ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಸವಲತ್ತು: ಜಿಲ್ಲಾಧಿಕಾರಿ
ಶಿರೂರು ಹೈವೇ ನೆಸ್ಟ್ (ಮಿನಿ) ಉದ್ಘಾಟನೆ
Team Udayavani, Aug 27, 2021, 10:00 PM IST
ಬೈಂದೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ವಿನೂತನ ಯೋಜನೆಯಾದ ಹೈವೇ ನೆಸ್ಟ್ (ಮಿನಿ) ಮಳಿಗೆಯನ್ನು ಜಿಲ್ಲಾಧಿಕಾರಿ ಜಿ. ಜಗದೀಶ್‌ಅವರು ಶಿರೂರಿನಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಹಲವು ಸವಲತ್ತುಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಜತೆಗೆ ಇನ್ನಷ್ಟು ಸೌಲಭ್ಯಗಳು ಲಭಿಸಲಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್ ಹಾಗೂ ಸಕಲ ಸವಲತ್ತುಗಳ ಸೆಂಟರ್‌ಗಳನ್ನು ಮಾಡಲಾಗುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಉತ್ತಮ ಕಾರ್ಯ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರಿನ ಪ್ರೊಜೆಕ್ಟ್ ಡೈರೆಕ್ಟರ್ ಶಿಶುಮೋಹನ್ ಮಾತನಾಡಿ, ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕುಂದಾಪುರ ಶಾಸ್ತ್ರೀ ಪಾರ್ಕ್, ಫ್ಲೈ ಓವರ್ ಹಾಗೂ ಪಡುಬಿದ್ರಿ ಹೆದ್ದಾರಿ ಸಮಸ್ಯೆ ಇತ್ಯರ್ಥಗೊಳಿಸಿರುವ ಜತೆಗೆ ಕಾಮಗಾರಿ ಅತ್ಯಂತ ವೇಗ ಪಡೆದುಕೊಂಡಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ತಂಡಕ್ಕೆ ಅಭಿನಂದನೆಗಳು ಎಂದರು.
ಇದನ್ನೂ ಓದಿ:ಅತ್ಯಾಚಾರ ಪ್ರಕರಣದ ತನಿಖೆ ತೀವ್ರಗತಿಯಲ್ಲಿದೆ: ಸಚಿವ ಎಸ್.ಟಿ. ಸೋಮಶೇಖರ್
ಹೊಸದಾಗಿ ನಿರ್ಮಾಣಗೊಂಡಿರುವ ಕಾರವಾರ -ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉತ್ತರ ಕನ್ನಡದಿಂದ ಶಿರೂರಿನವರೆಗೆ 3 ಟೋಲ್ ಪ್ಲಾಜಾಗಳು ಬರಲಿದ್ದು ಇವುಗಳಲ್ಲಿ ಸೇವೆ ದೊರೆಯಲಿದೆ. ಇದರಿಂದ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯುತ್ತದೆ. ಅಲ್ಲದೆ ಇನ್ನಷ್ಟು ಹೊಸ ಸೇವೆಗಳನ್ನು ಸೇರ್ಪಡಿಸುವ ಬಗ್ಗೆ ಚಿಂತನೆಯಿದ್ದು ಸದ್ಯದಲ್ಲೇ ಇವುಗಳು ಕೂಡ ಅನುಷ್ಠಾನಗೊಳ್ಳಲಿದೆ ಮತ್ತು ಹೆದ್ದಾರಿ ಪ್ರಾಧಿಕಾರ ದೊಂದಿಗೆ ನಿರಂತರ ಸಹಕಾರ ನೀಡುತ್ತಿರುವಂತ ಜಿಲ್ಲಾಡಳಿತ, ಸಾರ್ವಜನಿಕರನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮಿಷನರ್ ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಐ.ಆರ್.ಬಿ. ಕಂಪೆನಿಯ ಸಿ.ಜಿ.ಎಂ. ಮೋಹನ್‌ದಾಸ್, ಜನರಲ್ ಮ್ಯಾನೇಜರ್ ವಿವೇಕ್ ಗರಡಿಕರ್, ಪ್ರಪ್ಪುಲ್ ಕಾಕಡೆ, ಅಜೇಯ್, ನವೀನ್, ರಾಷ್ಟ್ರೀಯ ಹೆದ್ದಾರಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಗುರು ನಿರೂಪಿಸಿ, ವಂದಿಸಿದರು.
ಮಿನಿ ನೆಸ್ಟ್‌ನಿಂದ ತುರ್ತು ಸೇವೆ
ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಸಹಕಾರದೊಂದಿಗೆ ಆದಷ್ಟು ಶೀಘ್ರ ಇನ್ನಷ್ಟು ವಿನೂತನ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುವುದು ಮಿನಿ ನೆಸ್ಟ್‌ನಿಂದ ಸರಳ ಹಾಗೂ ಅತ್ಯಂತ ರಿಯಾಯಿತಿ ದರದಲ್ಲಿ ಪ್ರಯಾಣಿಕರಿಗೆ ತುರ್ತು ಸೇವೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.