ಬಿಜೆಪಿಯಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲ :ಉಮಾಶ್ರೀ


Team Udayavani, Aug 27, 2021, 6:37 PM IST

Women have no freedom in BJP

ಬನಹಟ್ಟಿ : ರಾಜ್ಯದಲ್ಲಿ ಮಹಿಳೆಯ ಜೀವಕ್ಕೆ ಆತಂಕವಿದೆ. ಮೈಸೂರಿನಲ್ಲಿ ಆಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂದಿಸಿದಂತೆ ಬಿಜೆಪಿಯವರು ಮಾತನಾಡುವ ರೀತಿ ನೀತಿಯನ್ನು ನಾವು ಖಂಡಿಸುತ್ತೇವೆ. ಎಂದು ಮಾಜಿ ಶಾಸಕಿ ಉಮಾಶ್ರೀ ಹೇಳಿದರು.

ಶುಕ್ರವಾರ ಬನಹಟ್ಟಿಯ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೊಂದ ಕುಟುಂಬದ ಜೊತೆ ನಾವಿದ್ದೇವೆ ಧೈರ್ಯಗೆಡಬೇಡಿ ಅಂತಹ ಒಂದು ಮಾತು ಬಿಜೆಪಿಯ ಮಂತ್ರಿ ಹಾಗೂ ಮುಖಂಡರ ಬಾಯಿಂದ ಬರೋದಿಲ್ಲ. ಬದಲಾಗಿ ತದ್ವಿರುದ್ಧವಾಗಿ ಮಾತನಾಡುತ್ತಾರೆ. ಅವರ ಮನಸ್ಸಿನ ಸ್ಥಿತಿ ಎಷ್ಟು ಕೀಳಾಗಿದೆ, ನೀಚವಾಗಿದೆ ಎನ್ನುವುದನ್ನು ತೋರಿಸುತ್ತದೆ ನಾವು ಇದನ್ನು ಕಾಂಗ್ರೆಸ್ ಪಕ್ಷದಿಂದ ಖಂಡಿಸುತ್ತೇವೆ ಎಂದರು.

ಮಹಿಳೆಯರಿಗೆ ನಮ್ಮ ರಾಜ್ಯ ಮತ್ತು ನಮ್ಮ ಕ್ಷೇತ್ರದಲ್ಲಿ ಸುರಕ್ಷತೆ ಇಲ್ಲ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಯಾವ ರೀತಿ ಮಹಿಳೆಯರ ಮೇಲೆ ಅವರ ಹಕ್ಕನ್ನು ತಡೆಯುವ ಕೆಲಸಕ್ಕೆ ಕೈ ಹಾಕಿದರು ಆ ಸಂದರ್ಭದಲ್ಲಿ ಅವರ ನಡವಳಿಕೆ ಹೇಗಿತ್ತು ಎನ್ನುವುದನ್ನು ಇಡೀ ರಾಜ್ಯವೇ ನೋಡಿದೆ. ಮಹಿಳೆಯರಿಗೆ ಗೌರವ ಇಲ್ಲ. ಅವರು ಅವರ ಪಕ್ಷದವರೇ ಇರಬಹುದು ಆದರೆ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ನೀತಿ ನಡುವಳಿಕೆ ಬಿಜೆಪಿ ಪಕ್ಷದಲ್ಲಿ ಇಲ್ಲ. ಯಾವ ಮಹಿಳೆಗೂ ಸ್ವಾತಂತ್ರ್ಯವಿಲ್ಲ. ಅವಳು ದಾಸಿಯಾಗಿಯೇ ಅಥವಾ ಸೇವಕಳಾಗಿ, ಅವರ ಅಧೀನದಲ್ಲಿ ಇರಬೇಕೆ ಹೊರತು. ಯಾವುದೇ ಕಾರಣಕ್ಕೂ ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡಲು ಯೋಗ್ಯಳಲ್ಲ ಇದೇ ತತ್ವದ ಮೇಲೆ ಬಂದಂತವರು ಬಿಜೆಪಿಯವರು.

ರಾಜ್ಯದಲ್ಲಿ ಯಾರಾದರೂ ಪತ್ರಕರ್ತರು ಮಾತನಾಡಿದರೆ, ಆಡಳಿತದ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಜನದ್ರೋಹಿಗಳು ರಾಜ್ಯದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ. ಒಟ್ಟಾರೆ ಬಿಜೆಪಿಯ ದುರಾಡಳಿತದಿಂದ ರಾಜ್ಯ ಹಾಗೂ ನಮ್ಮ ಕ್ಷೇತ್ರದ ಜನ ನರಳುತ್ತಿದ್ದಾರೆ ಹಾಗೂ ಭಯದಲ್ಲಿ ಜನ ಬದುಕುತ್ತಿದ್ದಾರೆ ಎಂದ ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.

