ರಾಮನಗರ ಜಿಲ್ಲೆಗೆ 15ನೇ ವರ್ಷದ ಸಂಭ್ರಮ
Team Udayavani, Aug 23, 2021, 9:15 PM IST
ರಾಮನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಭಾಗವಾಗಿದ್ದ ರಾಮನಗರ, ಚನ್ನಪಟ್ಟಣ, ಮಾಗಡಿಮತ್ತುಕನಕಪುರ ತಾಲೂಕುಗಳನ್ನುಬೇರ್ಪಡಿಸಿ,ರಾಮನಗರ ಜಿಲ್ಲೆಯನ್ನು ಆಗಸ್ಟ್ 23,2007ರಂದು ರಾಜ್ಯದ 28ನೇ ಜಿಲ್ಲೆಯಾಗಿರಚಿಸಲಾಗಿದೆ. ಇಂದು ಜಿಲ್ಲೆ 15ನೇವರ್ಷಕ್ಕೆಕಾಲಿಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಡಿಸಿ ಎಂದು ಯಾರು ಅರ್ಜಿಹಾಕಿರಲಿಲ್ಲ, ಊಹೆಯೂ ಮಾಡಿರಲಿಲ್ಲ.ಪರಿಣಾಮಕಾರಿ ಆಡಳಿತ ನೀಡುವ ಉದ್ದೇಶಕ್ಕಾಗಿಚಿಕ Rಚೊಕ್ಕ ಜಿÇಯ ೆÉ ನ್ನು ರಚಿಸಲಾಗಿದೆ ಎಂದು ಅಂದುಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಉದ್ದೇಶ ವ್ಯಕ್ತಪಡಿಸಿದ್ದರು.
ಸುಧಾರಣೆಯಾಗದ ಸಾಮಾನ್ಯನ ಬದುಕು:ಜಿಲ್ಲೆಯ ಆಡಳಿತಕ್ಕೆ ಅಗತ್ಯವಾಗಿಬೇಕಾದ ಕಚೇರಿಕಟ್ಟಡಗಳನ್ನುಜಿಲ್ಲೆಘೋಷಣೆ ಸಂದರ್ಭದಲ್ಲೇಕಂದಾಯ ಭವನ, ಪೊಲೀಸ್ ಭವನ, ಜಿಲ್ಲಾಪಂಚಾಯ್ತಿ ಭವನ, ಜಿಲ್ಲಾ ಕಚೇರಿಗಳಸಂಕಿರ್ಣ (ಡೀಸಿ ಕಚೇರಿ) ಕಟ್ಟಡಗಳುನಿರ್ಮಾಣವಾಗಿವೆ. ಪರಿಣಾಮಕಾರಿಆಡಳಿತ ನಿರೀಕ್ಷಿಸಿದ ಜಿಲ್ಲೆಯ ನಾಗರಿಕರಿಗೆಅಷ್ಟೇನು ಸಮಾಧಾನ ತಂದಿಲ್ಲ. ಕಾರಣಸರ್ಕಾರಿ ಕಚೇರಿಗಳಲ್ಲಿ ಸುಧಾರಿಸದ ಆಡಳಿತವ್ಯವಸ್ಥೆ, ವಿಳಂಬ ಧೋರಣೆ, ಭ್ರಷ್ಟಾಚಾರದವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿಅಧಿಕಾರಿಗಳಿಗೆ ಭವ್ಯವಾದ ಕಚೇರಿ ಸಿಕ್ಕಿತಾದರೂಜನಸಾಮಾನ್ಯರ ಬದುಕು ಮಾತ್ರ ಸುಧಾರಣೆಯಾಗಲಿಲ್ಲಎಂಬ ನೋವು ಜನಸಾಮಾನ್ಯರಲ್ಲಿ ವ್ಯಕ್ತವಾಗಿದೆ.
ಬರ ಕಾಡಿದ್ದೇ ಹೆಚ್ಚು!: ಕಳೆದ 15 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಾಡಿದ್ದೇ ಹೆಚ್ಚು. 2017ರಲ್ಲಿ ಜಿಲ್ಲೆದಶಕಕಂಡಾಗ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಸೂತಕದ ಛಾಯೆಯಿಂದ ಜಿಲ್ಲೆ ಹೊರಬಂದಿರಲಿಲ್ಲ. ಬರ ಪರಿಸ್ಥಿತಿಯನ್ನು ಶಾಶ್ವತವಾಗಿ ಅಳಸಿಹಾಕಲು ನೀರಾವರಿ ಯೋಜನೆಗಳು ಸಾಕಾರವಾಗಿಲ್ಲ.ಶ್ರೀರಂಗ ಯೋಜನೆ ಇನ್ನು ಪೂರ್ಣಗೊಂಡಿಲ್ಲ.ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ. ಕೆರೆತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ರಾಮನಗರನಗರಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಪೂರ್ಣಗೊಳ್ಳಬೇಕಾಗಿದೆ.
ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ: ರಾಜೀವ್‌ಗಾಂಧಿ ವಿವಿ ಕಟ್ಟಡ, ಆರೋಗ್ಯ ನಗರ ಇನ್ನು ಸಾಕಾರವಾಗಿಲ್ಲ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗೂ ಬೆಂಗಳೂರಿಗೆ ಹೋಗಬೇಕಿದ್ದ ಜಿಲ್ಲೆಯ ಜನರಿಗೆಕಳೆದ5 ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆಗಮನಿಸಿದ್ದಾರೆ. ವಿವಿಧ ತಜ್ಞ ವೈದ್ಯರೊಂದಿಗೆ ಖಾಸಗಿಆಸ್ಪತ್ರೆಗಳು ತಲೆ ಎತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿಯೂಸಾಕಷ್ಟು ಸುಧಾರಣೆಯಾಗಿದೆ.
