ಸುಸ್ಥಿರ ಪ್ರವಾಸೋದ್ಯಮವಾಗಿ ಕಾರ್ಕಳ ತಾಲೂಕು ಅಭಿವೃದ್ಧಿ : ಸಚಿವ ಸುನಿಲ್
Team Udayavani, Aug 23, 2021, 12:30 PM IST
ಕಾರ್ಕಳ : ತಾ|ನ ಪ್ರೇಕ್ಷಣೀಯ ಸ್ಥಳಗಳನ್ನು ಹಲವು ಆಯಾಮಗಳಲ್ಲಿ ಅಭಿವೃದ್ಧಿಗೊಳಿಸಿ ತಾಲೂಕನ್ನು ಸುಸ್ಥಿರ ಪ್ರವಾಸಿ ಕೇಂದ್ರವಾಗಿಸುವ ಚಿಂತನೆ ಇದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ಸರಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾರ್ಕಳ ಆನೆಕೆರೆ ಜೈನ ಬಸದಿ ಅಭಿವೃದ್ಧಿ, ಸಂಗೀತ ಕಾರಂಜಿ ನಿರ್ಮಾಣ, ಗ್ಯಾಲರಿ ನಿರ್ಮಾಣ ಹೀಗೆ 2 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮಕ್ಕೆ ಪೂರಕವಾದ ವ್ಯವಸ್ಥೆಗಳು ತಾಲೂಕಿನಲ್ಲಿವೆ. ಬಸದಿಗಳು, ಗೋಮಟೇಶ್ವರ, ಚತುರ್ಮುಖ ಬಸದಿ, ವರಂಗ ಕೆರೆ ಬಸದಿ, ಅನಂತಶಯನ, ವೆಂಕಟ್ರಮಣ ದೇವಸ್ಥಾನ ಇವುಗಳು ಟೆಂಪಲ್ ಟೂರಿಸಂಗೆ ಪೂರಕವಾಗಿದೆ. ಇನ್ನು ಮೇಗದ್ದೆಯ ಕೂಡ್ಲು ಫಾಲ್ಸ್, ಕವಿ ಮುದ್ದಣನ ಕ್ಷೇತ್ರ ಹೀಗೆ ಟೂರಿಸಂಗೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆ. ಹೊರಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಕಾರ್ಕಳಕ್ಕೆ ಬಂದಾಗ ಒಂದೆರಡು ದಿನಗಳು ಇದ್ದು ಸುತ್ತಾಡಿ ಹೋಗುವ ರೀತಿಯಲ್ಲಿ ಹತ್ತಾರು ಆಯಾಮಗಳ ಚಿಂತನೆಯಿಂದ ವ್ಯವಸ್ಥೆಗಳನ್ನು ರೂಪಿಸಲಾಗುವುದು. ಕೋಟಿ ಚೆನ್ನಯ ಥೀಂ ಪಾರ್ಕ್, ಬೈಲೂರಿನಲ್ಲಿ ಪರಶುರಾಮ ಕೇಂದ್ರ ಹೀಗೆ ಎಲ್ಲ ದೃಷ್ಟಿಯಿಂದಲೂ ತಾಲೂಕು ಪ್ರವಾಸಿ ಕೇಂದ್ರವಾಗಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಇದನ್ನೂ ಓದಿ :ನೇಣು ಬಿಗಿದ ಸ್ಥಿತಿಯಲ್ಲಿ ‘ಕಾಂಚನಾ-3’ ನಟಿ ಶವ ಪತ್ತೆ
ಆನೆಕೆರೆ ಚತುಷ್ಪಥ ರಸ್ತೆ ನಿರ್ಮಾಣ
ಆನೆಕೆರೆ ಹೂಳೆತ್ತುವ ಬೇಡಿಕೆಯಿದೆ. ಅದಕ್ಕೂ ಮೊದಲು ಮಸೀದಿ ಹತ್ತಿರದಿಂದ ರಂಗನಾಥ ಕೆಫೆ ತನಕದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿದೆ. ರಸ್ತೆ ಹಾದುಹೋಗುವ ಪ್ರದೇಶಗಳ ಖಾಸಗಿ ಭೂಮಾಲಕರ ಜತೆ ಮಾತುಕತೆ ನಡೆಯುತ್ತಿದೆ. ಎರಡು ಮನೆಗಳ ಸ್ಥಳಾಂತರ ಪ್ರಕ್ರಿಯೆ ಮುಗಿದ ಬಳಿಕ ಆನೆಕೆರೆಗೆ ತಡೆಗೋಡೆ ಕಟ್ಟಿ ಹೂಳೆತ್ತಿ ಶಾಶ್ವತವನ್ನಾಗಿಸಲಾಗುವುದು ಎಂದರು.
