ಜಿಲ್ಲಾಸ್ಪತ್ರೆ ನವೀಕರಣ, ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯೂ ಹೆಚ್ಚಳ
Team Udayavani, Aug 23, 2021, 6:42 PM IST
ಮೈಸೂರು: ವೈದ್ಯಕೀಯ ಲೋಕಕ್ಕೆ ಸವಾಲಾಗಿರುವಕೋವಿಡ್-19 ಸೋಂಕು ಇಂದಿಗೂ ಜನರನ್ನುಇನ್ನಿಲ್ಲದಂತೆ ಬಾಧಿಸುತ್ತಿರುವುದು ಒಂದೆಡೆಯಾದರೆ, ಪರೋಕ್ಷವಾಗಿ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯಸುಧಾರಣೆಗೆ ಮೂಲ ಕಾರಣವಾಗಿದೆ.
ಗ್ರಾಮೀಣ ಭಾಗದ ತಾಲೂಕು ಆಸ್ಪತ್ರೆ ಸೇರಿನಗರದಲ್ಲಿದ್ದ ಪ್ರಮುಖ ಆಸ್ಪತ್ರೆಗಳಲ್ಲಿ ಇದ್ದ ಬೆರಳೆಣಿಕೆಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್‌ಕೋವಿಡ್‌ನಂತರ ಎರಡಂಕಿ ದಾಟಿದೆ. ಜತೆಗೆ ಆಸ್ಪತ್ರೆಆವರಣಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಿ,ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ವ್ಯವಸ್ಥೆಕಲ್ಪಿಸುವ ಮೂಲಕ ವೈದ್ಯಕೀಯಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆಕೊರೊನಾ ಸೋಂಕುಕಾರಣವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿದೆ ಎಲ್ಲಾ ಸೌಲಭ್ಯ:2 ವರ್ಷಗಳಹಿಂದೆ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯ ಸರ್ಕಾರದಿಂದ319ಎಲ್‌ಪಿಎಂ ಸಾಮರ್ಥ್ಯದ ಹಾಗೂ ಕೇಂದ್ರಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ1ಸಾವಿರ ಎಲ್‌ಪಿಎಂ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್‌ಜನರೇಷನ್ ಪ್ಲಾಂಟ್ ನಿರ್ಮಾಣವಾಗಿದ್ದು,ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗದಂತೆಮಾಡಲಾಗಿದೆ. ಜತೆಗೆ49 ವೆಂಟಿಲೇಟರ್ ಹಾಸಿಗೆಸೌಲಭ್ಯ, 310 ಆಕ್ಸಿಜನ್ ಹಾಸಿಗೆ ಸೌಲಭ್ಯವನ್ನುಜಿಲ್ಲಾಸ್ಪತ್ರೆಒಳಗೊಂಡಿದೆ.
ಸರ್ಕಾರದ ಕಣ್ತೆರೆಸಿದ ವೈರಾಣು:ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತಸಂದರ್ಭದಲ್ಲಿ ವೆಂಟಿಲೇಟರ್,ಆಕ್ಸಿಜನ್ ಇಲ್ಲದೆಮೃತಪಡುವವರ ಸಂಖ್ಯೆಹೆಚ್ಚಾಗುತ್ತಿತ್ತು. ತಾಲೂಕುಆಸ್ಪತ್ರೆಗಳಲ್ಲಿವೆಂಟಿಲೇಟರ್‌ನೀಡುವಂತೆವೈದ್ಯಾಧಿಕಾರಿಗಳುಆಗಾಗ ಸರ್ಕಾರದಗಮನಕ್ಕೆ ತಂದರೂಯಾವ ಸರ್ಕಾರವೂಈವರೆಗೆ ಕಾರ್ಯರೂಪಕ್ಕೆತಂದಿರಲಿಲ್ಲ. ಆದರೆ, ಈಗವಿಶ್ವವ್ಯಾಪಿ ತನ್ನಕಬಂಧಬಾಹುವಿಸ್ತರಿಸಿರುವಕೊರೊನಾವೈರಾಣು ಸರ್ಕಾರವನ್ನೇ ಬೆಚ್ಚಿ ಬೀಳಿಸಿರುವುದರಿಂದನಗರ ಸೇರಿ ಎಲ್ಲಾ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲೂವೆಂಟಿಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳವ್ಯವಸ್ಥೆಯ ಜತೆಗೆ ಆಕ್ಸಿಜನ್ ಪ್ಲಾಂಟ್ ಲಭ್ಯವಾಗುವಂತೆಮಾಡಿದೆ. ಇದುಕೊರೊನಾ ಸೋಂಕಿತರ ಚಿಕಿತ್ಸೆಗಲ್ಲದೇ, ಭವಿಷ್ಯಕ್ಕೂ ಸಹಕಾರಿ ಎಂದು ವೈದ್ಯರುಹೇಳುತ್ತಾರೆ.
