ಕರ್ನಾಟಕದಲ್ಲಿರುವ ಎನ್ನಾರೈ ವೇದಿಕೆಗೆ ಉಪಾಧ್ಯಕ್ಷರೇ ಇಲ್ಲ!
Team Udayavani, Aug 27, 2021, 7:30 AM IST
ಮಂಗಳೂರು: ವಿದೇಶಗಳಲ್ಲಿ ಕನ್ನಡಿಗರ ಕುಂದು-ಕೊರತೆಗಳಿಗೆ ಸ್ಪಂದಿಸುವ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯರ ವೇದಿಕೆ (ಎನ್‌ಆರ್‌ಐ ಫೋರಂ)ಯ ಉಪಾಧ್ಯಕ್ಷ ಸ್ಥಾನವು ಕಳೆದ ಮೂರು ವರ್ಷಗಳಿಂದ ಖಾಲಿ ಇದೆ.
2008ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವೇದಿಕೆಯನ್ನು ಸ್ಥಾಪಿಸಿದ್ದರು. ಮುಖ್ಯಮಂತ್ರಿಗಳು ವೇದಿಕೆಯ ಅಧ್ಯಕ್ಷರು. ವಿಧಾನ ಪರಿಷತ್ ಸದಸ್ಯರಾಗಿದ್ದ ಕ್ಯಾ| ಗಣೇಶ್ ಕಾರ್ಣಿಕ್ (2008 ರಿಂದ 2011) ಬಳಿಕ ವಿ.ಸಿ. ಪ್ರಕಾಶ್ (2013ರಿಂದ 2016) ಮತ್ತು ಡಾ| ಆರತಿ ಕೃಷ್ಣ (2016ರಿಂದ 2018) ಉಪಾಧ್ಯಕ್ಷರಾಗಿದ್ದರು. 2018 ಸೆ. 21ರ ಬಳಿಕ ಈ ಹುದ್ದೆ ಖಾಲಿ ಇದೆ.
ಉಪಾಧ್ಯಕ್ಷ ಹುದ್ದೆಯ ಪಾತ್ರ:
ವಿದೇಶಗಳಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಪಾಧ್ಯಕ್ಷರ ಪಾತ್ರ ಮುಖ್ಯ. ಕೊರೊನಾ ಹಾವಳಿಯ ಬಳಿಕ ಅನಿವಾಸಿ ಕನ್ನಡಿಗರು ಬಹಳಷ್ಟು ಸಮಸ್ಯೆ ಗಳನ್ನು ಅನುಭವಿಸಿದ್ದಾರೆ. ವಿವಿಧ ಕಾರಣಗಳಿಂದ ಸಾವು ಸಂಭವಿಸಿ ದಾಗ ಮೃತದೇಹವನ್ನು ಊರಿಗೆ ರವಾನಿಸಲು ರಾಯಭಾರ ಕಚೇರಿಯ ಜತೆಗೆ ವ್ಯವಹರಿಸಿ ಕಾರ್ಯ ಸುಲಭಗೊಳಿಸಲು ಎನ್‌ಆರ್‌ಐ ಉಪಾಧ್ಯಕ್ಷ ಸ್ಥಾನ ಬಹಳಷ್ಟು ಪ್ರಯೋಜನಕಾರಿ.
ಈ ಹಿಂದೆ ಈ ಸ್ಥಾನದಲ್ಲಿದ್ದ ಕ್ಯಾ| ಗಣೇಶ್ ಕಾರ್ಣಿಕ್ ಮತ್ತು ಡಾ| ಆರತಿ ಕೃಷ್ಣ ಅವರಿಗೆ ಈಗಲೂ ಎನ್ನಾರೈಗಳಿಂದ ಸಹಾಯಕ್ಕಾಗಿ ಕರೆಗಳು ಬರುತ್ತವೆ. ಅವರು ತಮ್ಮಿಂದಾದ ನೆರವು ಒದಗಿಸುತ್ತಿದ್ದಾರೆ. ಆದರೆ ಅಧಿಕಾರಯುತವಾಗಿ ಕೆಲಸ ನಿರ್ವಹಿಸಲು ಉಪಾಧ್ಯಕ್ಷರ ಅಗತ್ಯ ಇದೆ.
ಕರಾವಳಿ ಎನ್ನಾರೈಗಳಿಂದ
ಅತ್ಯಧಿಕ ಆದಾಯ : ಮಹಾರಾಷ್ಟ್ರ, ಕೇರಳ ಹೊರತುಪಡಿಸಿದರೆ ಭಾರತಕ್ಕೆ ಅತ್ಯಧಿಕ ಎನ್ನಾರೈ ಆದಾಯ ತರುವ 3ನೇ ರಾಜ್ಯ ಕರ್ನಾಟಕ. ಭಟ್ಕಳದಿಂದ ಮಡಿಕೇರಿ ತನಕ 1.40 ಲಕ್ಷ ಮಂದಿ ಕೇವಲ ಯುಎಇ ದೇಶಗಳಲ್ಲಿದ್ದಾರೆ. ಕೇರಳದಲ್ಲಿ ಎನ್ನಾರೈಗೆ ಪ್ರತ್ಯೇಕ ಸಚಿವಾಲಯ ಇದೆ. ಅಲ್ಲಿನ ಮುಖ್ಯಮಂತ್ರಿ ಪ್ರತೀ ತಿಂಗಳು ಎನ್ನಾರೈ ಜತೆ ಸಂವಾದ ನಡೆಸುತ್ತಾರೆ. ಆದರೆ ಕರ್ನಾಟಕ ಸರಕಾರ ಈ ವೇದಿಕೆಯನ್ನೇ ಮರೆತಂತಿದೆ!
ಕರಾವಳಿಯ ಎನ್ನಾರೈಗಳಿಂದ ರಾಜ್ಯಕ್ಕೆ ಅತ್ಯಧಿಕ ಆದಾಯ ಬರುತ್ತಿದೆ. ಹಾಗಿರುವಾಗ ವೇದಿಕೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ.– ಹಿದಾಯತ್ ಅಡೂxರ್, ಕನ್ನಡಿಗಾಸ್ ಫೆಡರೇಶನ್ ಸಂಚಾಲಕ
ಉಪಾಧ್ಯಕ್ಷ ಸ್ಥಾನ ಕೆಲವು ಕಾರಣಗಳಿಂದ ಖಾಲಿ ಉಳಿದಿದೆ. ಆದಷ್ಟು ಬೇಗನೆ ನೇಮಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.– ಕ್ಯಾ| ಗಣೇಶ್ ಕಾರ್ಣಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.