ವಿಭಿನ್ನ ವ್ಯಕ್ತಿತ್ವದ ಇಬ್ಬರು ಬ್ರಿಟಿಷ್‌ ಪ್ರಾಧ್ಯಾಪಕರು


Team Udayavani, Aug 28, 2021, 6:30 AM IST

ವಿಭಿನ್ನ ವ್ಯಕ್ತಿತ್ವದ ಇಬ್ಬರು ಬ್ರಿಟಿಷ್‌ ಪ್ರಾಧ್ಯಾಪಕರು

ಬ್ರಿಟಿಷರು ಪ್ರಭುತ್ವ ಸ್ಥಾಪಿಸಿದ ದೇಶಗಳಿಗೆ ನಾಗರಿಕತೆ ಪಾಠ ಹೇಳುವ ಅಗತ್ಯವಿರುವುದಾಗಿ ಪ್ರತಿಪಾದಿಸುತ್ತಿ ದ್ದರು. ಇದನ್ನು ಸತ್ಯವೆಂದು ನಂಬಿದ ಬಹುಸಂಖ್ಯೆಯ ಬ್ರಿಟಿಷರೂ, ಭಾರತೀಯರೂ ಇದ್ದರು. ಈಗ ದಿನನಿತ್ಯ ವಿದೇಶಗಳ ದೊಡ್ಡಸ್ತಿಕೆ ಕಂಡು ವಲಸೆ ಹೋಗುವಾಗ ಎಳೆ ತಲೆಮಾರಿಗೆ ಇದರ ಅರ್ಥವಾಗದು.

ಮೈಸೂರು ಮಹಾರಾಜಾ ಕಾಲೇಜಿನ ವಿದೇಶೀ ಪ್ರಾಂಶುಪಾಲರಾಗಿದ್ದ ಜೆ.ಸಿ.ರಾಲೊ ( 1928- 43), ಎ.ಬಿ. ಮ್ಯಾಕಿಂಟಾಷ್‌ (1943-44) ಅವರ ಭಿನ್ನ ವ್ಯಕ್ತಿತ್ವ ಕುತೂಹಲ ತರಿಸುತ್ತದೆ.

‘The members of the staff haunt the college at all hours’ ಎಂದು ತೋರಿಕೆಯ ದೂರನ್ನು ರಾಲೊ ಹೆಮ್ಮೆಯಿಂದ ಕಾಲೇಜು ದಿನಾಚರಣೆಯ ವರದಿಯಲ್ಲಿ ಹೇಳಿದ್ದರು. ಅಧ್ಯಾಪಕರು ಸಾಂದರ್ಭಿಕ ರಜೆಗೆ ನಿಯಮಾವಳಿ ಬಂದಾಗ ಪ್ರತಿಭಟಿಸಿ ‘Causual leave is meant for unforeseen circumstences. How can they give notice of the unforeseen’ ಎಂದು ಹೇಳಿದ್ದರು. “ನಮ್ಮ ಗ್ರಂಥಪಾಲಕರು ಮಧ್ಯಮಯುಗದ ತಿರುಗುಗಾಯಕ ಕವಿಗಳಂತೆ ದೇಶವನ್ನೆಲ್ಲ ಸುತ್ತಿ ಸಾಹಿತ್ಯ ಭಿಕ್ಷೆ ಹಾಕುತ್ತಿದ್ದಾರೆ’ ಎಂದು ಭಾರತವಾಚನ ಮಾಡುತ್ತಿದ್ದ ಕೃಷ್ಣಗಿರಿ ಕೃಷ್ಣರಾಯರನ್ನು, “ನಮ್ಮ ಮೆನೇಜರ್‌ ತಣ್ತೀವೇತ್ತರು. ಯಾವ ಕಾಲೇಜಿಗೆ ಇದೆ ಈ ಭಾಗ್ಯ?’ ಎಂದು ಸೇತೂರಾಯರನ್ನು ಕುರಿತು ಬಣ್ಣಿಸುತ್ತಿದ್ದರು.

