ಕುಂಟುತ್ತಾ ಸಾಗಿದ ಹೆದ್ದಾರಿ ವಿಸರಣ್ತೆ ಕಾಮಗಾರಿ

ಬೈರಾಪುರ ಕೆಳ ಸೇತುವೆ ಮಂದಗತಿ ಕಾಮಗಾರಿ ; ಅಪಘಾತಗಳ ಹೊಣೆ ಸಂಸದರು, ಶಾಸಕರು ಹೊರಲಿ: ಸ್ಥಳೀಯರು

Team Udayavani, Aug 27, 2021, 5:47 PM IST

ಕುಂಟುತ್ತಾ ಸಾಗಿದ ಹೆದ್ದಾರಿ ವಿಸರಣ್ತೆ ಕಾಮಗಾರಿ

ಆಲೂರು: ತಾಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ವಾಹನ ಸವಾರರು, ಹೆದ್ದಾರಿ ಬದಿ ಗ್ರಾಮಸ್ಥರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

ಅಲ್ಲದೆ ಬೈರಾಪುರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕೆಳ ಸೇತುವೆ ಕಾಮಗಾರಿಯೂ ಪೂರ್ಣಗೊಳ್ಳದೆ ಆಲೂರು ಪಟ್ಟಣದಿಂದ ಮಗ್ಗೆ ಮಾರ್ಗವಾಗಿ
ಕೆ.ಹೊಸಕೋಟೆ ಕಡೆಗೆ ಹೋಗುವ ವಾಹನ ಸವಾರರು ಹೆದ್ದಾರಿ ದಾಟಲಾಗುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ- 75 ರ ವಿಸ್ತರಣೆ ಕಾಮಗಾರಿ ಆರಂಭ ಗೊಂಡು ವರ್ಷಗಳೇ ಕಳೆದಿದ್ದು ಯಾವಾಗ ಪೂರ್ಣಗೊಳ್ಳುತ್ತದೋ ಎಂದು ಹೆದ್ದಾರಿ ಬದಿಯ ಗ್ರಾಮಗಳ ಜನಕಾಯುತ್ತಿದ್ದಾರೆ.

ಅಪಘಾತ ವಲಯ: ಈ ಸೇತುವೆ ಕಾಮಗಾರಿ ಪೂರ್ಣ ಗೊಳ್ಳದ ಕಾರಣ ಹೆದ್ದಾರಿ ದಾಟುವಾಗ ವಾಹನಗಳಡಿ ಸಿಲುಕಿ ಹಲವು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಬೆಂಗಳೂರು ಹಾಸನದಿಂದ ಸಕಲೇಶಪುರ ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಸೇರಿ ಇತರೆ ಧಾರ್ಮಿಕ ಸ್ಥಳಗಳಿಗೆ
ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಮಾಡಲು 600 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ನಿಗದಿಯಂತೆ ಕಾಮಗಾರಿ ನಡೆಯದ ಕಾರಣ ಹೆದ್ದಾರಿ ಬದಿ ಗ್ರಾಮಸ್ಥರು, ವ್ಯಾಪಾರಿಗಳು ವಾಹನ ಸವಾರರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅವೈಜ್ಞಾನಿಕ, ಕಳಪೆ ಕಾಮಗಾರಿ: ಈ ಕಾಮಗಾರಿ ನಡೆಯುವ ವೇಳೆ ರಾ.ಹೆದ್ದಾರಿ ಪ್ರಾಧಿಕಾರ ಎಂಜಿನಿ ಯರ್‌ಗಳಾಗಲಿ ಅಥವಾ ಇಲಾಖಾ ಅಧಿಕಾರಿಗಳಾಗಲಿಪರಿಶೀಲನೆ ನಡೆಸಿಲ್ಲ. ರಸ್ತೆ ಪಕ್ಕದ ಸರ್ವೀಸ್‌ ರಸ್ತೆಗೆ 6 ತಿಂಗಳಿಂದ ಅಡ್ಡಲಾಗಿ ತಡೆಗೊಡೆ ನಿರ್ಮಾಣ ಮಾಡ ಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ್ದು ಹಲವು ಬಾರಿ ಬಿದ್ದು ಹೋಗಿದೆ. ಮತ್ತೆಕಟ್ಟಲಾಗುತ್ತಿದೆ.

ರಸ್ತೆ ಬಿರುಕು ಆತಂಕ: ಕೆಳ ಸೇತುವೆ ಕಾಮಗಾರಿಗೆ ಆಳವಾಗಿ ಕಾಲುವೆ ತೋಡುತ್ತಿರುವುದರಿಂದ ಸೇತುವೆ ಬಲಭಾಗದಲ್ಲಿ ವಾಹನ ಓಡಾಡಲು ಅನುವು ಮಾಡಿಕೊಳ್ಳಲಾಗಿದೆ. ಆದರೆ, ಈ ಸ್ಥಳದಲ್ಲಿ 10 ರಿಂದ 15 ಅಡಿ ಅಗಲ ರಸ್ತೆ ಬಿರುಕು ಬಿಟ್ಟಿದೆ. ಈ ರಸ್ತೆಯಲ್ಲಿ ಬೆಂ -ಮಂಗಳೂರು ಕಡೆಗೆ ಬಾರಿ ಗಾತ್ರದ ವಾಹನ ಓಡಾಡುವುದರಿಂದ ಯಾವಾಗ ರಸ್ತೆ ಕುಸಿಯುತ್ತದೆಯೋ ಎಂಬ ಆತಂಕ ಎದುರಾಗಿದೆ. ಅವಘಡ ಸಂಭವಿಸುವ ಮುನ್ನ
ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.

