ನೈಲ್ ಪಾಲಿಶ್ ಹಾಕಿದರೇ, ಕೈ ಬೆರಳು ಕತ್ತರಿಸುತ್ತೇವೆ : ಮಹಿಳೆಯರಿಗೆ ತಾಲಿಬಾನ್ ಫತ್ವಾ
ಅಫ್ಗಾನ್ ನಲ್ಲಿ ಮಹಿಳೆಯರಿಗೆ ಹೀಲ್ಸ್ ಸ್ಯಾಂಡಲ್ ಗಳು ಧರಿಸುವಂತಿಲ್ಲ, ಜೀನ್ಸ್ ಧರಿಸುವಂತಿಲ್ಲ : ತಾಲಿಬಾನ್
Team Udayavani, Aug 24, 2021, 1:07 PM IST
ಕಾಬೂಲ್ : ಅಫ್ಗಾನಿಸ್ತಾನದಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ಅಲ್ಲಿನ ಮಹಿಳೆಯರ ಮೇಲೆ ತಾಲಿಬಾನ್ ಉಗ್ರ ಪಡೆ ಅಮಾನುಷವಾಗಿ ನಡೆದುಕೊಳ್ಳುತ್ತಿದೆ ಎಂಬ ವರದಿ ನಿತ್ಯ ನಿರಂತರ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿವೆ.
ಈಗ ಮತ್ತೆ ತಾಲಿಬಾನ್ ಮಹಿಳೆಯರಿಗೆ ಮತ್ತೊಂದು ಖಡಕ್ ವಾರ್ನ್ ಮಾಡಿದ್ದು, ತಾಲಿಬಾನ್ ಜೀನ್ಸ್ ಧರಿಸುವುದನ್ನು ನಿಷೇಧಿಸಿದೆ ಮತ್ತು ಹುಡುಗಿಯರು ನೇಲ್ ಪಾಲಿಶ್ ಬಳಸದಂತೆ ಮತ್ತು ಅದರಿಂದ ದೂರವಿರುವಂತೆ ಸೂಚಿಸಿದದ್ದಲ್ಲದೇ, ಈ ಆದೇಶವನ್ನು ಪಾಲಿಸದವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇತ್ತೀಚೆಗೆ, ಅಫ್ಗಾನಿಸ್ತಾನದಲ್ಲಿ ಜೀನ್ಸ್ ಧರಿಸಿದ್ದಕ್ಕಾಗಿ ಕೆಲವರನ್ನು ಅಮಾನುಷವಾಗಿ ಥಳಿಸಿರುವ ಘಟನೆಗಳು ಕೂಡ ಸುದ್ದಿಯಾಗಿತ್ತು.
ಇದನ್ನೂ ಓದಿ : ಖಾತೆ ಕ್ಯಾತೆ ಅಂತ್ಯ: ಸಿಎಂ ಭೇಟಿ ಬಳಿಕ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್
ಈ ಬಗ್ಗೆ ಅಲ್ಲಿನ ಯುವತಿಯೊಬ್ಬಳು ಸುದ್ದಿ ಸಂಸ್ಥೆ ‘ದಿ ಸನ್’ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದು, ಜೀನ್ಸ್ ಧರಿಸಿದ್ದಕ್ಕಾಗಿ ತನಗೆ ಮತ್ತು ತನ್ನ ಸ್ನೇಹಿತರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಕಾಬೂಲ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದ ಸಂದರ್ಭದಲ್ಲಿ, ತಾಲಿಬಾನ್ ಸಂಘಟನೆಗಳು ನಮ್ಮನ್ನು ತಡೆದರು. ಜೀನ್ಸ್ ಇಸ್ಲಾಂ ಧರ್ಮಕ್ಕೆ ಅಗೌರವ ಜೀನ್ಸ್ ನನ್ನು ಧರಿಸತಕ್ಕದ್ದುಎಂದು ಬೆದರಿಸಿ, ಥಳಿಸಿದ್ದಲ್ಲದೇ, ಬಂದೂಕನ್ನು ತೋರಿಸಿ ಮತ್ತು ಮತ್ತೆ ಈ ತಪ್ಪು ಮಾಡದಂತೆ ಬೆದರಿಕೆ ಹಾಕಿರುವುದಾಗಿ ಹೇಳಿದ್ದಾನೆಂದು ವರದಿ ಮಾಡಿದೆ.