ಆಗ ಇಂಗ್ಲೆಂಡ್‌ನಿಂದ ಬಂದವರು ದೊಡ್ಡ ಮನುಷ್ಯರೆಂಬ ಭಾವನೆ ಇದ್ದರೂ ಇವರಿಗೆ ಸಿಗುತ್ತಿದ್ದುದು “ರಾಲೊ ಬಂದ, ಮ್ಯಾಕಿಂಟಾಷ್‌ ಹೇಳಿದ’ ಎಂಬ ಏಕವಚನದ ಸಂಬೋಧನೆ. ಭಾರತೀಯ ಸಿಬಂದಿ ಭಾರತೀಯರಿಗೆ ಬಹುವಚನ ಪ್ರಯೋಗಿಸುತ್ತಿದ್ದರು.

ರಾಲೊ ಪಾಠಕ್ಕೆ ಉತ್ತಮ ಅಭಿಪ್ರಾಯವಿತ್ತು. ಮುನ್ಸಿಪಾಲಿಟಿ ಅಧ್ಯಕ್ಷರ ಹೆಸರಿನಲ್ಲಿ ಬಂದ ಪತ್ರಕ್ಕೆ ರಾಲೊ “ನನ್ನ ಹೆಸರು ರಾಲೊ, “ರಾಲೋಸ್‌’ ಅಲ್ಲ. ನಿಮ್ಮ ಗುಮಾಸ್ತರಿಗೆ ತಿಳಿಸಿ’ ಎಂದು ಪತ್ರ ಬರೆದರು. “ಏನೋ ಸ್ವಾಮಿ, ಅವರು ದೊಡ್ಡವರು. ಮರ್ಯಾದೆ ಕೊಡೋಣ ಅಂತ ಬಹುವಚನ ಬಳಸಿದೆ (ನರಸಿಂಹ್ಯನವರು, ರಾಮರಾಯರು ಹೀಗೆ ರಾಲೊ+s). ಮರ್ಯಾದೆ ಬೇಡವಾದರೆ ಬಿಡಲಿ, ನಮ್ಮಪ್ಪನ ಗಂಟೇನು ಹೋಯಿತು’ ಎಂದು ಆ ಗುಮಾಸ್ತ ಹೇಳಿದಾಗ ರಾಲೊ ”Both of us made an honest attempt. but it was futile, He didn’t learn english, I didn’t learn manners’ ಎಂದರಂತೆ.

ಬರಬರುತ್ತ ರಾಲೊ ಬಗೆಗಿನ ನಿಲುವು ಭಾರತೀಯರಲ್ಲಿ ಬದಲಾಯಿತು. ಅಸಹಕಾರ ಚಳವಳಿ ಕುರಿತ ಚರ್ಚೆಯೊಂದರಲ್ಲಿ ಮೊಹಮದ್‌ ವಲೀ ಉಲ್ಲ ಕಟು ಮಾತುಗಳಿಂದ ಬ್ರಿಟಿಷರನ್ನು ಖಂಡಿಸಿದಾಗ ಅಧ್ಯಕ್ಷತೆ ವಹಿಸಿದ್ದ ರಾಲೊ ‘Perhaps there have been mistakes on the part of the British Government. India’s desire for independence is natural. but it is perhaps better for India, in her own interests that she should accept the tuition of England in the art of government for some time longer. Apart from all this, it hurts me that with me in the chair my students used such harsh language about England’ ಉದ್ಗರಿಸಿದರು.

To encourage khadi is to act against England’ ಎಂದು ಹೇಳಿದ್ದರು. 19402ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ನಡೆದಾಗ ರಾಲೊ ಭಾರತೀಯ ಸಹೋದ್ಯೋಗಿಗಳ ಜತೆ ದರ್ಪದಿಂದ ವರ್ತಿಸಿದರಂತೆ. ಅವರು ಮೈಸೂರು ಬಿಟ್ಟು ಇಂಗ್ಲೆಂಡ್‌ಗೆ ಹೊರಡುವಾಗ ನೋಡಲು ಹೋಗದ ಎ.ಎನ್‌. ಮೂರ್ತಿರಾಯರು (ಹಿರಿಯ ಸಾಹಿತಿ), ಕಾಲು ಶತಮಾನ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ದಕ್ಷತೆಯಿಂದ ಕಾಲೇಜನ್ನು ಆಳಿ, ಎಲ್ಲರ ವಿಶ್ವಾಸವನ್ನೂ ಕಳೆದುಕೊಂಡರಲ್ಲ ಎಂಬ ನೋವು ಬಾಧಿಸಿದೆ. ನೋಡದಿದ್ದುದು ತಪ್ಪು ಎಂದು 1978ರಲ್ಲಿ “ಚಿತ್ರಗಳು- ಪತ್ರಗಳು’ ಕೃತಿಯಲ್ಲಿ ಬರೆದರು.

