ಆ.27: ಸಂಜೆ 4 ಗಂಟೆಗೆ ಸಮಾಜ ಸೇವಕ ರವಿ ಕಟಪಾಡಿ ಜತೆ ಉದಯವಾಣಿ ಫೇಸ್ ಬುಕ್ ಲೈವ್
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 12ನೇ ಸೀಸನ್ ಗೆ ರವಿ ಕಟಪಾಡಿ ಆಯ್ಕೆಯಾಗಿದ್ದರು.
Team Udayavani, Aug 27, 2021, 1:03 PM IST
ಉಡುಪಿ: ಸಮಾಜ ಸೇವಕ ರವಿ ಕಟಪಾಡಿ ಅವರು ಶುಕ್ರವಾರ ಸಂಜೆ ಉದಯವಾಣಿ ಕಚೇರಿಗೆ ಭೇಟಿ ನೀಡಲಿದ್ದು, 4ಗಂಟೆಗೆ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:ಔಷಧೀಯವಾಗಿಯೂ ಅತ್ಯಂತ ಉಪಯುಕ್ತ; ಕದಳಿ ಎಂಬ ಕಲ್ಪವೃಕ್ಷ
ಉದಯವಾಣಿಯ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ನಲ್ಲಿ ಭಾಗವಹಿಸುವ ರವಿ ಕಟಪಾಡಿ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯಂದು ವೇಷ ಧರಿಸಲಿದ್ದಾರೆಯೇ? ಕೋವಿಡ್ ನಿಂದ ಎದುರಿಸಿದ ಸಂಕಷ್ಟಗಳೇನು? ದೇಣಿಗೆ ಸಂಗ್ರಹಕ್ಕೆ ಸಮಸ್ಯೆ ಎದುರಾಗಿದೆಯೇ ಹೀಗೆ ಹಲವಾರು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.
ರವಿ ಕಟಪಾಡಿ ಅವರು ತಮ್ಮ ವಿಭಿನ್ನ ರೀತಿಯ ವೇಷದ ಮೂಲಕ ದಾನಿಗಳಿಂದ ಹಣವನ್ನು ಸಂಗ್ರಹಿಸಿ, ನಂತರ ಅದನ್ನು ಬಡಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ರವಿ ಕಟಪಾಡಿ ಈಗಾಗಲೇ ವಿಭಿನ್ನ ವೇಷ ಹಾಕುವ ಮೂಲಕ ಕಳೆದ ಆರೇಳು ವರ್ಷಗಳಿಂದ 54 ಲಕ್ಷ ರೂಪಾಯಿ ಸಂಗ್ರಹಿಸಿದ್ದು, ಅದನ್ನು ಅಶಕ್ತ, ಬಡ ಜನರಿಗೆ ನೆರವು ನೀಡಲು ವಿನಿಯೋಗಿಸಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 12ನೇ ಸೀಸನ್ ಗೆ ರವಿ ಕಟಪಾಡಿ ಆಯ್ಕೆಯಾಗಿದ್ದ ವೇಳೆ ಗೆದ್ದ 12.5 ಲಕ್ಷ ರೂಪಾಯಿ ಹಣವನ್ನೂ ಕೂಡಾ ಬಡಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ವ್ಯಯಿಸುವ ಮೂಲಕ ಹೆಚ್ಚು ಜನಾನುರಾಗಿಯಾಗಿದ್ದರು. ಇಂದು (ಆಗಸ್ಟ್ 27) ಗಂಟೆಗೆ ಉದಯವಾಣಿ ಡಾಟ್ ಕಾಮ್ ನಲ್ಲಿನ ರವಿ ಕಟಪಾಡಿ ಜತೆಗಿನ ಫೇಸ್ ಬುಕ್ ಲೈವ್ ವೀಕ್ಷಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.