ಬಿಲ್ಲವರ ಅಸೋಸಿಯೇಶನ್ ಭಿವಂಡಿ ಸ್ಥಳೀಯ ಕಚೇರಿ: ಗುರು ಜಯಂತಿ ಆಚರಣೆ
Team Udayavani, Aug 29, 2021, 2:30 PM IST
ಭಿವಂಡಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಭಿವಂಡಿ ಸ್ಥಳೀಯ ಕಚೇರಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯು ಆ. 23ರಂದು ಭಿವಂಡಿ ಪದ್ಮ ನಗರದ ವರಾಳದೇವಿ ರೋಡ್‌ನ ಶ್ರೀ ನಾರಾ ಯಣಗುರು ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7ರಿಂದ ಗಣಪತಿಹೋಮ, 9ರಿಂದ ನವಕ ಪ್ರಧಾನ ಕಲಶಾಭಿಷೇಕ, ಪೂರ್ವಾಹ್ನ 10ರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂದಿರದ ಅರ್ಚಕ ಸಂಜೀವ ಪೂಜಾರಿ ಅವರಿಂದ ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನದಾನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಿವಂಡಿ ಪರ್ಮಿಟ್ ರೂಮ್ ಅಸೋಸಿಯೇಶನ್‌ನ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ನಿತ್ಯಾನಂದ ಭಕ್ತ ಮಂಡಳಿಯ ಅಧ್ಯಕ್ಷ ವಾಸು ಕೆ. ಶೆಟ್ಟಿ, ಹೊಟೇಲ್ ಉದ್ಯಮಿಗಳಾದ ಶಂಕರ್ ವಿ. ಪೂಜಾರಿ ಹಾಗೂ ಹರೀಶ್ ಬಿ. ಪೂಜಾರಿ, ಕಲ್ಯಾಣ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸದಾಶಿವ ಸುವರ್ಣ, ಭಾರತ್ ಬ್ಯಾಂಕ್ ಭಿವಂಡಿ ಶಾಖೆಯ ಪ್ರಬಂಧಕ ಹರೀಶ್ ಕುಂದರ್ ಮತ್ತು ಅಂಜುರ್‌ಫಾಟಾ ಶಾಖೆಯ ಉಪ ಪ್ರಬಂಧಕ ಸಂದೀಪ್ ಪೂಜಾರಿ, ಭಿವಂಡಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಜಯರಾಮ್ ಎಂ. ಪೂಜಾರಿ ಉಪಸ್ಥಿತರಿದ್ದರು.
ಇದನ್ನೂ ಓದಿ:2050ರ ವೇಳೆಗೆ ದಕ್ಷಿಣ ಮುಂಬಯಿ ಮುಳುಗಡೆ: ಚಾಹಲ್
ಪೂಜಾ ಕಾರ್ಯಕ್ರಮದ ದಾನಿಗಳಿಗೆ ಪ್ರಸಾದವ ನ್ನಿತ್ತು ಗೌರವಿಸಲಾಯಿತು. ದಾನಿಗಳಾಗಿ ಸಂದೀಪ್ ಎಸ್. ಪೂಜಾರಿ, ರಾಜೇಶ್ ಪೂಜಾರಿ,
ಶೇಖರ್ ಕೆ. ಪೂಜಾರಿ, ಜಗದೀಶ್ ಸಿ. ಕೌಡೂರು, ಧರ್ಮೇದ್ರ ಸುವರ್ಣ, ವಸಂತ ಬಿ. ಪೂಜಾರಿ ಸಹಕರಿಸಿದರು. ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಭಿವಂಡಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ದೇವು ಪೂಜಾರಿ ಮಾರ್ಗದರ್ಶನ ಹಾಗೂ ಕಾರ್ಯಾಧ್ಯಕ್ಷ ರತ್ನಾಕರ ಪೂಜಾರಿ ಮುಂದಾಳ ತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಕಾರ್ಯದರ್ಶಿ ಉಮೇಶ್ ಸುವರ್ಣ, ಕೋಶಾಧಿಕಾರಿ ಪ್ರಶಾಂತ್ ಆರ್. ಪೂಜಾರಿ, ಯುವ ವಿಭಾಗದ ಪ್ರತಿನಿಧಿ ಸಚಿನ್ ಡಿ. ಪೂಜಾರಿ, ಮಹಿಳಾ ವಿಭಾಗದ ಪ್ರತಿನಿಧಿ ಹರಿಣಾಕ್ಷಿ ಪೂಜಾರಿ ಹಾಗೂ ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು, ವಿಶೇಷ ಆಮಂತ್ರಿತರು ಹಾಗೂ ಸಭಾಧ್ಯಕ್ಷರು ಸಹಕಾರದೊಂದಿಗೆ ಗುರುಜಯಂತಿ ಆಚರಣೆ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.