ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು “ಛಬ್ಬಿಯ ಕೆಂಪು ಗಣಪ”
ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಈ ಗಣಪ ಎನ್ನುವ ನಂಬಿಕೆ ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಲ್ಲಿದೆ.
ಗಣೇಶ್ ಹಿರೇಮಠ
1827 ರಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಕೃಷ್ಣೇಂದ್ರ ಸ್ವಾಮಿಗಳು ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿನ ಶಾನಭೋಗ ತಿಮ್ಮಪ್ಪನ್ನವರು ಗುರುಗಳನ್ನ ಅದ್ಧೂರಿಯಾಗಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಸಂತೃಪ್ತರಾಗಿದ್ದರು. ಅಂದೇ ಸ್ವಾಮಿಗಳು ವಿಘ್ನವಿನಾಶಕ ಗಣೇಶನನ್ನ ಪೂಜೆ ಮಾಡಿ ಪ್ರತಿ ವರ್ಷ ಉತ್ಸವವನ್ನ ಆಚರಿಸುವಂತೆ ಆಶೀರ್ವದಿಸಿದ್ದರಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಛಬ್ಬಿ ಗ್ರಾಮ ಕೆಂಪು ಗಣೇಶನ ಕಾಶಿಯಾಗಿ ಪರಿಣಮಿಸಿದೆ. ಪ್ರತಿ ವರ್ಷ ಗಣೇಶ್ ಚತುರ್ಥಿಯಂದು ಈ ಗ್ರಾಮದಲ್ಲಿ ಭಕ್ತಿಯ ಪರಾಕಾಷ್ಠೆಯ ಮುಗಿಲು ಮುಟ್ಟಿರುತ್ತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.