ಮುಂಗಾರು ಚಟುವಟಿಕೆಯಲ್ಲಿ ರೈತರು ತಲ್ಲೀನ; ಉತ್ತಮ ಬೆಳೆ ನಿರೀಕ್ಷೆಯಲ್ಲಿ ಅನ್ನದಾತರು
ತಾಲೂಕಿನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ 113 ಮಿ.ಮೀ. ಮಳೆ ಅಧಿಕ
Team Udayavani, Aug 25, 2021, 5:50 PM IST
ಆಲೂರು: ತಾಲೂಕಿನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ 113 ಮಿ.ಮೀ. ಮಳೆ ಜಾಸ್ತಿಯಾಗಿದ್ದು, ಮುಂಗಾರು ಕೃಷಿ ಚಟುವಟಿಕೆ ಉತ್ತಮವಾಗಿದೆ. ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನ ಕಸಬಾ, ಕೆಂಚಮ್ಮನ ಹೊಸ ಕೋಟೆ, ಕುಂದೂರು ಮತ್ತು ಪಾಳ್ಯ ಹೋಬಳಿಗಳಲ್ಲಿ ಭತ್ತಿ ಬೆಳೆಯುವುದು ಸಾಮಾನ್ಯವಾಗಿದೆ.
ಇದೂವರೆಗೂ ಸುರಿದ ಮಳೆಯಿಂದ ಶುಂಠಿ, ಆಲೂಗಡ್ಡೆ, ಜೋಳ, ರಾಗಿ ಬೆಳೆಗೆ ಆಡುಮಳೆಯಾದ ಪರಿಣಾಮ ಅನುಕೂಲವಾಗಿದೆ. ಉತ್ತಮ ಇಳುವರಿ ಸಿಗುವುದೆಂದು ರೈತರುಭರವಸೆಯಲ್ಲಿದ್ದಾರೆ.ಕಸಬಾಹೋಬಳಿ ಹೊರತುಪಡಿಸಿದರೆ,ಮೂರುಹೋಬಳಿಗಳಲ್ಲಿ ಕಾಡಾನೆ ಹಾವಳಿ ಇರುವುದರಿಂದ, ಆಕಸ್ಮಾತ್ ಲಾಕ್‌ಡೌನ್‌ಪರಿಣಾಮ ಎದುರಾದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ.
ಸಾಮಾನ್ಯವಾಗಿ ಮೇ 15ರ ವೇಳೆಗೆ ಜೋಳ, ಆಲೂಗಡ್ಡೆ, ಶುಂಠಿ ಬಿತ್ತನೆ ಮಾಡಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಭತ್ತ ನಾಟಿ ಕಾರ್ಯ ಮುಗಿದಿದೆ. ಕೊಳವೆ ಬಾವಿ ಹೊಂದಿರುವ ರೈತರು ಗದ್ದೆಗಳಿಗೆ 15 ದಿನ ಮುಂಚಿತವಾಗಿ ನಾಟಿ ಮಾಡಿದ್ದಾರೆ ಮತ್ತು ಶುಂಠಿಗೆ ನೀರು ಸಿಂಪಡಿಸದ್ದಾರೆ. ತುಂತುರು ಮಳೆಯಾಗುತ್ತಿರುವುದರಿಂದ ಜೋಳ, ಭತ್ತದ ಗದ್ದೆಗೆ ಅನುಕೂಲವಾಗಿದೆ.
ಶುಂಠಿಗೆ ಕೊಳೆ ರೋಗ: ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಶುಂಠಿಗೆ ಕೊಳೆ ರೋಗ ಎಡತಾಕಿದೆ. ಕೋವಿಡ್ ಸೊಂಕಿನ ಹಿನ್ನೆಲೆಯಲ್ಲಿ ಪಟ್ಟಣ ಅರಸಿ ಹೋಗಿದ್ದ ರೈತ ಕಾರ್ಮಿಕರು, ಲಾಕ್‌ಡೌನ್ ಪರಿಣಾಮ ಶೇ. 90 ಜನ ತಮ್ಮ ಊರುಗಳಿಗೆ ವಾಪಾಸು ಬಂದು ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡರು. ರೈತರು ಯಾಂತ್ರಿಕತೆ ಮಾರು ಹೋಗಿದ್ದಾರೆ.
ಇದನ್ನೂ ಓದಿ:ಮೋದಿ ಸರ್ಕಾರದಿಂದ ಭಯೋತ್ಪಾದನೆ ನಿಗ್ರಹ : ದುಷ್ಯಂತ್ ಕುಮಾರ್ ಗೌತಮ್
4500 ಹೆಕ್ಟೇರ್‌ಭತ್ತ, 6 ಸಾವಿರ ಹೆಕ್ಟೇರ್‌ಜೋಳ, 30ಹೆಕ್ಟೇರ್ ರಾಗಿ ಬೆಳೆಯಲಾಗಿದೆ.ಆಲೂಗಡ್ಡೆ ಕಟಾವಾದ ನಂತರ ಎರಡನೆಬೆಳೆ ರಾಗಿ
ಬೆಳೆಯಲು ತಯಾರಿ ನಡೆಯುತ್ತಿದೆ. ಇಲಾಖೆಯಿಂದ ಸಬ್ಸಿಡಿರೂಪದಲ್ಲಿಬಿತ್ತನೆ ಬೀಜ, ಗೊಬ್ಬರವನ್ನು ನೀಡಲಾಗಿದೆ.
-ಎಂ.ಡಿ. ಮನು, ಕೃಷಿ ಇಲಾಖೆ
ಸಹಾಯಕ ನಿರ್ದೇಶಕ
ಕೆಲವೆಡೆ ಅಗತ್ಯವಿರುವ ಪ್ರದೇಶಗಳಲ್ಲಿ ಭತ್ತ ನಾಟಿ ಮಾಡಲುಯಂತ್ರ ಬಳಸಲಾಗಿದೆ. ಆದರೆ ಶುಂಠಿ, ಆಲೂಗಡ್ಡೆ, ಜೋಳ ಬಿತ್ತನೆಕಾರ್ಯಕ್ಕೆ
ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ. ಶುಂಠಿ ಬೆಳೆಗೆ ಇಡಿ ರಾಷ್ಟ್ರದಲ್ಲಿ ಬೇಡಿಕೆ ಇದೆ.ಕೋಳಿಗೆ ಆಹಾರವಾಗಿ ಜೋಳವನ್ನು ಬಳಸಿಕೊಳ್ಳಲಾಗುತ್ತದೆ. ರೈತರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ.
-ಯಾಲಕ್ಕೀಗೌಡ, ಧರ್ಮಪುರಿ ಗ್ರಾಮದ ರೈತ
300 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ, 57 ಹೆಕ್ಟೇರ್ ಆಲೂಗಡ್ಡೆ,ಕೆ. ಹೊಸಕೋಟೆ, ಪಾಳ್ಯ ಹೋಬಳಿಗಳಲ್ಲಿ ಕಾಳುಮೆಣಸು, ಅಡಿಕೆ ಬೆಳೆಯನ್ನು ಬೆಳೆಯಲು ರೈತರು ಆಕರ್ಷಿತರಾಗಿದ್ದಾರೆ. ಸಕಾಲದಲ್ಲಿ ಮಳೆಯೂ ಆಗಿದೆ.
-ಕೇಶವ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.