ವರುಣಾರ್ಭಟಕ್ಕೆ ನೆಲಕಚ್ಚಿದ ಕೃಷಿ, ತೋಟಗಾರಿಕೆ ಬೆಳೆ
Team Udayavani, Aug 26, 2021, 3:37 PM IST
ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು ರೈತರಿಗೆ ಕೋಟ್ಯಂತರ ರೂ.ಹಾನಿ ಸಂಭವಿಸಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಸುರಿದ ಮಳೆಯಿಂದಾಗಿ ಬುಧವಾರ ಇಡೀ ದಿನ ಮಳೆ ನೀರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹೊಲ, ತೋಟಗಳಿಗೆ ನುಗ್ಗಿತು. ಮಳೆ ನೀರು ಹರಿಯುವ ಕಾಲುವೆ ಹಾಳು ಮಾಡಿದ್ದೇ ಕಾರಣವೆಂಬ ದೂರುಕೇಳಿ ಬಂದಿದೆ.
ಮಳೆ ಪ್ರಮಾಣ: ಕೋಲಾರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 32 ಮಿ.ಮೀ ಮಳೆ ಸುರಿದಿದೆ. ಕಳೆದ 7 ದಿನಗಳ ಅವಧಿಯಲ್ಲಿ 71 ಮಿ.ಮೀ ಮಳೆ ಸುರಿದಿತ್ತು. ಜುಲೈ ಅವಧಿಯಲ್ಲಿ 195.3 ಮಿ.ಮೀ ಮಳೆಯಾಗಿತ್ತು. ಆ.25ರವರೆಗೂ 132 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಜ.1 ರಿಂದ ಆ.25 ರವರೆಗೂ 400 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಈವರೆಗೂ ಸರಾಸರಿ 336 ಮಿ.ಮೀ ಮಳೆಯಾಗಬೇಕಿತ್ತು. ಆದರೆ,560 ಮಿ.ಮೀ ಮಳೆಯಾಗಿದೆ.ಕಳೆದ ರಾತ್ರಿಕೋಲಾರ ತಾಲೂಕಿನ ಕೋಲಾರ ಕಸಬಾದಲ್ಲಿ 29ಮಿ.ಮೀ, ಹೋಳೂರಿ ನಲ್ಲಿ 67 ಮಿಮೀ, ಹುತ್ತೂರುನಲ್ಲಿ 34ಮಿ.ಮೀ, ನರಸಾಪುರ ದಲ್ಲಿ 80 ಮಿ.ಮೀ ಮತ್ತು ಸುಗಟೂರುನಲ್ಲಿ 71 ಮಿ.ಮೀ ಹಾಗೂ ವಕ್ಕಲೇರಿಯಲ್ಲಿ 25ಮಿ.ಮೀ ಮಳೆಯಾಗಿದೆ.
ಸುಗಟೂರು, ನರಸಾಪುರದಲ್ಲಿ ಹಾನಿ: ಜಿಲ್ಲೆಗೆ ಹೋಲಿಸಿದರೆ ನರಸಾಪುರ ಹಾಗೂ ಸುಗಟೂರು ಹೋಬಳಿಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹಾನಿಯ ಪ್ರಮಾಣವೂ ಹೆಚ್ಚಾಗಿದೆ. ಇದೀಗ ಕೆ.ಸಿ.ವ್ಯಾಲಿ ನೀರು ಕೆರೆಯಿಂದ ಕೆರೆಗೆ ಹರಿದು ನರಸಾಪುರದಿಂದ ಸುಗಟೂರು ಭಾಗದಲ್ಲಿಯೇ ಹರಿಯುತ್ತಿದೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಮಳೆ ನೀರು ನರಸಾಪುರ ಭಾಗದಿಂದ ಸುಗಟೂರು ಭಾಗದತ್ತಲೇ ಹೆಚ್ಚು ಹರಿದ
ಪರಿಣಾಮ ಈ ಭಾಗದಲ್ಲಿ ಬೆಳೆ ಹಾನಿ ಹೆಚ್ಚಾಗಿದೆ.
ನೆಕಚ್ಚಿದ ಟೊಮೆಟೋ: ಜಿಲ್ಲೆಯಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಿದ್ದು, ಕೋವಿಡ್ ಕಾರಣದಿಂದ ಬೆಲೆ ಸಿಗದೆ ರೈತರು ನಷ್ಟಕ್ಕೆ ತುತ್ತಾಗಿದ್ದರು. ಈಗ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಟೊಮೆಟೋ ನೆಲಕಚ್ಚಿದೆ. ಇನ್ನಿತರ ತೋಟಗಾರಿಕೆ ಬೆಳೆಗಳಾದ ಕ್ಯಾಪ್ಸಿಕಾಂ, ಕೋಸು, ಬೀನ್ಸ್ ಬೆಳೆಗಳಿಗೂ ಮಳೆ ನೀರು ನುಗ್ಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕೇರಳದಲ್ಲಿ ಸೋಂಕು ಏರಿಕೆ : ಇದು ಸರ್ಕಾರದ ಅಸಲಿ ಮುಖವನ್ನು ತೋರಿಸುತ್ತದೆ : ಥಾಮಸ್
ರಾಗಿ ಬೆಳೆಗೂ ಹಾನಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮಾಧಾನಕರವಾಗಿ ಸುರಿಯುತ್ತಿರುವುದರಿಂದ ರೈತರು ತಮ್ಮ ಹೊಲಗಳನ್ನು ಹದಪಡಿಸಿಕೊಂಡು ರಾಗಿ ಹಾಕಿದ್ದರು. ಆದರೆ ಹೊಲಗಳಲ್ಲಿಯೇ ಯಥೇತ್ಛವಾಗಿ ನೀರು ಹರಿದು ಪೈರನ್ನು ಮಲಗಿಸಿದೆ. ನರಸಾಪುರ ಮತ್ತು ಸುಗಟೂರು ಭಾಗದಲ್ಲಿಯೇ ನೂರಾರು ಎಕರೆ ರಾಗಿ ಬೆಳೆ ನೀರಿನಿಂದ ಆವೃತವಾಗಿ ಹಾನಿಯಾಗಿದೆ.
