ಈ ರಾಶಿಯವರು ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯ ನಿರ್ವಹಿಸುವುದರಿಂದ ಪ್ರಗತಿ
Team Udayavani, Aug 26, 2021, 8:16 AM IST
26-08-2021
ಮೇಷ: ಸರಕಾರಿ ಕಾರ್ಯಗಳಲ್ಲಿ ಸಫಲತೆ. ಪ್ರಯಾಣ ದಿಂದ ಸಂತೋಷ. ಹೆಚ್ಚಿನ ಸ್ಥಾನಮಾನಕೀರ್ತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ಒಳ್ಳೆಯ ಸಂಬಂಧ ಒದಗಿ ಬರುವ ಅವಕಾಶ.ದಾಂಪತ್ಯದಲ್ಲಿ ಸುಖವೃದ್ಧಿ. ಇತ್ಯಾದಿ ಶುಭಫಲ.
ವೃಷಭ: ಆರೋಗ್ಯ ವೃದ್ಧಿ. ಗೃಹ, ವಾಹನ, ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದರಿಂದ ಸಂತೋಷ. ದಾಂಪತ್ಯದಲ್ಲಿ ಅನುರಾಗವೃದ್ಧಿ. ಗುರುಹಿರಿಯರಿಂದ ಉತ್ತಮ ಸಹಕಾರ ಮಾರ್ಗದರ್ಶನ.
ಮಿಥುನ: ಸಣ್ಣ ಪ್ರಯಾಣ ಭಾಗ್ಯ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ತಿಳಿದು ನಿರ್ಣಯಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಉದ್ಯೋಗ ವ್ಯವಹಾರಗಳಲ್ಲಿ ಸಣ್ಣ ಬದಲಾವಣೆ ಸಂಭವ.
ಕರ್ಕ: ಆರೋಗ್ಯ ವಿಚಾರದಲ್ಲಿ ಸರಿಯಾದ ನಿಯಮ ಪಾಲಿಸುವುದರಿಂದ ಅಭಿವೃದ್ಧಿ. ದೀರ್ಘ ಪ್ರಯಾಣಕ್ಕೆ ಅವಕಾಶ. ಧನಾರ್ಜನೆಗೆ ಸರಿಯಾಗಿ ಖರ್ಚಿನ ದಾರಿಗಳು ತೋರಿಯಾವು. ಕುಟುಂಬದಿಂದ ಉತ್ತಮ ಪ್ರೋತ್ಸಾಹ.
ಸಿಂಹ: ಅನಿರೀಕ್ಷಿತ ಧನಾಗಮನ. ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯ ನಿರ್ವಹಿಸುವುದರಿಂದ ಪ್ರಗತಿ. ಗುರುಹಿರಿಯರಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.
ಕನ್ಯಾ: ಆರೋಗ್ಯದ ಬಗ್ಗೆ ಗಮನಿಸಿ. ದೀರ್ಘ ಪ್ರಯಾಣದಿಂದ ದೇಹಾಯಾಸ ಸಂಭವ. ದಂಪತಿಗಳು, ಪಾಲುದಾರರು ಪರಸ್ಪರ ಪ್ರೋತ್ಸಾಹದಿಂದ ನೆಮ್ಮದಿ, ಕಾರ್ಯ ಸಫಲತೆ. ಗುರುಹಿರಿಯರ ಆರೋಗ್ಯ ವೃದ್ಧಿ.
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗವ್ಯವಹಾರಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಗುರು ಹಿರಿಯರ ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಣ್ಣ ಪ್ರಯಾಣ ಸಂಭವ.
ವೃಶ್ಚಿಕ: ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ಪತ್ರ ವ್ಯವಹಾರಕ್ಕೆ ಪ್ರಾಮುಖ್ಯತೆ ಇರಲಿ. ಮನೆಯಲ್ಲಿ ಸಂಭ್ರಮ.
ಧನು: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಲಭ್ಯ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.
ಮಕರ: ಉದ್ಯೋಗ, ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಆರ್ಥಿಕ ಧನಾರ್ಜನೆ. ಸತ್ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖಲಭ್ಯ.
ಕುಂಭ: ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಸುಖ. ಮಿತ್ರರಿಂದಲೂ ಗಣ್ಯರಿಂದಲೂ ಸಹಕಾರ ಪ್ರೋತ್ಸಾಹ. ದೂರದ ವ್ಯವಹಾರಗಳಲ್ಲಿ ಧನಾರ್ಜನೆ. ಇತ್ಯಾದಿ ಶುಭ ಫಲ.
ಮೀನ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ. ದೂರದ ಉದ್ಯೋಗ ಹೊಸ ಕಾರ್ಯಗಳಿಗೆ ಅಡಚಣೆ ತೋರಿದರೂ ನಿರೀಕ್ಷಿತ ಸ್ಥಾನ ಸುಖ ಪ್ರಾಪ್ತಿ. ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕ ಸುಖವೃದ್ಧಿ.
ಜಯತೀರ್ಥ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.