ಪ್ಯಾರಾಲಿಂಪಿಕ್ಸ್ : ಪದಕಗಳ ದಾಖಲೆ ಸ್ಥಾಪಿಸೀತೇ ಭಾರತ?
Team Udayavani, Aug 24, 2021, 8:00 AM IST
ಟೋಕಿಯೊ: ಟೋಕಿಯೋದಲ್ಲಿ ಅತ್ಯಧಿಕ 7 ಪದಕ ಗೆದ್ದು ಒಲಿಂಪಿಕ್ಸ್ ದಾಖಲೆ ಸ್ಥಾಪಿ ಸಿದ ಭಾರತವೀಗ ಮಂಗಳವಾರ ಆರಂಭವಾಗ ಲಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಪದಕಗಳ ದಾಖಲೆ ನಿರ್ಮಿಸೀತೇ ಎಂಬ ಕುತೂಹಲ, ನಿರೀಕ್ಷೆ ದೇಶದ ಕ್ರೀಡಾಭಿಮಾನಿಗಳದ್ದು.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಗರಿಷ್ಠ 54 ಕ್ರೀಡಾಪಟುಗಳನ್ನು ಕಳುಹಿಸಿರುವುದರಿಂದ ಪದಕಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದೀ ತೆಂಬುದೊಂದು ಲೆಕ್ಕಾಚಾರ. ಈ ಬಾರಿ 15 ಪದಕಗಳು ಭಾರತಕ್ಕೆ ಒಲಿಯಲಿವೆ, ಇದರಲ್ಲಿ 5 ಚಿನ್ನ ಎಂಬುದಾಗಿ ಚೆಫ್ ಡಿ ಮಿಷನ್ ಗುರುಶರಣ್ ಸಿಂಗ್ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಇದು ಅಸಾಧ್ಯವೇನೂ ಅಲ್ಲ.
ರಿಯೋದಲ್ಲಿ ಬಂಗಾರ ಗೆದ್ದ ದೇವೇಂದ್ರ ಜಜಾರಿಯಾ (ಜಾವೆಲಿನ್) ಮತ್ತು ಮರಿ ಯಪ್ಪನ್ ತಂಗವೇಲು (ಹೈಜಂಪರ್) ಮೇಲೆ ಈ ಬಾರಿಯೂ ದೊಡ್ಡ ನಿರೀಕ್ಷೆ ಇದೆ. ಮತ್ತೋರ್ವ ಜಾವೆಲಿನ್ ಎಸೆತಗಾರ, ವಿಶ್ವ ಚಾಂಪಿಯನ್ ಖ್ಯಾತಿಯ ಸಂದೀಪ್ ಚೌಧರಿ ಮೇಲೂ ಚಿನ್ನದ ಭರವಸೆ ಇರಿಸಿಕೊಳ್ಳಲಾಗಿದೆ.
ಪ್ಯಾರಾ ಆತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 10 ಪದಕ ಗೆಲ್ಲುವ ಅವಕಾಶ ಇದೆ ಎಂಬುದು ಪ್ಯಾರಾ ಲಿಂಪಿಕ್ ಕಮಿಟಿ ಆಫ್ ಇಂಡಿಯಾದ (ಪಿಸಿಐ) ನಂಬಿಕೆ. ಮತ್ತಿಬ್ಬರು ಜಾವೆಲಿನ್ ಎಸೆತಗಾರ ರಾದ ಸುಂದರ್ ಸಿಂಗ್ ಗುರ್ಜಾರ್, ಅಜಿತ್ ಸಿಂಗ್ ಕೂಡ ಪದಕದ ರೇಸ್‌ನಲ್ಲಿÃದ್ದಾರೆ.
