ಬರಲಿದೆ ಮಾರುತಿ-ಸುಜುಕಿ ಹೈಬ್ರಿಡ್ ಕಾರು
Team Udayavani, Aug 25, 2021, 6:20 AM IST
ಹೊಸದಿಲ್ಲಿ: ಪ್ರತೀ ಲೀಟರ್ ಪೆಟ್ರೋಲ್‌ಗೆ 104.98 ರೂ. ಆಗುತ್ತಿರುವಂತೆಯೇ ವಿದ್ಯುತ್ ಚಾಲಿತ ಕಾರುಗಳಿಗೆ ಬೇಡಿಕೆ ಹೆಚ್ಚಲಾರಂಭಿಸಿದೆ.
ಆದರೆ ಸೂಕ್ತ ರೀತಿಯಲ್ಲಿ ಚಾರ್ಜಿಂಗ್ ವ್ಯವಸ್ಥೆಯೇ ಸವಾಲಾಗಿದೆ. ಅದಕ್ಕೆ ಪರಿಹಾರ ಸೂತ್ರ ವನ್ನು ದೇಶದ ಜನಪ್ರಿಯ ಕಾರು ತಯಾರಿಕ ಕಂಪೆನಿ ಮಾರುತಿ ಸುಜುಕಿ ಕಂಡುಹಿಡಿಯಲು ಮುಂದಾಗಿದೆ. ಚಲಿಸುತ್ತಲೇ ಸ್ವಯಂ ಚಾಲಿತವಾಗಿ ಚಾರ್ಜ್ ಆಗುವ ಹೈಬ್ರಿಡ್ (ಎಚ್‌ಇವಿ) ವ್ಯವಸ್ಥೆ ಹೊಂದಿರುವ ಕಾರನ್ನು ಸಂಶೋಧಿಸಿ ಅಭಿವೃದ್ಧಿ ಪಡಿಸಲು ಟೊಯೊಟಾ ಜತೆಗೆ ಒಪ್ಪಂದಕ್ಕೆ ನಿರ್ಧರಿಸಿದೆ.
ಟಾಟಾ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಹ್ಯುಂಡೈ ಈಗಾಗಲೇ ವಿದ್ಯುತ್‌ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತಂದಿವೆ. ವಿದ್ಯುತ್ ಕಾರುಗಳ ತಯಾರಿಕೆಯಲ್ಲಿ ಮಾರುತಿ ಸುಜುಕಿ ಉಳಿದವುಗಳಂತೆ ಮುಂದಿಲ್ಲ. ಮಾರುತಿ ಸುಜುಕಿಯ ಕಾರ್ಪೊರೇಟ್ ಯೋಜನೆಗಳು ಮತ್ತು ಸರಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ರಾಹುಲ್ ಭಾರತಿ ಮಾತನಾಡಿ “ಟೊಯೊಟಾ ಜತೆಗೂಡಿ ಕೆಲವು ವಾಹನಗಳವನ್ನು ಹೈಬ್ರಿಡ್ ವ್ಯಾಪ್ತಿಯಲ್ಲಿ ಮುಂದಿನ ತಿಂಗಳು ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದಿದ್ದಾರೆ.
ಸ್ವಯಂ ಚಾಲಿತವಾಗಿ ಚಾರ್ಜ್ ಆಗುವ ಕಾರುಗಳಲ್ಲಿ ಇಂಟರ್‌ನಲ್ ಕಂಬಷನ್ ಎಂಜಿನ್ (ಐಸಿಇ)ಮೂಲಕ ಬ್ಯಾಟರಿ ಗಳಿಗೆ ಇಂಧನ ಪೂರೈಸುತ್ತದೆ. ಜತೆಗೆ ಟೈರ್‌ಗಳು ಚಲಿಸುತ್ತಿರುವಂತೆಯೇ ಹೆಚ್ಚುವರಿ ವಿದ್ಯುತ್ ಪೂರೈಸಲಿವೆ. ಹೀಗಾಗಿ ಐಸಿಇ ವ್ಯವಸ್ಥೆಯ ಮೂಲಕ ಹೆಚ್ಚಿನ ಮೈಲೇಜ್ ಕೂಡ ಸಿಗಲಿದೆ. ಜತೆಗೆ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ.
ಇಂಥ ಕಾರುಗಳು ಮಾರುಕಟ್ಟೆಗೆ ಬಂದರೆ, ದೂರ ಸಂಚಾರದ ವೇಳೆ ಕ್ಷಿಪ್ರ ಚಾರ್ಜಿಂಗ್ ಕೇಂದ್ರಗಳನ್ನು ಹುಡುಕುವ ಪರಿಸ್ಥಿತಿಯೂ ಬರುವುದಿಲ್ಲ. 2018 ರಿಂದಲೇ ವ್ಯಾಗನ್ ಆರ್ ಕಾರುಗಳ ಬ್ಯಾಟರಿಗಳನ್ನು ಬದಲಾಯಿಸಿ ಪರೀಕ್ಷೆಗೆ ಒಳಪಡಿಸುವ ಕ್ರಮ ಜಾರಿಗೆ ತಂದಿದೆ. 2025ರ ವೇಳೆಗೆ ಮಾರುತಿ ಸುಜುಕಿ ವಿದ್ಯುತ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, 10 ಲಕ್ಷ ರೂ. ಒಳಗೆ ಬೆಲೆ ಇರಬಹುದೆಂದು ಅಂದಾಜಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google ಮ್ಯಾಪ್ ಏಕೆ ದಾರಿ ತಪ್ಪುತ್ತದೆ? ಗೂಗಲ್ ಮ್ಯಾಪ್ ಹೇಗೆ ಹುಟ್ಟಿಕೊಂಡಿತು…
Oxfordನ 2024ರ ವರ್ಷದ ಪದ ಬ್ರೈನ್ ರಾಟ್…ಕಾಡುತ್ತಿರುವ ಮೊಬೈಲ್ ಗೀಳಿಗೆ ಈ ಹೆಸರು!
Itel ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಮಾರುಕಟ್ಟೆಗೆ ಬಿಡುಗಡೆ
Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.