ಹೊಸ ಶಿಕ್ಷಣ ನೀತಿ: ಮಾಸಾಂತ್ಯಕ್ಕೆ ಮಾದರಿ ಪಠ್ಯಕ್ರಮ
Team Udayavani, Aug 26, 2021, 6:48 AM IST
ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಗೆ ಸಿದ್ಧಪಡಿಸಲಾಗುತ್ತಿರುವ ವಿಷಯ ವಾರು ಮಾದರಿ ಪಠ್ಯಕ್ರಮ ಆಗಸ್ಟ್ ಅಂತ್ಯಕ್ಕೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿಯೇ ಪ್ರಥಮ ವಾಗಿ ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದ್ದು, ಪಠ್ಯಕ್ರಮ ಜಾರಿಗೆ ಬೇಕಾದ ಸಿದ್ಧತೆಗಳನ್ನು ಕೂಡ ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿದೆ. ಹಾಲಿ ಶೈಕ್ಷಣಿಕ ವರ್ಷದಿಂದಲೇ ಹೊಸ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಷಯವಾರು ತಜ್ಞರ 32 ಸಮಿತಿಗಳನ್ನು ನೇಮಿಸಿತ್ತು. ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಅವರು ವಾಣಿಜ್ಯ- ನಿರ್ವಹಣೆ ವಿಭಾಗದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದಾರೆ.
4 ವರ್ಷಗಳ 8 ಸೆಮಿಸ್ಟರ್‌ಗಳಲ್ಲಿ ಯಾವ ಯಾವ ವಿಷಯ ಗಳನ್ನು ಬೋಧಿಸಬಹುದು ಎಂಬ ಮಾದರಿಯನ್ನು ಈ ಸಮಿತಿ ಉನ್ನತ ಶಿಕ್ಷಣ ಇಲಾಖೆಗೆ ನೀಡಿದ ವರದಿಯಲ್ಲಿ ತಿಳಿಸಿದೆ. ಆ ಪ್ರಕಾರ ಪಠ್ಯಕ್ರಮ ರಚನೆಯಾಗಲಿದೆ.
ಗೊಂದಲ, ಆಕ್ಷೇಪ: ಕಾರ್ಯಾಗಾರ :
ನೂತನ ಶಿಕ್ಷಣ ನೀತಿಗೆ ಸಂಬಂಧಿಸಿ ಕರಾವಳಿಯಲ್ಲಿ ಇರುವ ಗೊಂದಲ, ಆಕ್ಷೇಪ ಹಾಗೂ ಕುತೂಹಲದ ವಿಷಯ ಗಳಿಗೆ ಉತ್ತರ ನೀಡಲು ವಿಶೇಷ ಕಾರ್ಯಾಗಾರವನ್ನು ಮಂಗಳೂರು ವಿ.ವಿ. ಆಯೋಜಿಸಲಿದೆ. ಆ. 30 ಅಥವಾ 31ರಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಅವರು ಉದ್ಘಾಟಿಸುವ ನಿರೀಕ್ಷೆಯಿದ್ದು, ವಿ.ವಿ. ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ಎನ್‌ಜಿಒ, ಶಿಕ್ಷಣತಜ್ಞರು ಭಾಗವಹಿಸುವ ಸಾಧ್ಯತೆಯಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ.
ತಿದ್ದುಪಡಿ: ವಿ.ವಿ.ಗಳಿಗೆ ಅವಕಾಶ :
ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ತಜ್ಞರ ಸಮಿತಿಯು ಸರಕಾರಕ್ಕೆ ವರದಿ ನೀಡಿದೆ. ಇದೀಗ ಉಪ ಸಮಿತಿಗಳ ಮುಖೇನ ಮಾದರಿ ಪಠ್ಯಕ್ರಮ ರಚಿಸ ಲಾಗುತ್ತಿದ್ದು ಮಾಸಾಂತ್ಯಕ್ಕೆ ಲಭ್ಯ ವಾಗಲಿದೆ. ಮಾದರಿ ಪಠ್ಯಕ್ರಮ ವನ್ನು ಇಟ್ಟುಕೊಂಡು ಆಯಾಯ ವಿ.ವಿ.ಗಳ ಅಧ್ಯಯನ ಮಂಡಳಿ, ನಿಕಾಯ, ಶೈಕ್ಷಣಿಕ ಮಂಡಳಿಯಲ್ಲಿ ಚರ್ಚಿಸಲಾಗುತ್ತದೆ. ಆಗ ಸ್ಥಳೀಯ ವಾಗಿ ಬೇಕಾದರೆ ಆಯ್ದ ತಿದ್ದುಪಡಿ ಮಾಡಲು ಕೂಡ ಸ್ಥಳೀಯವಾಗಿ ಅವಕಾಶ ನೀಡಲಾಗುತ್ತದೆ.– ಪ್ರೊ| ಪಿ.ಎಸ್. ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.