ವಿಮಾನ ಏರಿದ ಬಳಿಕ ತಾಯ್ನಾಡು ಸೇರುವ ಭರವಸೆ ಮೂಡಿತು
Team Udayavani, Aug 24, 2021, 7:42 AM IST
ಉಳ್ಳಾಲ: ಅಫ್ಘಾನಿಸ್ಥಾನದಿಂದ ಏರ್‌ಲಿಫ್ಟ್ ಆಗಿರುವ ಕೊಲ್ಯ ಕನೀರುತೋಟ ನಿವಾಸಿ ಪ್ರಸಾದ್ ಆನಂದ್ ಸೋಮವಾರ ಬೆಳಗ್ಗೆ ತಾಯ್ನಾಡಿಗೆ ಮರಳಿದ್ದು ಒಂದು ವಾರದಿಂದ ಆತಂಕದಲ್ಲಿದ್ದ ಅವರ ಕುಟುಂಬ ನಿಟ್ಟುಸಿರು ಬಿಟ್ಟಿದೆ.
ಕಾಬೂಲ್‌ನ ಯುಕೆ ಅಧೀನದ ಓವರ್‌ಸೀಸ್ ಸಪ್ಲೈ ಸರ್ವೀಸ್ ಕಂಪೆನಿಯಲ್ಲಿ 8 ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ 2021ರ ಫೆಬ್ರವರಿಯಲ್ಲಿ ಊರಿಗೆ ಆಗಮಿಸಿ 2 ತಿಂಗಳ ರಜೆ ಮುಗಿಸಿ ಎಪ್ರಿಲ್ ಮೊದಲ ವಾರ ಹಿಂದಿರುಗಿದ್ದರು. ಅವರು ಒಂದು ವಾರದಿಂದ ಕಾಬೂಲ್ ಏರ್‌ಪೋರ್ಟ್‌ನಲ್ಲಿ ತಾಯ್ನಾಡಿಗೆ ಹೋಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.
ಅವರು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯ ಉಸ್ತು :
ವಾರಿಯಲ್ಲಿ ಅಮೆರಿಕದ ವಾಯುಸೇನೆ ವಿಮಾನದಲ್ಲಿ ಕತಾರ್‌ಗೆ ಬಂದಿದ್ದು ಅಲ್ಲಿಂದ ಮೂರು ದಿನಗಳ ಬಳಿಕ ದಿಲ್ಲಿಗೆ ರವಿವಾರ ಬಂದಿಳಿದಿದ್ದರು. ಬೆಂಗಳೂರು, ಕೊಚ್ಚಿ ಮಾರ್ಗವಾಗಿ ಮಂಗಳೂರಿಗೆ ಸೋಮವಾರ ಬೆಳಗ್ಗೆ ಕನೀರುತೋಟದ ಮನೆಗೆ ಆಗಮಿಸಿದರು.
ವಾಯ್ಸ್ ಮೆಸೇಜ್‌ನಲ್ಲಿ ಸಂಪರ್ಕ :
ಅಫ್ಘಾನಿಸ್ಥಾನದಲ್ಲಿ ನ್ಯಾಟೋ ಮಿಲಿಟರಿ ಬೇಸ್ ಉಳಿದಿರುವುದು ಕಾಬೂಲ್‌ನಲ್ಲಿ ಮಾತ್ರ. ಮಿಲಿಟರಿ ಬೇಸ್‌ಗೆ ಅಮೆರಿಕ ನೇತೃತ್ವದ ನ್ಯಾಟೋ ಪಡೆ ಸಂಪೂರ್ಣ ಭದ್ರತೆ ಒದಗಿಸಿದೆ. ಬೇಸ್‌ಗೆತಾಗಿಕೊಂಡಿರುವ ಏರ್‌ಪೋರ್ಟ್‌ನ ಹೊರವಲಯದಲ್ಲಿ ಉಗ್ರರು ಕ್ಯಾಂಪ್ ಹೂಡಿದ್ದಾರೆ. ಆದರೆ ಮಿಲಿಟರಿ ಬೇಸ್‌ನೊಳಗಿರುವವರಿಗೆ ಆ. 31ರ ವರೆಗೆ ಯಾವುದೇ ತೊಂದರೆ ಆಗಲಾರದು. ಒಂದು ವಾರದ ಹಿಂದೆ ಕಂಪೆನಿಯಲ್ಲಿದ್ದವರು ಭಾರತೀಯ ರಾಯಭಾರ ಕಚೇರಿ ರಚಿಸಿದ ವಾಟ್ಸ್‌ಆ್ಯಪ್‌ಗೆ ಗುಂಪಿಗೆ ಸೇರಿದ್ದೆವು. ಈ ಮೂಲಕ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುತ್ತಿದ್ದೆವು. ಮನೆಯಲ್ಲಿಯೂ ಆತಂಕವಿದ್ದುದರಿಂದ ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರಿಂದ ನಿರಂತರ ಕರೆ ಬರುತ್ತಿತ್ತು. ವಾಯ್ಸ ಮೆಸೇಜ್ ಮುಖೇನ ಸಂಪರ್ಕ ಇಟ್ಟುಕೊಂಡಿದ್ದೆ. ಕಾಬೂಲ್‌ನಲ್ಲಿ ವಿಮಾನ ಏರಿದ ಅನಂತರವಷ್ಟೇ ಮನೆಗೆ ತಲುಪುವ ಧೈರ್ಯ ಬಂದಿತ್ತು ಎಂದು ಪ್ರಸಾದ್ ತಿಳಿಸಿದರು.
ಶಾಸಕ ಯು.ಟಿ. ಖಾದರ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಪ್ರಫುಲ್ಲಾ ದಾಸ್ ಮೊದಲಾದವರು ಪ್ರಸಾದ್ ಅವರನ್ನು ಸ್ವಾಗತಿಸಿದರು.
ಕೊರಗಜ್ಜನಿಗೆ ಹೇಳಿದ ಹರಕೆ ಫಲಿಸಿತು :
ಪತಿ ಸುರಕ್ಷಿತವಾಗಿ ಮರಳುವಂತೆ ಕೊರಗಜ್ಜನಿಗೆ ಹರಕೆ ಹೇಳಿದ್ದು, ಇದೀಗ ಫಲಿಸಿದೆ ಎಂದು ಪ್ರಸಾದ್ ಪತ್ನಿ ಭವಿಳಾ ಪ್ರಸಾದ್ ತಿಳಿಸಿದ್ದಾರೆ. ಕಾಬೂಲ್ ತಾಲಿಬಾನ್ ವಶವಾಗುತ್ತಿದ್ದಂತೆ ಪತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಇದೀಗ ಮನೆಗೆ ತಲುಪಿದ್ದರಿಂದ ಮನಸ್ಸಿಗೆ ಸಮಾಧಾನವಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.