ಹೊಸ ಡ್ರೋನ್ ನಿಯಮಗಳು ಜಾರಿ
ಸರಳೀಕೃತ ನಿಯಮಗಳ ಮೂಲಕ ಕ್ಷೇತ್ರ ಬೆಳವಣಿಗೆಗೆ ಒತ್ತು
Team Udayavani, Aug 26, 2021, 11:15 PM IST
ನವದೆಹಲಿ: ಇದೇ ವರ್ಷ ಮಾರ್ಚ್‌ನಲ್ಲಿ ಜಾರಿಗೊಂಡಿದ್ದ ಅನ್‌ಮ್ಯಾನ್ಡ್ ಏರ್‌ಕ್ರಾಫ್ಟ್ ಸಿಸ್ಟಂ (ಯು.ಎ.ಎಸ್) ನಿಯಮಗಳನ್ನು ನೇಪಥ್ಯಕ್ಕೆ ಸರಿಸಿ, ಹೊಸ 2021ರ ಡ್ರೋನ್ ನಿಯಮಾವಳಿಗಳನ್ನು ರೂಪಿಸಿದ್ದ ಕೇಂದ್ರ ಸರ್ಕಾರ, ಈ ಹೊಸ ನಿಯಮಗಳನ್ನು ಬುಧವಾರದಿಂದ ಅನುಷ್ಠಾನಗೊಳಿಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಡ್ರೋನ್ ನಿಯಮಗಳ ಸರಳೀಕರಣದ ಮೂಲಕ ಈ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹೊಸ ಸ್ಟಾರ್ಟ್‌ಅಪ್‌ಗ್ಳಿಗೆ ಹಾಗೂ ಹೊಸ ಆವಿಷ್ಕಾರಗಳಿಗೆ ಸಹಾಯವಾಗುತ್ತದೆ. ನಂಬಿಕೆಯ ಆಧಾರದಲ್ಲಿ ಈ ಕ್ಷೇತ್ರವನ್ನು ಬೆಳೆಸುವ ಸದುದ್ದೇಶವೂ ಇದೆ ಎಂದಿದ್ದಾರೆ.
ಇದನ್ನೂ ಓದಿ:ವಾಯುಭಾರ ಕುಸಿತ : ಆ.29, 30ರಂದು ರಾಜ್ಯದ ಆರು ಜಿಲ್ಲೆಗಳಿಗೆ ಹೈ ಅಲರ್ಟ್
ಐದು ಪ್ರಮುಖ ಬದಲಾವಣೆಗಳು
1. ಡ್ರೋನ್ ಹಾರಾಟಕ್ಕಾಗಿ ಪಡೆಯಬೇಕಾದ ರಿಮೋಟ್ ಪೈಲಟ್ ಲೈಸನ್ಸ್‌ಗಾಗಿ ವಿಧಿಸಲಾಗಿದ್ದ ಶುಲ್ಕವನ್ನು 3,000 ರೂ.ಗಳಿಂದ 100 ರೂ.ಗೆ ಇಳಿಸಲಾಗಿದೆ.
2. ನಾನಾ ಕಡೆಗಳಿಂದ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಬ್ರೇಕ್ ಹಾಕಿ, ಸರಳವಾಗಿ, ಸುಲಭವಾಗಿ ಒಪ್ಪಿಗೆ ಅಥವಾ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
3. ಹಸಿರು ವಲಯಗಳಲ್ಲಿ, ನೆಲದಿಂದ 400 ಅಡಿಗಳವರೆಗೆ ಹಾರಾಟ ನಡೆಸಬಹುದಾದ ಡ್ರೋನ್‌ಗಳಿಗೆ ಫ್ಲೈಟ್ ಅನುಮತಿ ಕಡ್ಡಾಯವಾಗಿರುವುದಿಲ್ಲ ಎಂದು ಹೊಸ ನಿಯಮಗಳು ಹೇಳುತ್ತವೆ.
4. ವಿಮಾನ ನಿಲ್ದಾಣಗಳಿಂದ ಸುತ್ತ 8ರಿಂದ 12 ಕಿ.ಮೀ. ವಲಯದಲ್ಲಿ ನೆಲದಿಂದ 200 ಅಡಿ ಎತ್ತರದವರೆಗಿನ ಡ್ರೋನ್ ಹಾರಾಟಕ್ಕೂ ಫ್ಲೈಟ್ ಅನುಮತಿ ಬೇಡ ಎಂದು ಹೇಳಲಾಗಿದೆ.
5. ಡ್ರೋನ್ ಸೇವೆ ನೀಡುವ ಕಂಪನಿಗಳ ನೋಂದಣಿಗಾಗಿ ಈವರೆಗೆ 25 ವಿವಿಧ ಅರ್ಜಿಗಳನ್ನು ತುಂಬಬೇಕಿದ್ದು, ಅವನ್ನು 5ಕ್ಕೆ ಇಳಿಸಲಾಗಿದೆ. ಹಾಗೆಯೇ, ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಕಟ್ಟಬೇಕಿದ್ದ 74 ರೀತಿಯ ಶುಲ್ಕಗಳನ್ನು 4ಕ್ಕೆ ಇಳಿಸಲಾಗಿದೆ.
ಏರ್ ಟ್ಯಾಕ್ಸಿಗೆ ವಿಪುಲ ಅವಕಾಶ: ಸಿಂದಿಯಾ
“ಹೊಸ ಡ್ರೋನ್ ನಿಯಮಗಳಿಂದಾಗಿ, ಮುಂದಿನ ದಿನಗಳಲ್ಲಿ ಏರ್ ಟ್ಯಾಕ್ಸಿ ಸೇವೆಗಳು ಲಭ್ಯವಾಗಲಿವೆ” ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ತಿಳಿಸಿದ್ದಾರೆ. “ಸದ್ಯಕ್ಕೆ ಏರ್ ಟ್ಯಾಕ್ಸಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಜಗತ್ತಿನ ಹಲವು ರಾಷ್ಟ್ರಗಳು ನಿರ್ಧರಿಸಿವೆ. ಹೊಸ ಡ್ರೋನ್ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಅಂಥ ಸೌಕರ್ಯಕ್ಕೆ ರತ್ನಗಂಬಳಿ ಹಾಸಿವೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.