ಕೋವಿಡ್ ಸೋಂಕುಕಲಿಸಿದ ಪಾಠಕ್ಕೆ ಜಿಲ್ಲಾಡಳಿತ ಆರೋಗ್ಯ ಕ್ಷೇತ್ರವನ್ನುಗಂಭೀರವಾಗಿ ಪರಿಗಣಿಸಿದೆ.60ಕೋಟಿ ರೂ. ವೆಚ್ಚದಜಿಲ್ಲಾಸ್ಪತ್ರೆಯಲ್ಲಿ ಸದ್ಯಕ್ಕೆ ಕೋವಿಡ್ ಚಿಕಿತ್ಸೆಗೆ ಆದ್ಯತೆದೊರೆಯುತ್ತಿದೆ. ಕಂದಾಯ ಇಲಾಖೆಯ ಕಚೇರಿಗಳು ಇರಬೇಕಾದ್ದ ಕಂದಾಯ ಭವನ ಆಸ್ಪತ್ರೆಯಾಗಿಪರಿವರ್ತನೆಯಾಗುವ ಎಲ್ಲಾ ಲಕ್ಷಣಗಳು ಇವೆ.ಭರವಸೆ ಮೂಡಿಸುವ ಯೋಜನೆ: ರಾಮನಗರ ಜಿಲ್ಲೆರೇಷ್ಮೆಗೆಖ್ಯಾತಿ ಪಡೆದುಕೊಂಡಿದೆ. ರಾಮನಗರದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆ ವಹಿವಾಟಿಗೆ ತಕ್ಕಂತೆ ವಿಶಾಲವಾಗಿ ಇಲ್ಲದಿರುವ ಕಾರಣ ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆಸರ್ಕಾರ ಮುಂದಾಗಿದೆ. ಚನ್ನಪಟ್ಟಣದ ಬೈರಾಪಟ್ಟಣದಬಳಿ ಮಾವು ಸಂಸ್ಕರಣಾ ಘಟಕವನ್ನು ಉದ್ದೇಶಿಸಲಾಗಿದೆ.ಕನಕಪು ರದಲ್ಲಿ ಮೇಘಾ ಡೇರಿ ಮತ್ತು ಚನ್ನಪಟ್ಟಣದಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಯಾಗಿದ್ದು, ಜಿಲ್ಲೆಯಲ್ಲಿಹೈನೋದ್ಯಮಕ್ಕೆ ಪೂರಕವಾಗಿದೆ.
ಬೆಂಗಳೂರು ನಗರದ ಕಲ್ಮಶವನ್ನು ಹೊತ್ತುತರುತ್ತಿರುವ ವೃಷಭಾವತಿ ನದಿನೀರಿನ ಶುದ್ಧೀಕರಣಕ್ಕಾಗಿಬಿಬಿಎಂಪಿ ಮತ್ತು ಸರ್ಕಾರ ಸಂಸ್ಕರಣಾ ಘಟಕಗಳನ್ನುಸ್ಥಾಪಿಸುತ್ತಿವೆ. ಬಿಡದಿ ಹೋಬಳಿ ಬೈರಮಂಗಲ ಜಲಾಶಯ ಸುಧಾರಣೆಗೆ ಕಾಮಗಾರಿಪ್ರಗತಿಯಲ್ಲಿದೆ.ಬಿಡದಿಕೈಗಾರಿಕಾ ಪ್ರದೇಶ ವಿಶ್ವದ ಗಮನ ಸೆಳೆದಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ವಿಸ್ತೀರ್ಣಕ್ಕೆ ಸರ್ಕಾರಮುಂದಾಗಿದೆ. ಇವೆಲ್ಲ ಜಿಲ್ಲೆಯ ಆರ್ಥಿಕತೆ ಮತ್ತುಔದ್ಯೋಗಿಕತೆ ಪೂರಕ ಎಂಬ ಭರವಸೆ ಮೂಡಿಸಿವೆ.
ಇನ್ನೂ ನೀಗದ ಕೊರತೆಗಳು: ಜಿಲ್ಲಾ ಕೇಂದ್ರಕ್ಕೆತಕ್ಕದಾಗುವಂತೆ ಸುಸಜ್ಜಿತ ಮಾರುಕಟ್ಟೆ, ಬಸ್‌ನಿಲ್ದಾಣದ ಕೊರತೆ ಇನ್ನೂ ನೀಗಿಲ್ಲ.ಕನ್ನಡ ಭವನ, ರೈತಭವನ, ವಾರ್ತಾ ಭವನ, ಸುಸಜ್ಜಿತ ರಂಗ ಮಂದಿರದಅವಶ್ಯವಿದೆ. ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಜಿಲ್ಲಾಕ್ರೀಡಾಂಗಣ ಎಂಬ ಲೇಬಲ್ ಮೆತ್ತಿಕೊಂಡಿದೆ.ಜಿಲ್ಲೆಯ ಯಾವ ತಾಲೂಕಿನಲ್ಲೂ ವೈಜಾnನಿಕತ್ಯಾಜ್ಯಲೇವಾರಿಘಟಕಗಳು ಇಲ್ಲ. ನೀರಾವರಿ ಯೋಜನೆಗಳು ವೇಗ ಪಡೆದುಕೊಳ್ಳಬೇಕಾಗಿದೆ.
ಬಿ.ವಿ.ಸೂರ್ಯಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.