ಸಿಬ್ಬಂದಿ ಕೊರತೆ ತಾತ್ಕಾಲಿಕವಾಗಿ ಶಮನ:ಜಿಲ್ಲಾದ್ಯಂತ ಗ್ರಾಮೀಣಪ್ರದೇಶದ ಪಿಎಚ್‌ಸಿ ಸೇರಿತಾಲೂಕು ಹಾಗೂ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಕರು, ವೈದ್ಯರು, ನರ್ಸ್, ಫಾರ್ಮಾಸಿಸ್ಟ್ ಹಾಗೂಗ್ರೂಪ್‌ಡಿನೌಕರರಕೊರತೆ ಎದ್ದುಕಾಣುತ್ತಿತ್ತು.ಆದರೆ, ಕೊರೊನಾ ನಂತರ ಎಲ್ಲಾ ಆಸ್ಪತ್ರೆ ಗಳಲ್ಲೂಗುತ್ತಿಗೆ ಆಧಾರದಲ್ಲಿ ವೈದ್ಯರು, ನರ್ಸ್, ಫಾರ್ಮಾಸಿಸ್ಟ್‌ಹಾಗೂ ಗ್ರೂಪ್ ಡಿ ನೌಕರರನ್ನು ನೇಮಕಮಾಡಿಕೊಳ್ಳಲಾಗಿದೆ. ಈ ಮೂಲಕ ಆಸ್ಪತ್ರೆಗಳಲ್ಲಿನಸಿಬ್ಬಂದಿ ಸಮಸ್ಯೆ ತಾತ್ಕಾಲಿಕವಾಗಿಶಮನವಾದಂತಾಗಿದೆ.
ಸುಧಾರಣೆ ಕಂಡ ಕೆ.ಆರ್.ಆಸ್ಪತ್ರೆ
ಮೈಸೂರು ಸೇರಿ ಪಕ್ಕದ ಮಂಡ್ಯ, ಚಾ.ನಗರ, ಹಾಸನ, ಕೊಡುಗುಜಿಲ್ಲೆಯ ಜನರಿಗೆ ಸಂಜೀವಿನಿಯಾಗಿದ್ದ ಹಾಗೂ ಮಹಾರಾಜರಿಂದನಿರ್ಮಾಣಗೊಂಡಿದ್ದ ಕೃಷ್ಣರಾಜ ಆಸ್ಪತ್ರೆ ಹಲವು ವರ್ಷಗಳಿಂದ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿಂದ ಬಳಲಿತ್ತು. ಆದರೆಒಂದೂವರೆ ವರ್ಷದ ಹಿಂದೆ ಕಾಣಿಸಿಕೊಂಡ ಕೊರೊನಾ ಕಾಯಿಲೆಯಿಂದ ಇಡೀ ಆಸ್ಪತ್ರೆ ಹಣೆಬರಹವೇ ಬದಲಾಗಿದೆ.
ಈ ಹಿಂದೆ 30ರಷ್ಟಿದ್ದ ವೆಂಟಿಲೇಟರ್‌ಗಳು ಇಂದು ನೂರರ ಗಡಿ ದಾಟಿದೆ. ಜತೆಗೆ 250 ಆಕ್ಸಿಜನ್ ಹಾಸಿಗೆಯಿಂದ 900ಕ್ಕೆ ಏರಿಕೆಯಾಗಿರುವುದು ವಿಶೇಷ. ಶತಮಾನ ಪೂರೈಸಿದದೊಡ್ಡಾಸ್ಪತ್ರೆಯಲ್ಲಿ ಈ ಹಿಂದೆ ಒಂದೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಿರಲಿಲ್ಲ. ಕೊರೊನಾ ಬಂದ ಬಳಿಕ ಸದ್ಯಕ್ಕೆ 13 ಕೆ.ಎಲ್.ಸಾಮರ್ಥ್ಯದ 2ಪ್ಲಾಂಟ್ ನಿರ್ಮಾಣವಾಗಿದ್ದರೆ, ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್‌ಉತ್ಪಾದಿಸುವ ಆಕ್ಸಿಜನ್ ಜನರೇಟರ್ ಅಳವಡಿಸಲಾಗಿದೆ.
ಹಾಗೆಯೇ ಮೈಸೂರು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಒಳಪಡುವ ಪಿಕೆಟಿಬಿ, ಟ್ರಾಮಾಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ, ಚೆಲುವಾಂಬ ಆಸ್ಪತ್ರೆಗಳಲ್ಲಿಆಕ್ಸಿಜನ್ ಪ್ಲಾಂಟ್ ಮತ್ತು ಜನರೇಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.