2 ಕೆರೆ ಅಭಿವೃದ್ಧಿ
ಸಾಣೂರಿನ ಮಠದ ಕೆರೆ ಮತ್ತು ರಾಮಸಮುದ್ರ ಅಭಿವೃದ್ಧಿಯನ್ನು ಈ ವರ್ಷ ಕೈಗೆತ್ತಿಕೊಳ್ಳುತ್ತಿದ್ದೇವೆ. ಜನವರಿಯೊಳಗೆ ಎರಡೂ ಕೆರೆಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಅದರೊಂದಿ ಗೆ ಕಾರಂಜಿ, ಗ್ಯಾಲರಿ ಕೆಲಸಗಳು ವೇಗವಾಗಿ ನಡೆಯಬೇಕು. ಬಸದಿ ಕಾರ್ಯ ನಿಧಾನವಾಗದಂತೆ ನೋಡಿಕೊಳ್ಳಬೇಕಿದೆ. ಸರಕಾರದಿಂದ ಬಸದಿಗೆ 50 ಲಕ್ಷ ರೂ. ತಡೆಗೋಡೆಗೆ 1 ಕೋ.ರೂ. ನೀಡಲಾಗಿದೆ. ಮುಂದಿನ ಜೀರ್ಣೋದ್ಧಾರ ಕೆಲಸಗಳಿಗೆ ಸಮಾಜದ ಬಂಧುಗಳು ಸಹಕರಿಸಬೇಕು ಎಂದರು.
ಕಾರ್ಕಳದ ಜೈನ ಮಠದ ರಾಜಗುರು ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಏಕಭಾವನೆಯಿಂದ ಕಾರ್ಯಗಳು ನಡೆದಾಗ ಎಲ್ಲ ಸತ್ಕಾರ್ಯಗಳು ಈಡೇರುತ್ತವೆ ಎಂದರು. ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಕೆಆರ್‌ಐಡಿ ಅಧಿಕಾರಿ ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ರೂಪಾ ಡಿ.ಶೆಟ್ಟಿ ಉಪಸ್ಥಿತರಿದ್ದರು. ಗುಣಪಾಲ ಕಡಂಬಳ ಕಾರ್ಯಕ್ರಮ ನಿರ್ವಹಿಸಿದರು. ಗಣ್ಯರು ಉಪಸ್ಥಿತರಿದ್ದರು.
ಗ್ಯಾಲರಿ, ಸಂಗೀತ ಕಾರಂಜಿ
ಬಸದಿಯ ಜೀರ್ಣೋದ್ಧಾರ ಮತ್ತು ಪ್ರವಾಸಿಗರಿಗೆ ಕೆರೆಯನ್ನು ನೋಡಲು ಒಂದೊಳ್ಳೆ ಗ್ಯಾಲರಿಯ ಆವಶ್ಯಕತೆಯಿದೆ ಮತ್ತು ಸಂಜೆ 1 ತಾಸು ಪ್ರವಾಸಿಗರ ಇರುವಿಕೆಯನ್ನು ನೋಡಿಕೊಂಡು ಪ್ರತಿದಿನ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದೆ. ಬಸದಿಯ ಜೀರ್ಣೋದ್ಧಾರ ಕಾರ್ಯಗಳು ಬೇಗ ಪೂರ್ಣಗೊಂಡರೆ ಉಳಿದೆಲ್ಲ ಕಾರ್ಯಗಳು ತ್ವರಿತವಾಗಿ ನಡೆಸಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ 2 ಕೋ.ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದೇನೆ ಸುನಿಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.