ತಾಲಿಬಾಬ್ V/S ಪಂಜ್ ಶೀರ್ ಕದನ: ಪಂಜ್ ಶೀರ್ ಪ್ರವೇಶಿಸಲು ತಾಲಿಬಾನ್ ಉಗ್ರರ ಹರಸಾಹಸ?

ನಾಲ್ಕು ದಶಕಗಳ ಕಾಲ ತಾಲಿಬಾನ್ ಬಂಡುಕೋರರಿಗೆ ಪಂಜ್ ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿಲ್ಲವಾಗಿತ್ತು.

Team Udayavani, Aug 23, 2021, 6:23 PM IST

ತಾಲಿಬಾಬ್ V/S ಪಂಜ್ ಶೀರ್ ಕದನ: ಪಂಜ್ ಶೀರ್ ಪ್ರವೇಶಿಸಲು ತಾಲಿಬಾನ್ ಉಗ್ರರ ಹರಸಾಹಸ?

ಕಾಬೂಲ್: ತಾಲಿಬಾಬ್ ಉಗ್ರರ ವಿರುದ್ಧ ತೀವ್ರ ಪ್ರತಿರೋಧ ತೋರಿದ್ದ ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಉಗ್ರರು ಲಗ್ಗೆ ಇಟ್ಟಿದ್ದಾರೆ. ಆದರೆ ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆಯ ವಿಶ್ಲೇಷಣೆ ಪ್ರಕಾರ, ತಾಲಿಬಾನ್ ಉಗ್ರರು ಪಂಜ್ ಶೀರ್ ಮೇಲೆ ದಾಳಿ ನಡೆಸಲು ಹರಸಾಹಸ ಪಡುತ್ತಿರುವುದಾಗಿ ವರದಿಯಾಗಿದೆ.

ಕಾಬೂಲ್ ನ ಉತ್ತರ ಹಿಂದು ಕುಶ್ ಪ್ರದೇಶದಲ್ಲಿ ಬೃಹತ್ ಬಂಡೆಗಳಿಂದ ಆವೃತ್ತವಾಗಿರುವ ಪಂಜ್ ಶೀರ್ ಪ್ರಾಂತ್ಯದೊಳಕ್ಕೆ ನುಗ್ಗಿ ದಾಳಿ ನಡೆಸುವುದು ತಾಲಿಬಾನ್ ಉಗ್ರರಿಗೂ ಸವಾಲಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಉಗ್ರರು ಪಂಜ್ ಶೀರ್ ಬಳಿ ಬೀಡುಬಿಟ್ಟಿದ್ದಾರೆನ್ನಲಾಗಿದೆ.

ಪಂಜ್ ಶೀರ್ ಜನರು ಶರಣಾಗಬೇಕು ಎಂಬುದು ತಾಲಿಬಾನ್ ಉಗ್ರರ ಆಗ್ರಹವಾಗಿದೆ. ಏತನ್ಮಧ್ಯೆ ಪಂಜ್ ಶೀರ್ ಜನರಿಗೆ ಅಫ್ಘಾನ್ ಸೇನೆ, ವಿದೇಶಿ ಪಡೆಗಳು ಸಹಕಾರ ನೀಡಿರುವುದಾಗಿ ವರದಿ ತಿಳಿಸಿದೆ. ಮಿಲಿಟರಿ ದಂತಕಥೆ ಕಮಾಂಡರ್ ದಿ. ಅಹ್ಮದ್ ಶಾ ಮಸೌದ್ ಕಳೆದ ನಾಲ್ಕು ದಶಕಗಳ ಕಾಲ ತಾಲಿಬಾನ್ ಬಂಡುಕೋರರಿಗೆ ಪಂಜ್ ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿಲ್ಲವಾಗಿತ್ತು.

ತಾಲಿಬಾನ್ ಉಗ್ರರ ಹಿಡಿತ ಅಫ್ಘಾನಿಸ್ತಾನದಲ್ಲಿ ಬಿಗಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಮತ್ತು ಅಹ್ಮದ್ ಶಾ ಮಸೌದ್ ಪುತ್ರ ಅಹ್ಮದ್ ಮಸೌದ್ ಅವರನ್ನು ನಿರಾಶ್ರಿತರ ಶಿಬಿರದಲ್ಲಿ ಇಡಲಾಗಿದೆ ಎಂದು ವರದಿ ಹೇಳಿದೆ.

