3 ತಾಸು ಒದ್ದಾಡಿ ಮೃತಪಟ್ಟ ಅಪರೂಪದ ಕಪ್ಪು ಚಿರತೆ
Team Udayavani, Aug 28, 2021, 8:32 PM IST
ಶಿರಸಿ: ತಾಲೂಕಿನ ಬನವಾಸಿ ಅರಣ್ಯ ವಲಯದ ಹುಲೇಮಳಗಿಯಲ್ಲಿ ಸುಮಾರು 4 ವರ್ಷದ ಅಪರೂಪದ ಕಪ್ಪು ಚಿರತೆ ಮೂರು ಗಂಟೆಗಳಿಗೂ ಅಧಿಕ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿ ಕೊನೆಗೂ ಇಹಲೋಕ ತ್ಯಜಿಸಿದ ಘಟನೆ ಶುಕ್ರವಾರ ನಡೆದಿದೆ.
ಮುಂಜಾನೆ 8 ಗಂಟೆ ಸುಮಾರಿಗೆ ಸ್ಥಳೀಯರೊಬ್ಬರಿಗೆ ಚಿರತೆ ಮಣ್ಣು ಹಾಗೂ ಮರದ ಕೊಂಬೆ ನಡುವೆ ಸಿಲುಕಿ ಬಿದ್ದು ಒದ್ದಾಡುವುದು ಕಂಡು ಬಂದಿದ್ದು, ಅರಣ್ಯ ಇಲಾಖೆಗೆ ತಿಳಿಸಿದರು. ವಲಯ ಅರಣ್ಯಾಧಿಕಾರಿ ಉಷಾ ತಕ್ಷಣ ತಮ್ಮ ತಂಡದೊಂದಿಗೆ ಆಗಮಿಸಿ ಹೆಣ್ಣು ಚಿರತೆ ಟೊಂಕದ ಭಾಗಕ್ಕೆ ಉರುಳು ಹಾಕಿದ್ದು ಕಂಡು ಬಂದಿದೆ. ಹಂದಿ ನಿಯಂತ್ರಣಕ್ಕೆ ಹಾಕಿದ ಉರುಳಿಗೆ ಹೆಣ್ಣು ಚಿರತೆಯ ಟೊಂಕ ಸಿಲುಕಿರಬೇಕು ಎಂದು ಅಂದಾಜಿಸಿದರು.
ಅರವಳಿಕೆ ತಜ್ಞರ ಕರೆಸಿ ಕ್ರೋಧದಲ್ಲಿ ಇರುವ ಕಪ್ಪು ಚಿರತೆ ಹಿಡಿದು ಉಪಚರಿಸಲು ಪ್ರಯತ್ನಿಸಿದರು . ಆದರೂ ಅದು ಗರ್ಜಿಸುತ್ತ ನರಳುತ್ತಿತ್ತು. ಬಳಿಕ ಅದು ಅದೇ ಸ್ಥಿತಿಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿತು.
ಬನವಾಸಿ ಭಾಗದಲ್ಲಿ ಕಾಣಿಸಿಕೊಂಡ ಪ್ರಥಮ ಕಪ್ಪುಚಿರತೆ ಇದಾಗಿದ್ದು,ವಲಯ ಅರಣ್ಯಾಧಿಕಾರಿ ಕಚೇರಿ ಆವಾರದಲ್ಲಿ ಅಂತಿಮ ವಿಧಿ ನಡೆಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ . ಹೆಗಡೆ ಸೇರಿದಂತೆ ಅನೇಕ ಅಧಿಕಾರಿಗಳು, ನೂರಾರು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.