ಅಫ್ಗಾನ್ ನ ಪತ್ರಿಕೆ ಎಟಿಲಾಟ್ರೋಜ್ ಕೂಡ ಘಟನೆಯ ಬಗ್ಗೆ ವರದಿ ಮಾಡಿದ್ದು, ಸಾಂಪ್ರದಾಯಿಕ ಅಫ್ಘಾನ್ ಬಟ್ಟೆಗಳನ್ನು ಧರಿಸದ ಕಾರಣಕ್ಕಾಗಿ ಪತ್ರಿಕೆ ವರದಿಗಾರನನ್ನು ತಾಲಿಬಾನ್ ಉಗ್ರರು ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ವರದಿ ಮಾಡಿದೆ.
ಇನ್ನು, ಕಂದಹಾರ್ ನಲ್ಲಿ, ತಾಲಿಬಾನ್ ಮಹಿಳೆಯರು ಮತ್ತು ಹುಡುಗಿಯರಿಗೆ ಫತ್ವಾ ಹೊರಡಿಸಿದ್ದು, ತಾಲಿಬಾನ್ ಹೊರಡಿಸಿರುವ ಫತ್ವಾದಲ್ಲಿ ನೈಲ್ ಪಾಲಿಶ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಯಾರಾದರೂ ನೈಲ್ ಪಾಲಿಶ್ ಹಾಕಿರುವುದು ಕಂಡುಬಂದರೆ, ಅಂತಹವರ ಬೆರಳುಗಳನ್ನು ಕತ್ತರಿಸಲಾಗುತ್ತದೆ ಎಂದಿದೆ. ಮಾತ್ರವಲ್ಲದೇ, ಮಹಿಳೆಯರಿಗೆ ಪಾದರಕ್ಷೆಗಳನ್ನು ಧರಿಸುವುದರ ಮೇಲೂ ನಿಷೇಧ ಹೇರಿದ್ದು, ಹೀಲ್ ಸ್ಯಾಂಡಲ್ ಗಳನ್ನು ಧರಿಸದಂತೆ ತಾಲಿಬಾನ್ ಖಡಕ್ ವಾರ್ನ್ ಮಾಡಿದೆ.
ಇನ್ನು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮನ ಬಂದಂತೆ ಮೃಗೀಯ ಧೋರಣೆ ತೋರಿಸುತ್ತಿದ್ದು, ಈಗಾಗಲೇ ಅಫ್ಗಾನಿಸ್ತಾನದ ಹಲವಾರು ಯುವತಿಯರನ್ನು ಅಪಹರಿಸಿ ವಿದೇಶಗಳಲ್ಲಿ ಲೈಂಗಿಕ ದಂಧೆಗೆ ದೂಡುತ್ತಿದ್ದಾರೆ. ಮಾನಸಿಕ ಹಿಂಸೆ ಕೊಟ್ಟು ಬಲವಂತವಾಗಿ ಮದುವೆಯಾಗುತ್ತಿದ್ದಾರೆ ಎಂಬ ವರದಿಗಳು ಆಗುತ್ತಿವೆ. ತಮ್ಮ ಮೊದಲ ಆಡಳಿತದಲ್ಲೂ ತಾಲಿಬಾನ್ ಉಗ್ರರು ಮಹಿಳೆಯರ ಮೇಲೆ ಇದೇ ರೀತಿಯ ದೌರ್ಜನ್ಯ ಎಸಗಿದ್ದರು.
ಇದನ್ನೂ ಓದಿ : ಜಂಕ್ ಫುಡ್ ಬೇಡ, ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ : ವೆಂಕಯ್ಯ ನಾಯ್ಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.