ಪಂಜ್ ಶೀರ್ ಪ್ರಾಂತ್ಯವನ್ನು ಸುತ್ತುವರಿದು ಲಾಕ್ ಡೌನ್ ಮಾಡೋದು ತಾಲಿಬಾನ್ ಉಗ್ರರ ಉದ್ದೇಶವಾಗಿದ್ದು, ಇನ್ನೂ ಪಂಜ್ ಶೀರ್ ಒಳಗೆ ಲಗ್ಗೆ ಇಟ್ಟಿಲ್ಲ. ಈಗಾಗಲೇ ತಾಲಿಬಾನ್ ಪಂಜ್ ಶೀರ್ ಪ್ರಾಂತ್ಯವನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದಿದೆ. ಆದರೆ ಈ ಬಾರಿ ಮಸೌದ್ ಹಾಗೂ ಬೆಂಬಲಿಗರಿಗೆ ತಾಲಿಬಾನ್ ಅನ್ನು ಪ್ರಬಲವಾಗಿ ವಿರೋಧಿಸುವ ಸಾಧ್ಯತೆ ಕಡಿಮೆ ಇದ್ದು, ಅವರಿಗೆ ಹೆಚ್ಚಿನ ಬೆಂಬಲದ ಕೊರತೆಯೂ ಇದ್ದಿರುವುದಾಗಿ ಅಬ್ದುಲ್ ಸೈಯದ್ ಎಎಫ್ ಪಿಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’-ಗೀತಾ ಸಂದೇಶ

Brahmavar: ಕೆರೆಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ.

Brahmavar: ಕೆರೆಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ.

Siddapura: ಸ್ಕಾರ್ಪಿಯೋದಲ್ಲಿ ಸಾಗಿಸುತ್ತಿದ್ದ ಐದು ಜಾನುವಾರು ರಕ್ಷಣೆ

Siddapura: ಸ್ಕಾರ್ಪಿಯೋದಲ್ಲಿ ಸಾಗಿಸುತ್ತಿದ್ದ ಐದು ಜಾನುವಾರು ರಕ್ಷಣೆ

ಡಿವೈಡರ್‌ ಏರಿ ಬಂದು ಕಾರಿಗೆ ಢಿಕ್ಕಿ ಬಾಲಕಿ ಸೇರಿ ಮೂವರಿಗೆ ಗಾಯ

Padubidri: ಡಿವೈಡರ್‌ ಏರಿ ಬಂದು ಕಾರಿಗೆ ಢಿಕ್ಕಿ ಬಾಲಕಿ ಸೇರಿ ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Trump ಗೆದ್ದ ಬೆನ್ನಲ್ಲೇ ಎಲಾನ್‌ ಮಸ್ಕ್ ಆಸ್ತಿ 24 ಲಕ್ಷ ಕೋಟಿಗೇರಿಕೆ!

canada

Canada; ಖಲಿಸ್ಥಾನಿಗಳ ಇರುವಿಕೆ ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರಾಡೋ

1-d-tt

Donald Trump ಗೆದ್ದಿದ್ದಕ್ಕೆ ಮದ್ವೆ ಆಗಲ್ಲ, ಮಕ್ಕಳ ಹೆರಲ್ಲ:ಸ್ತ್ರೀಯರ ಪ್ರತಿಜ್ಞೆ

1-mull

City Lockdown; ಮುಲ್ತಾನ್‌ ದಾಖಲೆಯ ಮಾಲಿನ್ಯ: ನಗರ ಲಾಕ್‌ಡೌನ್‌!

Pakistan: ರೈಲು ನಿಲ್ದಾಣದಲ್ಲಿ ಭೀಕರ ಸ್ಫೋಟ… 20 ಮಂದಿ ಮೃ*ತ್ಯು, 30 ಮಂದಿಗೆ ಗಾಯ

Pakistan: ರೈಲು ನಿಲ್ದಾಣದಲ್ಲಿ ಭೀಕರ ಸ್ಫೋಟ… 20 ಮಂದಿ ಮೃ*ತ್ಯು, 30 ಮಂದಿಗೆ ಗಾಯ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’

Udupi: ಗೀತಾರ್ಥ ಚಿಂತನೆ 90-“ನಿನ್ನ ನೀ ಸರಿ ಮಾಡಿಕೋ’-ಗೀತಾ ಸಂದೇಶ

Hockey

Hockey; ವನಿತಾ ಏಷ್ಯಾ ಚಾಂಪಿಯನ್ಸ್‌ ಟ್ರೋಫಿ: ಭಾರತಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.