ಬ್ಯಾಡ್ಮಿಂಟನ್ ಭರವಸೆ:
ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಇದೇ ಮೊದಲ ಸಲ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಅಳವಡಿಸಿದ್ದು, ಭಾರತಕ್ಕೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ವಿಶ್ವದ ನಂ.1 ಆಟಗಾರ ಪ್ರಮೋದ್ ಭಗತ್, ನಂ.2 ಕೃಷ್ಣ ನಗರ್, ತರುಣ್ ಧಿಲ್ಲಾನ್, ಪಾರುಲ್ ಪರ್ಮಾರ್, ಪಲಕ್ ಕೊಹ್ಲಿ ಪದಕ ಗೆದ್ದು ತರಬಲ್ಲರೆಂಬ ನಿರೀಕ್ಷೆ ಬಲವಾಗಿದೆ.
ಆರ್ಚರಿ, ಶೂಟಿಂಗ್:
ಮೊನ್ನೆಯ ಒಲಿಂಪಿಕ್ಸ್‌ನಲ್ಲಿ ಶೂಟರ್ ಮತ್ತು ಆರ್ಚರ್ ಕೈಕೊಟ್ಟಿದ್ದರು. ಆದರೆ ಪ್ಯಾರಾಲಿಂಪಿಕ್ಸ್ ನಲ್ಲಿ ಹೀಗಾಗಲಿಕ್ಕಿಲ್ಲ ಎಂಬುದೊಂದು ನಂಬಿಕೆ.
ಆರ್ಚರಿಯಲ್ಲಿ ರಾಕೇಶ್ ಕುಮಾರ್, ಶ್ಯಾಮ ಸುಂದರ್ (ಕಂಪೌಂಡ್), ವಿವೇಕ್ ಚಿಕಾರ, ಹರ್ವಿಂದರ್ ಸಿಂಗ್ (ರಿಕರ್ವ್), ಜ್ಯೋತಿ ಬಲಿಯಾನ್ (ಕಂಪೌಂಡ್, ಮಿಕ್ಸೆಡ್) ನಿಖರ ಗುರಿ ಸಾಧಿಸಿದರೆ ಭಾರತದ ಪದಕ ಸಂಖ್ಯೆಯಲ್ಲಿ ಖಂಡಿತವಾಗಿಯೂ ಹೆಚ್ಚಳವಾಗಲಿದೆ.
ವಿನೋದ್ ಕುಮಾರ್ (ಡಿಸ್ಕಸ್), ಟೇಕ್ ಚಂದ್ (ಜಾವೆಲಿನ್), ಜೈದೀಪ್ ಮತ್ತು ಸಕಿನಾ ಖಾತುನ್ (ಪವರ್‌ಲಿಫ್ಟಿಂಗ್) ಪೋಡಿಯಂ ಏರುವ ಕನಸು ಕಾಣುತ್ತಿದ್ದಾರೆ. ಟಿಟಿ, ಕನೋಯಿಂಗ್, ಸ್ವಿಮ್ಮಿಂಗ್, ಪವರ್‌ಲಿಫ್ಟಿಂಗ್, ಟೇಕ್ವಾಂಡೊ ಸ್ಪರ್ಧೆಗಳಲ್ಲೂ ಭಾರತ ಪಾಲ್ಗೊಳ್ಳಲಿದೆ.
17ನೇ ಕ್ರಮಾಂಕದಲ್ಲಿ ಆಗಮಿಸಲಿದೆ ಭಾರತ : ಮಂಗಳವಾರದ ಉದ್ಘಾಟನಾ ಕಾರ್ಯಕ್ರಮದ ಪಥಸಂಚಲನದಲ್ಲಿ ಭಾರತ 17ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದೆ. ಕೇವಲ 5 ಆ್ಯತ್ಲೀಟ್ಸ್ ಮತ್ತು 6 ಮಂದಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮರಿಯಪ್ಪನ್ ತಂಗವೇಲು ತ್ರಿವರ್ಣ ಧ್ವಜದೊಂದಿಗೆ ಸಾಗಲಿದ್ದಾರೆ.
ಇದು 16ನೇ ಪ್ಯಾರಾಲಿಂಪಿಕ್ಸ್ ಆಗಿದ್ದು, 163 ದೇಶಗಳ 4,500ರಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 22 ಕ್ರೀಡೆಗಳ ಒಟ್ಟು 540 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.