ಉಳ್ಳಾಲ: ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನ ರಕ್ಷಣೆ


Team Udayavani, Aug 28, 2021, 9:07 PM IST

fthtryrt

ಉಳ್ಳಾಲ: ಮೀನುಗಾರಿಕೆಯ ದೋಣಿಯಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನೊರ್ವನನ್ನು ಉಳ್ಳಾಲ ಉಳಿಯದ ಮೀನುಗಾರರ ತಂಡದವರು ರಕ್ಷಿಸಿದ ಘಟನೆ ಶನಿವಾರ ನಡೆದಿದೆ.

ಬೆಂಗ್ರೆ ನಿವಾಸಿ ನವಾಝ್ (35) ರಕ್ಷಣೆಗೊಳಗಾದವರು. ಓಷಿಯನ್ ಬ್ರೀಝ್ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್ ಡಿ,ಸೋಜ  ಹಾಗೂ ಬೆಂಗ್ರೆ ನಿವಾಸಿ ರಿತೇಶ್ ಮತ್ತು ಅಜಿತ್ ಮೀನುಗಾರನನ್ನು ರಕ್ಷಿಸಿದವರು.

ಶನಿವಾರ ಬೆಳಗ್ಗೆಯಿಂದಲೇ ಸಮುದ್ರದ ಅಬ್ಬರ ಹೆಚ್ಚಿದ್ದು, ಅನೇಕ ದೋಣಿಗಳು ಮೀನುಗಾರಿಕೆಗೆ ತೆರಳದೆ ಉಳಿದಿತ್ತು. ಆದರೆ, ನವಾಝ್ ಇದ್ದ ದೋಣಿ ಸಮುದ್ರಕ್ಕೆ ತೆರಳಿ ಬಲೆ ತೆಗೆದು ವಾಪಾಸ್ ಆಗುತ್ತಿದ್ದಾಗ ಅಳಿವೆ ಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ  ಭಾರೀ ಗಾಳಿಯೊಂದು ಅಪ್ಪಳಿಸಿತ್ತು. ಪರಿಣಾಮ ನವಾಝ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದ. ಆದರೆ, ಅಲೆಗಳ ಅಪ್ಪಳಿಸುವಿಕೆಯಿಂದಾಗಿ ದೋಣಿ ನಿಲ್ಲಿಸಲಾಗಲಿಲ್ಲ. ನವಾಝ್‍ಗೆ ತಾತ್ಕಾಲಿಕ ರಕ್ಷಣೆಗೆ ದೋಣಿಯಲ್ಲಿದ್ದ ಥರ್ಮೋಕಾಲ್ ಎಸೆಯಲಾಗಿತ್ತು. ಅದರ ಸಹಾಯದೊಂದಿಗೆ ಆತ ಸಮುದ್ರದ ಅಲೆಗಳ ನಡುವೆ ಮುಳುಗೇಳುತ್ತಿದ್ದ.

ಇತ್ತ ಓಷಿಯನ್ ಬ್ರಿಝ್ ದೋಣಿಯಲ್ಲಿದ್ದ ಮೀನುಗಾರರು ಶುಕ್ರವಾರ ಮೀನುಗಾರಿಕೆಗೆ ಬಲೆ ಹಾಕಿ ವಾಪಸ್ಸಾಗಿದ್ದರು. ಶನಿವಾರ ಬಲೆಯಲ್ಲಿ ಬಿದ್ದಿರುವ ಮೀನುಗಳನ್ನು ತರಲು ಅಳಿವೆ ಬಾಗಿಲಿನ ಮೂಲಕ ತರಲು ಹೋಗಿದ್ದು ದೋಣಿ ವಾಪಾಸ್ಸಾಗಿ ಅಳಿವೆ ಬಾಗಿಲಿನತ್ತ ಬರುತ್ತಿದ್ದಾಗ ಸಮುದ್ರ ದಡದಲ್ಲಿದ್ದ ಓಷಿಯನ್ ಬ್ರಿಝ್ ದೋಣಿಯ ಮಾಲೀಕ ನಿಶಾನ್ ಜಾಯ್ ಅವರು ತನ್ನ ದೋಣಿಯಲ್ಲಿದ್ದ ಮೀನುಗಾರರಿಗೆ ಓರ್ವ ಸಮುದ್ರದ ಅಳಿವೆ ಬಾಗಿಲಿನಲ್ಲಿ ಸಿಲುಕಿದ್ದ ಮಾಹಿತಿ ನೀಡಿದ್ದರು.

ಸಮುದ್ರದ ಅಲೆಗಳ ನಡುವೆ ಸುಮಾರು ಹತ್ತು ನಿಮಿಷ ಹುಡುಕಾಟದ ಬಳಿಕ  ಉಳ್ಳಾಲ ಅಳಿವೆ ಬಳಿ ಸಮುದ್ರದ ಅಲೆಗಳ ನಡುವೆ ವ್ಯಕ್ತಿಯೊಬ್ಬ ಮುಳುಗೇಳುತ್ತಿದುದ್ದನ್ನು ಕಂಡಾಗ ಮೀನುಗಾರರ ತಂಡ ಆತನ ಬಳಿ ತೆರಳಿ ದೋಣಿಯ ಮೂಲಕ ಹಗ್ಗವನ್ನು ಬಿಸಾಕಿ ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಅಳಿವೆ ಬಾಗಿಲಿನಲ್ಲಿ ಅತ್ಯಂತ ಅಪಾಯಕಾರಿ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದವನನ್ನು ರಕ್ಷಿಸಲು ಹರಸಾಹಸ ಪಡೆಯಬೇಕಾಯಿತು ಎಂದು ರಕ್ಷಣೆ ಮಾಡಿದ ಪ್ರೇಮ್ ಪ್ರಕಾಶ್ ಡಿಸೋಜ ಪತ್ರಿಕೆಗೆ ಮಾಹಿತಿ ನೀಡಿದರು.

ಸಮುದ್ರದ ಅಲೆಗಳೊಂದಿಗೆ ಈಜಾಡಿ ಬಳಲಿದ್ದ ನವಾಝ್‍ಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗ್ರೆಗೆ ಕಳುಹಿಸಿ ಕೊಡಲಾಯಿತು.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Ullal ಜು. 10- 16: ಸೋಮೇಶ್ವರ‌ ರೈಲ್ವೇಗೇಟ್‌ ಬಂದ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Brijesh Chowta ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.