ಮ್ಯಾಕಿಂಟಾಷ್‌ರಲ್ಲಿ “ಭಾರತೀಯರು ನಮ್ಮ ಆಜ್ಞಾನುವರ್ತಿಗಳು, ನಮಗಿಂತ ಕೀಳು’ ಎಂಬ ಭಾವನೆ ಎಳ್ಳಷ್ಟೂ ಇರಲಿಲ್ಲ. ಮ್ಯಾಕಿಂಟಾಷ್‌ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದರ್ಭ “ಕ್ವಿಟ್‌ ಇಂಡಿಯಾ, ಕ್ವಿಟ್‌ ಇಂಡಿಯಾ’ ಎಂದು ಗುಂಪು ಕೂಗಿದಾಗ ‘I s’pose we’ ll ha’t’ do it. Pch. yes, we must do’t, Pch’ ಎಂದರು. ಇದು ಹೀಗೆ: ‘I suppose we all have to do it. yes, we must do it Pch. =”ಶ್‌…!.

ಕಿರಿಯರಾದ ರಾಲೊಗೆ ಹೆಚ್ಚಿನ ವೇತನ, ಪ್ರಾಂಶುಪಾಲತ್ವ ಸಿಕ್ಕಿದಾಗ ಮ್ಯಾಕಿಂಟಾಷ್‌ ಸ್ವಲ್ಪವೂ ಹಚ್ಚಿ ಕೊಂಡಿರಲಿಲ್ಲ. ಯಾರಿಂದಲೂ ಹೆಚ್ಚಿನ ಮರ್ಯಾದೆ ಬಯಸದೆ ಎಲ್ಲರಿಂದಲೂ ಪಡೆದರು. ಅವರ ಪಾಠ ಸೊಗಸಲ್ಲ ಎಂದವರು ಕಡಿಮೆ ಸಂಖ್ಯೆಯವರು, ಮೆಚ್ಚಿದವರು ನೂರಾರು. ರಾಲೊ ಹೇಳಿದಂತೆ ಭಾರತೀಯರಿಗೆ ಆಡಳಿತ ತರಬೇತಿ ಅಗತ್ಯವೆನ್ನುವುದು ಇದುವರೆಗೂ ಕಂಡುಬಂದ ಸತ್ಯವೆ ಎಂದೆನಿಸುತ್ತದೆ.

1833ರಲ್ಲಿ ರಾಜಾಸ್‌ ಫ್ರೀ ಸ್ಕೂಲ್‌ ಆಗಿ ಮೊಳಕೆಯೊಡೆದ ಸಂಸ್ಥೆ ಬೆಳೆದು ಬ್ರಿಟಿಷ್‌ ಅಧಿಪತ್ಯದ ಹೊರಗಿನ ರಾಜ್ಯಗಳಲ್ಲಿ ಮೊದಲ ವಿ.ವಿ.ಯಾಗಿ 1916ರಲ್ಲಿ ರೂಪುಗೊಂಡಿತು. ಆಗ ವಿ.ವಿ., ಕಾಲೇಜು ಬೇರ್ಪಡೆಯಾಯಿತು. ಈಗ 31ನೆಯ ಪ್ರಾಂಶುಪಾಲರಾಗಿ ಮಂಗಳೂರು ಮೂಲದ ಪ್ರೊ| ಅನಿತಾ ವಿಮ್ಲಾ ಬ್ರ್ಯಾಗ್ಸ್‌ ಕರ್ತವ್ಯದಲ್ಲಿದ್ದಾರೆ.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.