ಮರು ನೋಂದಣಿ ತಪ್ಪಿಸಲಿದೆ “ಭಾರತ್ ಸೀರೀಸ್’ : ಸೆಪ್ಟೆಂಬರ್ 15 ರಿಂದ ಜಾರಿ
ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಹೊಸ ವಾಹನ ನೋಂದಣಿ ಕ್ರಮ
Team Udayavani, Aug 29, 2021, 7:30 AM IST
ಹೊಸದಿಲ್ಲಿ: ದೇಶದಲ್ಲಿ ಹೊಸ ವಾಹನಗಳಿಗೆ “ಭಾರತ್ ಸೀರೀಸ್’ (ಬಿಎಚ್-ಸೀರೀಸ್) ಎಂಬ ಹೊಸ ನೋಂದಣಿ ಗುರುತು ಪರಿಚಯಿಸಿರುವುದಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶನಿವಾರ ಪ್ರಕಟಿಸಿದೆ.
ಬಿಎಚ್ ಗುರುತು ಹೊಂದಿರುವ ವಾಹನಗಳ ಮಾಲಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಾಯಿಸಿದ ಸಂದರ್ಭದಲ್ಲಿ ಹೊಸದಾಗಿ ನೋಂದಣಿ ಮಾಡಿಸಿ ಕೊಳ್ಳಬೇಕಾಗಿಲ್ಲ. ಯೋಧರು, ಕೇಂದ್ರ – ರಾಜ್ಯ ಸರಕಾರಿ ಉದ್ಯೋಗಿ ಗಳು, ಸರಕಾರಿ ಸ್ವಾಮ್ಯದ ಉದ್ದಿಮೆಗಳ ಉದ್ಯೋಗಿಗಳು ಹಾಗೂ 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿ ಇರುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಇದನ್ನು ಐಚ್ಛಿಕವಾಗಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.
ವಿಶೇಷ ನಿಯಮ
ಇದು ಪ್ರತ್ಯೇಕ ಮತ್ತು ವಿಶೇಷ ವಾಹನ ನೋಂದಣಿ ನಿಯಮ. ಇದೇ ವರ್ಷದ ಸೆಪ್ಟಂಬರ್ 15ರಿಂದ ಜಾರಿಗೆ ಬರಲಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಇದರಡಿ ಮರುನೋಂದಣಿ ಸಂದರ್ಭ ಮೂಲ ರಾಜ್ಯದಿಂದ ನಿರಾಕ್ಷೇಪಣ ಪತ್ರ ಪಡೆಯುವ ಅಗತ್ಯ ಇಲ್ಲ. ಅಲ್ಲದೆ, ಮರು ನೋಂದಣಿಯನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು.
ಇದರ ವಿಶೇಷವೇನು?
ಈ ವಿವಿಧ ಸಿಬಂದಿಗೆ ಪದೇಪದೆ ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತವೆ. ಅಂಥವರು ತಮ್ಮ ವಾಹನಗಳನ್ನು ಬಿಎಚ್ ಸೀರೀಸ್‌ನಡಿ ನೋಂದಣಿ ಮಾಡಿಸಿದ್ದರೆ, ಬೇರೆಡೆ ವರ್ಗವಾದಾಗ ತಮ್ಮ ವಾಹನಗಳನ್ನು ಅಲ್ಲಿ ಮರು ನೋಂದಣಿ ಮಾಡಿಸುವ ಆವಶ್ಯಕತೆ ಇರುವುದಿಲ್ಲ. ಪ್ರಸ್ತುತ ಇರುವ ನಿಯಮದಂತೆ ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹೋದರೆ ಅಲ್ಲಿ 12 ತಿಂಗಳು ಮಾತ್ರ ವಾಹನ ಓಡಿಸಬಹುದು. ಬಳಿಕ ಮರು ನೋಂದಣಿ ಕಡ್ಡಾಯ. ಆದರೆ ಬಿಎಚ್ ಸೀರೀಸ್ ನೋಂದಣಿ ಹೊಂದಿರುವ ವಾಹನಗಳ ಮರುನೋಂದಣಿ ಅಗತ್ಯವಿಲ್ಲ.
ರಸ್ತೆ ತೆರಿಗೆ ನಿಯಮ ಸಡಿಲಿಕೆ
ಇದರಡಿ ಪೆಟ್ರೋಲ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ವಾಹನಗಳು 2 ವರ್ಷಗಳ ಅವಧಿಗಳಲ್ಲಿ ಈ ತೆರಿಗೆ ಪಾವತಿಸಬಹುದು. ಡೀಸೆಲ್ ವಾಹನಗಳಿಗಾದರೆ ಈ ತೆರಿಗೆಗೆ ಶೇ. 2 ಸೆಸ್ ವಿಧಿಸಲಾಗುತ್ತದೆ. ವಿದ್ಯುತ್ ಚಾಲಿತ ವಾಹನಗಳಿಗೆ ಶೇ. 2 ಕಡಿಮೆ ಸೆಸ್ ವಿಧಿಸಲಾಗುತ್ತದೆ.
ಮಾದರಿ ನೋಂದಣಿ ಸಂಖ್ಯೆ
ಬಿಎಚ್ ಸೀರೀಸ್ ವಾಹನಗಳ ನೋಂದಣಿ ಸಂಖ್ಯೆ ಸ್ವಯಂಚಾಲಿತವಾಗಿ “YY BH#### XX’ ಮಾದರಿಯಲ್ಲಿ ಇರುತ್ತದೆ. ” YY ‘ಎಂಬುದು ವಾಹನ ಮೊದಲ ಬಾರಿ ನೋಂದಣಿಯಾದ ವರ್ಷ. “BH’ ಎಂಬುದು ಭಾರತ್ ಸೀರೀಸ್ ಎಂಬುದರ ಸೂಚಕ. “XX’ ಎಂಬುದು ನೋಂದಣಿಯ ಭಾಗ.
ತೆರಿಗೆ ಪಾವತಿ ಹೇಗೆ?
ಈ ಮಾದರಿಯ ನೋಂದಣಿಗಳಲ್ಲಿ ಕಾರಿನ ದರದ ಮೇಲೆ ಶೇಕಡಾವಾರು ಲೆಕ್ಕಾಚಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂ. ಮೌಲ್ಯದ ವರೆಗಿನ ವಾಹನಕ್ಕೆ ಶೇ. 8 ತೆರಿಗೆ, 10ರಿಂದ 20 ಲಕ್ಷ ರೂ. ಮೌಲ್ಯದ ವಾಹನಕ್ಕೆ ಶೇ. 10, 20 ಲಕ್ಷ ರೂ.ಗಳಿಗೂ ಅಧಿಕದ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.