ಕುಂಟುತ್ತಾ ಸಾಗಿದ ಸೇತುವೆ ಕಾಮಗಾರಿ
ಆಲೂರು ಪಟ್ಟಣದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆಕಡೆಗೆ ಹೋಗುವವರು ಈ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡೆ ಹೋಗಬೇಕಿದೆ. ವಾಹನ ದಟ್ಟಣೆ ತಪ್ಪಿಸಲು ಹೆದ್ದಾರಿ ವಾಹನ ಯಾವುದೇ ಅಡೆ ತಡೆಯಿಲ್ಲದೇ ಸರಾಗವಾಗಿ ಸಂಚರಿಸಲು ಬೈರಾಪುರ ಗ್ರಾಮದಲ್ಲಿ ಹೆದ್ದಾರಿ ಕಾಮಗಾರಿ ಅಡ್ಡಲಾಗಿ ಸೇತುವೆ ನಿರ್ಮಾಣಮಾಡಲಾಗುತ್ತಿದೆ.

ಪ್ರಯಾಣಿಕರು ಹೈರಾಣ
ಸದ್ಯ ಸೇತುವೆ ಕಾಮಗಾರಿಯೇನೋ ಮುಕ್ತಯವಾಗಿ ಆಲೂರಿನಿಂದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆ ಗ್ರಾಮದಕಡೆ ವಾಹನಗಳು ಸಂಚರಿಸುತ್ತಿವೆ. ಆದರೆಕೆಳಭಾಗದ ಹೆದ್ದಾರಿ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅದೇಕಾರಣ ಬೆಂಗಳೂರು-ಮಂಗಳೂರು ಹೋಗುವ ಹಾಗೂ ಬರುವ ಭಾರೀ ಗಾತ್ರದ ವಾಹನ ಸೇತುವೆ ಪಕ್ಕದಲ್ಲೇ ಹಾದುಹೋಗುತ್ತವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸವಾರರು ಹೈರಾಣಾಗಿದ್ದಾರೆ.

ಅಪಘಾತಗಳಿಗೆ ಶಾಸಕ, ಸಂಸದರೇ ನೇರ ಹೊಣೆ
ಹಾಸನ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸುಮಾರು3 ವರ್ಷಗಳಿಂದಲೂ ಮಂದಗತಿಯಿಂದ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರು, ಸವಾರರು, ಅಪಘಾತಗಳಿಂದ ಹೈರಾಣಾಗಿದ್ದಾರೆ. ಆದರೂ, ಸಂಸದ ಪ್ರಜ್ವಲ್‌ ರೇವಣ್ಣ, ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಣಗಾಲ್‌ ಮೂರ್ತಿ ಎಚ್ಚರಿಸಿದ್ದಾರೆ

ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಗುತ್ತಿಗೆದಾರರ ಮಂದಗತಿ ಕಳಪೆಕಾಮಗಾರಿಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಮೃತರ ಕುಟುಂಬಕ್ಕೆ ಹೊಣೆಯಾರು?. ನೇರ ಹೊಣೆಯನ್ನು ಸಂಸದರು, ಶಾಸಕರು ಹೊರಬೇಕು.
– ಗಣೇಶ್‌, ಸ್ನೇಹಜೀವಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲಿಕ, ಬೈರಾಪುರ

ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಹಾಸನ ಹಾಗೂ ಸಕಲೇಶಪುರದ ಭಾಗದಿಂದ ಬರುವ ಸವಾರರು ಹರಸಾಹಸ ಪಡುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ.
– ಸಿ.ಡಿ.ಅಶೋಕ್‌, ಮಾಜಿ ಅಧ್ಯಕ್ಷರು
ಗ್ರಾಮ ಪಂಚಾಯ್ತಿ ಬೈರಾಪುರ

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ರಸ್ತೆ ಬದಿ ಬೀದಿ ಬದಿವ್ಯಾಪಾರಿಗಳಿಗೆ ತೊಂದರೆಯಾಗಿದೆ. 2-3ವರ್ಷದಿಂದ ವ್ಯಾಪಾರವಿಲ್ಲದೆ ಹಲವು ಕುಟುಂಬ ಬೀದಿಗೆ ಬಿದ್ದಿವೆ.ಆದರೆ, ಶಾಸಕರು, ಸಂಸದರುಈ ಬಗ್ಗೆಕ್ರಮಕೈಗೊಂಡಿಲ್ಲ.
– ರುದ್ರೇಗೌಡ, ಸದಸ್ಯರು ಗ್ರಾಪಂ ಬೈರಾಪುರ

– ಟಿ.ಕೆ.ಕುಮಾರಸ್ವಾಮಿ ಆಲೂರು

ಟಾಪ್ ನ್ಯೂಸ್

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.