ರಂಗಾಯಣ ಮತ್ತಷ್ಟು ಅಭಿವೃದ್ಧಿಗೆ ಕ್ರಮ: ಸಚಿವ ಸುನೀಲ್
Team Udayavani, Aug 26, 2021, 4:24 PM IST
ಮೈಸೂರು: ರಂಗಾಯಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಭರವಸೆ ನೀಡಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಾರಿಗೆ ಬುಧವಾರ ರಂಗಾಯಣಕ್ಕೆ ಭೇಟಿ ನೀಡಿದ ಅವರು, ಇಡೀ ಆವರಣದಲ್ಲಿ ಸುತ್ತಾಡಿ ರಂಗಾಯಣ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ತಿಳಿದು ಕೊಂಡರು.
ಬಳಿಕ ಮಾತನಾಡಿದ ಅವರು, ಸಚಿವನಾದ ಬಳಿಕ ಮೈಸೂರಿನಿಂದಲೇ ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ರಂಗಾಯಣಕ್ಕೆ ಬಂದ ಮೇಲೆ
ಇಲ್ಲಿನ ಮಹತ್ವ, ಇದರ ಹಿನ್ನೆಲೆ, ಇಲ್ಲಿನ ಬೇಕು-ಬೇಡಗಳ ಬಗ್ಗೆ ತಿಳಿಯಿತು ಎಂದರು.
ನಾಡಿನಲ್ಲಿ ಕಲೆ ಮತ್ತು ಭಾಷೆ ಹೆಚ್ಚಾಗಿ ಬೆಳೆಯಬೇಕು. ರಂಗಾಯಣ ಕಲೆ ಮತ್ತು ಭಾಷೆ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೊಸತನ ನಿರ್ಮಾಣ ಮಾಡುವ ಕಾರ್ಯಗಳನ್ನು ಮಾಡುತ್ತಿದೆ. ಇಂತಹ ರಂಗಾಯಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.
ಇದನ್ನೂ ಓದಿ:ಗೋವಾದಲ್ಲಿ ಕಾಂಗ್ರೆಸ್ ಮೈತ್ರಿ ? ಕುತೂಹಲ ಹೆಚ್ಚಿಸಿದ ಚಿದಂಬರಂ ನೇತೃತ್ವದ ಸಭೆ
ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ: ಮೊದಲ ಬಾರಿಗೆ ರಂಗಾಯಣಕ್ಕೆ ಆಗಮಿಸಿದ ಸಚಿವ ವಿ.ಸುನೀಲ್ ಕುಮಾರ್‌ಅವರಿಗೆ ರಂಗಾಯಣ
ಕಲಾವಿದರು ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿಯಾದರು. ಸಚಿವರಿಗಾಗಿಯೇ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ರಂಗಾಯಣದ ಸಂಚಾರಿ ರಂಗಘಟಕ ಕಲಾವಿದರ “ರಂಗಗೀತೆ’ ಗಾಯನ, ಭಾರತೀಯ ರಂಗಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಕೋಲಾಟ’, ರಂಗಾಯಣದ ಬೀದಿ ನಾಟಕ ಕಲಾವಿದರ “ಸಮಾನತೆ ಗೀತೆ’ ಗಾಯನ ಕೇಳಿದ ಸಚಿವರು ಖುಷಿ ಪಟ್ಟರು. ಬಳಿಕ ಭೂಮಿ ಗೀತ ರಂಗ ವೇದಿಕೆಯಲ್ಲಿ ರಂಗಾಯಣ ಕಲಾವಿದರು ಪ್ರಸ್ತುತ ಪಡಿಸಿದ “ಪರ್ವ’ ನಾಟಕದ ಕೆಲ ದೃಶ್ಯಗಳನ್ನು ವೀಕ್ಷಿಸಿದರು.
ಈ ವೇಳೆ ರಂಗಾಯಣನಿರ್ದೇಶಕಅಡ್ಡಂಡ ಸಿ.ಕಾರ್ಯಪ್ಪ ಸಚಿವರಿಗೆ ರಂಗಾಯಣದ ಬಗ್ಗೆ ಪರಿಚಯ ಮಾಡಿಕೊಟ್ಟರು. ಈ ವೇಳೆ ಶಾಸಕ
ಎಲ್.ನಾಗೇಂದ್ರ, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಎನ್.ವಿ ಫಣೀಶ್, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.