ಉಮಾಶ್ರೀಯನ್ನೂ ಮೆತ್ತಗೆ ಮಾಡಬೇಕು ಎಂದು ನನ್ನ ಮೇಲೂ ಇಲ್ಲ ಸಲ್ಲದ ಕೇಸ್ ದಾಖಲಿಸುತ್ತಿದ್ದಾರೆ. ನಾನೂ ಮಹಾಲಿಂಗಪುರ ಚುನಾವಣೆ ಪ್ರಕರಣ ನಡೆದಾಗ ಊರಲ್ಲಿ ಇರಲಿಲ್ಲ ಆದರೂ ನನ್ನ ಮೇಲೆ ಕೇಸ್, ನನ್ನ ಜೊತೆ 35 ಜನ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ. ನಿಮ್ಮ ಕಾರ್ಯಕರ್ತರನ್ನು ನೀವೆ ಎಳೆದಾಡಿದ ಬಗ್ಗೆ ಮಾಧ್ಯಮಗಳು ಬಿತ್ತರಿಸಿವೆ. ನೀವು ಮಾಡಿದ್ದನ್ನು ಜನ ನೋಡಿದ್ದಾರೆ. ಇದನ್ನು ನಾವು ಖಂಡಿಸಿದ್ದು, ಮಹಿಳೆಯರ ಪರವಾಗಿ ನಿಂತಿದ್ದು ಉಮಾಶ್ರೀಯ ಅಪರಾಧವೇ ? ಸುಳ್ಳು ಕೇಸ್ ಹಾಕಲು ತಮಗೆ ನಾಚಿಕೆ ಬರಬೇಕು. ಉಮಾಶ್ರೀ ಇದಕ್ಕೆ ಅಂಜುವುದಿಲ್ಲ. ನಾವು ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿದ್ದೇವೆ ನಾವು ಇಲ್ಲಿ ಇರುವವರೆಗೆ ಯಾರಿಗೂ ಅಂಜಬೇಕಾಗಿಲ್ಲ. ಸತ್ಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ಸತ್ಯ ಇದ್ದಲ್ಲಿ ಧರ್ಮ ಇದ್ದೇ ಇರುತ್ತದೆ ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ನಾವೆಲ್ಲ ಇವರ ದುರಾಡಳಿತದ ವಿರುದ್ಧ ಹೋರಾಡಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷ ತೊರೆದು ಹೋಗಿರುವ ಎಲ್ಲರೂ ಮರಳಿ ಬರುವವರಿಗೆ ಸ್ವಾಗತಿಸುತ್ತೇನೆ. ಬಡವರಿಗೆ, ಶ್ರೀಮಂತರಿಗೆ ಬೇದ ಭಾವ ಇಲ್ಲದೇ, ಧರ್ಮ, ಜಾತಿ ಬೇಧ ಇಲ್ಲದೇ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಕೂಡಿಸುವ ಕೆಲಸ ಮಾಡುತ್ತದೆ. ಅದು ಅವರಿಗೆ ಬೇಕಾಗಿಲ್ಲ. ಅವರು ಧರ್ಮ, ಜಾತಿಯ ಹೆಸರಿನಲ್ಲಿ ಒಡೆಯುತ್ತಾರೆ. ಪಕ್ಷ ತಾಯಿ ಇದ್ದಂತೆ ಅವಳನ್ನು ಸದೃಢಗೊಳಿಸಬೇಕು. ಜಾತಿ, ಧರ್ಮ ರಾಜಕಾರಣಕ್ಕೆ ಬಲಿಯಾಗಬೇಡಿ, ಅಭಿವೃದ್ಧಿ ಪಥದಲ್ಲಿ ನಮ್ಮ ಕೈ ಜೋಡಿಸಿ ಎಂಬುದು ನಮ್ಮ ವಿನಂತಿ. ಪಕ್ಷ ಸಂಘಟನೆಗೆ ಮೊದಲು ಒತ್ತು ಕೊಡಿ, ಪಕ್ಷವನ್ನು ಸದೃಢ ಮಾಡಲು ನನ್ನ ಜೊತೆ ಕೈಜೋಡಿಸಿ ಎಂದು ಉಮಾಶ್ರೀ ಹೇಳಿದರು.

ಇದನ್ನೂ ಓದಿ:ಶಿಥಿಲಗೊಂಡ ಅಂಗನವಾಡಿ ಕಟ್ಟಡ ದುರಸ್ತಿ ಮಾಡಿ

ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಹಾಗೂ ಬಿಜೆಪಿ ನಗರಸಭೆ ಸದಸ್ಯೆಯ ಪತಿ ಶೇಖರ ಹಕಲದಡ್ಡಿ ಹಾಗೂ ಶಾಂತವೀರ ಬೀಳಗಿ ಬಿಜೆಪಿ ತೋರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ ಮಾಜಿ ಸಚಿವೆ ಉಮಾಶ್ರೀ ಸ್ವಾಗತಿಸಿದರು.

ಸುರೇಶ ಮಡಿವಾಳ, ಸುರೇಶ ಹಿಪ್ಪರಗಿ, ಚಿದಾನಂದ ಮಟ್ಟಿಕಲ್ಲಿ, ನೀಲಕಂಠ ಮುತ್ತೂರ, ನಗರಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಮಾಳು ಹಿಪ್ಪರಗಿ, ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಚಿದಾನಂದ ಗಾಳಿ, ಚನ್ನವೀರಪ್ಪ ಹಾದಿಮನಿ, ಬಸವರಾಜ ಗುಡೋಡಗಿ, ಓಂಪ್ರಕಾಶ ಮನಗೂಳಿ, ಸಂಗಪ್ಪ ಕುಂದಗೋಳ, ನಸೀಮ ಮೊಕಾಸಿ, ರಾಹುಲ ಕಲಾಲ, ರಮೇಶ ಸವದಿ, ರಾಮು ಜುಗಳಿ, ಹಾರುಣ ಬೇವೂರ, ಹಾರುಣ ಸಾಂಗ್ಲೀಕರ, ಬಸವರಾಜ ಶಿರೋಳ, ಮೊಹಮ್ಮದ ಝಾರೆ, ಸಂಜು ಜೋತಾವರ, ಗೋವಿಂದ ನಿಂಗಸಾನಿ, ಶ್ರೀಶೈಲ ಮೇಣಿ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.