಿಕೆ ಇರುತ್ತದೆ. ಆದರೆ, ಲಸಿಕೆದಾಸ್ತಾನುಕೊರತೆಯಿಂದಕನಿಷ್ಠ30 ಸಾವಿರಡೋಸ್‌ಕೂಡ ಬಿಬಿಎಂಪಿಗೆ ನೀಡಲಾಗುತ್ತಿದೆ.ಅದರಲ್ಲೂಕೆಲ ಆಸ್ಪತ್ರೆಗಳಿಗೆ ನಿತ್ಯ50 ಅಥವಾ 100ಡೋಸ್‌ ಮಾತ್ರ ಸಿಗುತ್ತಿದೆ. ಇನ್ನು300ಆಸುಪಾಸಿನಲ್ಲಿ ಲಸಿಕೆಕೇಂದ್ರಗಳನ್ನುಗುರುತಿಸಿದ್ದರು, ಅರ್ಧಷ್ಟುಕೇಂದ್ರಗಳು ನೋಸ್ಟಾಕ್‌ಬೋರ್ಡ್‌ ಹಾಕಿರುತ್ತವೆ. ಇದರಿಂದ ಖಾಸಗಿ ಕಡೆದಾರಿ ಸಾರ್ವಜನಿಕರಿಗೆ ಅನಿವಾರ್ಯವಾಗಿದೆ.

ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

19-

IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು

18-

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.