ಮತ್ತೆ ಮಳೆಯಾದರೆ ಮತ್ತಷ್ಟು ಹಾನಿ: ಇದೇ ರೀತಿಯ ಮಳೆ 2-3 ದಿನ ಮುಂದುವರಿದರೆ ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ. ಇನ್ನು ಮಂಗಳವಾರದ ಹಾನಿ ಕುರಿತು ಅಧಿಕಾರಿಗಳು ಅಂದಾಜುಪಟ್ಟಿ ಸಿದ್ಧಪಡಿಸಲು ಮುಂದಾಗಿದ್ದು, ಒಂದೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣಸಿಗಲಿದೆ.
ಕಟ್ಟಡಗಳು ಜಲಾವೃತ: ಹೊಲ ತೋಟಗಳಲ್ಲಿ ರೈತರು ನಿರ್ಮಿಸಿಕೊಂಡಿದ್ದ ಮನೆಗಳಿಗೂ ಸುಗಟೂರು ಭಾಗದಲ್ಲಿ ನೀರು ನುಗ್ಗಿವೆ. ಕೆಲವು ಕಟ್ಟಡಗಳಿಂದ ಜನ ಹೊರಬಾರದಂತೆ ನೀರು ನಿಂತಿರುವುದು ಕಂಡು ಬಂಬದೆ. ಬುಧವಾರ ಬೆಳಗ್ಗೆ 10 ಗಂಟೆ ನಂತರ ಮಳೆ ಬಿಡುವು ನೀಡಿದ್ದರಿಂದ ಒಂದಷ್ಟು ಹಾನಿ ಪ್ರಮಾಣ ಕಡಿಮೆಯಾಗಿತ್ತು. ಬುಧವಾರ ರಾತ್ರಿಯೂ ಇದೇ ರೀತಿ ಮಳೆ ಸುರಿದಂತೆ ಮತ್ತಷ್ಟು ಹಾನಿ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಒತ್ತುವರಿಯೇ ಕಾರಣ: ಪ್ರತಿ 10ವರ್ಷಗಳ ಅವಧಿಯಲ್ಲಿ ಒಂದೆರೆಡು ಬಾರಿ ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತದೆ. ಕೆರೆ ಕುಂಟೆ ತುಂಬಿ ಹರಿಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆಕುಂಟೆಗಳಿಗೆ ಮಳೆ ನೀರನ್ನು ಹರಿಸುವ ಕಾಲುವೆಗಳನ್ನು ರೈತಾಪಿ ವರ್ಗವೇ ದುರಾಸೆಯಿಂದ ಒತ್ತುವರಿ ಮಾಡಿಕೊಂಡು ಹಾಳುಗೆಡವಿದ್ದಾರೆ
ರೈತರ ಗಾಯದ ಮೇಲೆ ಬರೆ:ಹೊಲ ಗದ್ದೆಗಳ ಗೆನುಮೆಗಳನ್ನು ಗುರುತಿಸಲಾರದಷ್ಟು ಹಾನಿ ಮಾಡಲಾಗಿದೆ. ಇವೆಲ್ಲದರ ಪರಿಣಾಮ ಕಾಲುವೆಗಳಲ್ಲಿ ಹರಿಯಬೇಕಾದ ಮಳೆ ನೀರು ಏಕಾಏಕಿ ಹೊಲ ತೋಟ, ಮನೆಗಳಿಗೆ ನುಗ್ಗುತ್ತಿದೆ ಎಂದು ರೈತರೇ ದೂರುತ್ತಿದ್ದಾರೆ. ಒಟ್ಟಾರೆ ಮಳೆ ನೀರು ಬರಪೀಡಿತ ಜಿಲ್ಲೆಯಲ್ಲಿ ಬೆಳೆ ಹಾನಿ ಮಾಡುವಷ್ಟು ಸುರಿಯುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ನೂರಾರು ಎಕರೆಕೃಷಿ ಮತ್ತು ತೋಟಗಾರಿಕೆ ಬೆಳೆಗಳುಹಾನಿಯಾಗಿವೆ.ಆದರೆ,ಇದರಲ್ಲಿ ಮಳೆ
ಪಾತ್ರ ಶೇ.10 ಮಾತ್ರ. ರೈತರುಇನ್ನಾದರೂ ಮಳೆ ನೀರುಹರಿಯುವಕಾಲುವೆಮತ್ತಿತರ ವಿನ್ಯಾಸಗಳ ಒತ್ತುವರಿ ಮಾಡದಿರಲಿ.
– ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ, ರೈತ ಸಂಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.