ಬಾರ್ಸಿಲೋನಾ ಓಪನ್ ಚೆಸ್ : ಸೇತುರಾಮನ್ ಚಾಂಪಿಯನ್
Team Udayavani, Aug 28, 2021, 1:20 AM IST
ಬಾರ್ಸಿಲೋನಾ : ಭಾರತದ ಗ್ರ್ಯಾನ್ಮಾಸ್ಟರ್, ಅಗ್ರ ಶ್ರೇಯಾಂಕದ ಎಸ್.ಪಿ. ಸೇತುರಾಮನ್ “ಬಾರ್ಸಿಲೋನಾ ಓಪನ್’ ಚೆಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಭಾರತದ ಮತ್ತೋರ್ವ ಸ್ಪರ್ಧಿ ಕೆ. ಮುರಳಿ ತೃತೀಯ ಸ್ಥಾನಿಯಾದರು.
9 ಸುತ್ತುಗಳ ಈ ಸ್ಪರ್ಧೆಯಲ್ಲಿ ಸೇತುರಾಮನ್ 7.5 ಅಂಕ ಸಂಪಾದಿಸಿದರು. ರಶ್ಯದ ಡ್ಯಾನಿಲ್ ಯುಫ ಕೂಡ ಇಷ್ಟೇ ಅಂಕ ಗಳಿಸಿದ್ದರು. ಆದರೆ ಅತ್ಯತ್ತಮ ಟೈ-ಬ್ರೇಕ್ ಸ್ಕೋರ್ ಲೆಕ್ಕಾಚಾರದಲ್ಲಿ ಸೇತುರಾಮನ್ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಸೇತುರಾಮನ್ ಎಲ್ಲ ಸುತ್ತುಗಳಲ್ಲೂ ಅಜೇಯರಾಗಿ ಉಳಿದಿದ್ದರು. ಆರನ್ನು ಗೆದ್ದು, ಮೂರನ್ನು ಡ್ರಾ ಮಾಡಿಕೊಂಡಿದ್ದರು. ಕೊನೆಯ 3 ಸುತ್ತುಗಳಲ್ಲಿ ಸಾಧಿಸಿದ ಹ್ಯಾಟ್ರಿಕ್ ಗೆಲುವು ಇವರ ಪ್ರಶಸ್ತಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಈ ಹಂತದಲ್ಲಿ ಅವರು ಭಾರತದ ಎನ್.ಆರ್. ವಿಶಾಖ್ ವಿರುದ್ಧವೂ ಜಯ ಸಾಧಿಸಿದ್ದರು. 5ನೇ ಸುತ್ತಿನ ಸೇತುರಾಮನ್-ಕೆ. ಮುರಳಿ ನಡುವಿನ ಪಂದ್ಯ ಡ್ರಾ ಆಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.