ಶಿಕ್ಷೆ ಅನುಭವಿಸುತ್ತಿರುವ ಈ ಕೈದಿಗಿದೆ ತಿಹಾರ್ ಜೈಲಿನೊಳಗೇ ರಹಸ್ಯ ಕಚೇರಿ!
Team Udayavani, Aug 27, 2021, 6:59 AM IST
ಹೊಸದಿಲ್ಲಿ: ಹೂಡಿಕೆದಾರರಿಗೆ ವಂಚಿಸಿದ ಆರೋಪಕ್ಕೆ ಗುರಿ ಯಾಗಿ, ತಿಹಾರ್ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯುನಿಟೆಕ್ ಲಿಮಿಟೆಡ್ ಸಂಸ್ಥಾಪಕ ರಮೇಶ್ ಚಂದ್ರ ಜೈಲಲ್ಲಿಯೇ ರಹಸ್ಯ ಕಚೇರಿ ಹೊಂದಿದ್ದರು
. ಅಲ್ಲಿಗೆ ಅವರ ಪುತ್ರರಾ ಗಿರುವ ಸಂಜಯ ಚಂದ್ರ, ಅಜಯ ಚಂದ್ರ ಅವರು ಭೇಟಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್ಗೆ ಅರಿಕೆ ಮಾಡಿಕೊಂಡಿದೆ. ಹೀಗಾಗಿ, ರಮೇಶ್ ಚಂದ್ರನನ್ನು ಮುಂಬಯಿಯ ಆರ್ಥರ್ ರಸ್ತೆಯಲ್ಲಿರುವ ಜೈಲಿಗೆ ವರ್ಗಾಯಿ ಸು ವಂತೆ ನ್ಯಾ| ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.
ಕೇಂದ್ರ ತನಿಖಾ ಸಂಸ್ಥೆ ಇ.ಡಿ.ಯ ಪರವಾಗಿ ವಾದಿಸಿದ ಹೆಚ್ಚು ವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ನ್ಯಾಯ ಪೀಠಕ್ಕೆ ಈ ಆಘಾತಕಾರಿ ಅಂಶವನ್ನು ಅರಿಕೆ ಮಾಡಿಕೊಂಡರು.
ರಮೇಶ್ ಚಂದ್ರ ತನ್ನ ಆಪ್ತ ವರ್ಗದ ಕೆಲವರನ್ನು ಜೈಲಿನ ಹೊರಗೆ ನಿಯೋಜಿಸಿ, ತನ್ನ ಸಲಹೆ- ಸೂಚನೆಗಳನ್ನು ಹೊರಗಿನ ಪ್ರಪಂಚಕ್ಕೆ ತಿಳಿಸಲು ಏರ್ಪಾಡು ಮಾಡಿದ್ದರು ಎಂದು ಹೇಳಿದ್ದಾರೆ. ಜೈಲಿನಲ್ಲಿ ಶೋಧ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ರಮೇಶ್ಚಂದ್ರ ಹೊಂದಿದ್ದ ರಹಸ್ಯ ಕಚೇರಿ ವಿಚಾರ ಬಹಿರಂಗವಾಯಿತು ಎಂದರು ಹೆಚ್ಚುವರಿ ಸಾಲಿಸಿಟರ್ ಜನರಲ್. ಅಲ್ಲಿಂದ ಹಲವು ಡಿಜಿಟಲ್ ಸಹಿ, ಕಂಪ್ಯೂಟರ್ಗಳು, ಸೇಲ್ ಡೀಡ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.