ಏರಿಕೆಯತ್ತ ನಿಷ್ಕ್ರಿಯ ಕಂಟೈನ್ಮೆಂಟ್ ಝೋನ್
ಸೋಂಕು ಇಳಿಕೆಯಿಂದ ಕಡಿಮೆಯಾಗಿದ್ದ ಕಂಟೈನ್ಮೆಂಟ್ ; 10 ವಾರ್ಡ್‌ಗಳಲ್ಲಿ 47 ಕೋವಿಡ್ ಪತ್ತೆ
Team Udayavani, Aug 29, 2021, 3:48 PM IST
ಬೆಂಗಳೂರು: ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 31 ಸಾವಿರಕ್ಕೂ ಹೆಚ್ಚು ವರದಿಯಾದರೂ, ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹತೋಟಿಯಲ್ಲಿರುವುದು ರಾಜಧಾನಿ ಮಂದಿಯನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಜಧಾನಿಗೂ ಕೇರಳದ ಸೋಂಕು ಹರಡುವ ಆತಂಕ ಇದ್ದು, ಬಿಬಿಎಂಪಿ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ
ದಲ್ಲಿಡಲು ಕಸರತ್ತು ಆರಂಭಿಸಿದೆ.ಆಮೂಲಕ 3ನೇ ಅಲೆಯಲ್ಲಿ ಸೋಂಕು ಹೆಚ್ಚಾಗದಂತೆ ಮೂಲದಲ್ಲಿಯೇ ನಿಯಂತ್ರಣದಲ್ಲಿಡಲು ನಿರ್ಧರಿಸಿದೆ.
ಕೋವಿಡ್‌ಎರಡನೇ ಅಲೆ ತಗ್ಗಿದ್ದರೂ ಬಿಬಿಎಂಪಿ ಕೋವಿಡ್ ಪರೀಕ್ಷೆ ಮಾಡುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಎರಡನೇ ಅಲೆಯಲ್ಲಿ ಯಾವ ರೀತಿ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತೋ, ಅದನ್ನುಈಗಲೂ ಮುಂದುವರಿಸಿಕೊಂಡು ಬರುತ್ತಿದೆ. ಪ್ರತಿನಿತ್ಯ 50 ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಜತೆಗೆ, ಸೋಂಕು ಹೆಚ್ಚು ಕಂಡುಬರುತ್ತಿರುವ ಪ್ರದೇಶಗಳ ಸುತ್ತಮುತ್ತ ಹೆಚ್ಚು ಪರೀಕ್ಷೆ ಮಾಡುವಂತೆ ಪಾಲಿಕೆ ಆಯುಕ್ತರು, ಆಯಾ ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸದ್ಯ ಕೋವಿಡ್ ಸೋಂಕು ಪಾಸಿಟಿವಿಟಿ ದರ ಶೇ.1ಕ್ಕಿಂತಕಡಿಮೆ ಇದೆ. ಆಗಸ್ಟ್ ಕೊನೆಯ ವಾರ ಶೇ.0.52 ರಷ್ಟು ದಾಖಲಾಗಿದ್ದು, ಪರೀಕ್ಷೆಗೊಳಗಾಗುತ್ತಿರುವ ಒಂದು ಸಾವಿರ ಮಂದಿಯಲ್ಲಿ ಏಳು ಜನರಲ್ಲಿ ಮಾತ್ರ ಸೋಂಕು ದೃಢಪಡುತ್ತಿದೆ. ಆ ಮೂಲಕ ನಿಷ್ಕ್ರಿಯ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಏರಿಕೆಯೊಂದಿಗೆ ಸೋಂಕು ಪ್ರಕರಣಗಳು ಕಡಿಮೆ ವರದಿಯಾಗುತ್ತಿದೆ ಎಂದು ಪಾಲಿಕೆ
ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ತಾಲಿಬಾನ್ ಹೊಸ ನಿಯಮ: ಸಂಗೀತ, ಟಿವಿ-ರೇಡಿಯೋಗಳಲ್ಲಿ ಮಹಿಳೆಯರ ಧ್ವನಿಗೂ ಇಲ್ಲ ಅವಕಾಶ!
10ವಾರ್ಡ್‌ಗಳಲ್ಲಿ 47ಪ್ರಕರಣ: ವರಮಹಾಲಕ್ಷ್ಮಿ, ಮೊಹರಂ ಹಬ್ಬ ಆಚರಣೆಯ ನಡುವೆಯೂ ಕೋವಿಡ್ ಸೋಂಕು ಹತೋಟಿಯಲ್ಲಿರುವುದು
ಬಿಬಿಎಂಪಿಗೆ ಸಮಾಧಾನಕರ ವಿಚಾರವಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ ಮಾತ್ರ ಸೋಂಕು ಪ್ರಕರಣಗಳು ಒಂದಂಕಿಯಲ್ಲಿ ವರದಿಯಾಗುತ್ತಿದೆ. ಈ ಹಿಂದೆ ಇವು ಡೇಂಜರ್ ಝೋನ್‌ಗಳಾಗಿ ಪರಿವರ್ತನೆಯಾಗಿದ್ದವು. ಜುಲೈ ಕೊನೆಯ ವಾರ ಈ 10 ವಾರ್ಡ್‌ಗಳಲ್ಲಿ (10 ದಿನಗಳಲ್ಲಿ) 671ಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ 10 ವಾರ್ಡ್‌ಗಳಲ್ಲಿ ಕೇವಲ 47 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಬಿಬಿಎಂಪಿಗೆ ಸಮಾಧಾನಕರ ಸಂಗತಿಯಾಗಿದೆ.
ಜುಲೈ ಕೊನೆ ವಾರ 500 ಆಸುಪಾಸಿನಲ್ಲಿದ್ದ ಸೋಂಕು ಹೊಸ ಪ್ರಕರಣಗಳು, ಆಗಸ್ಟ್ ಕೊನೆಯ ವಾರದಲ್ಲಿ 300ರಿಂದ 350ರ ಆಸುಪಾಸಿಗೆ ಇಳಿಕೆ ಕಂಡಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಪೈಕಿ ಯಾವ ವಾರ್ಡಿನಲ್ಲಿಯೂ ನಿತ್ಯ ಸೋಂಕು ಪ್ರಕರಣಗಳು ಒಂದಂಕಿ ದಾಟುತ್ತಿಲ್ಲ. ಆರೋಗ್ಯ ತಜ್ಞರ ಸೂಚನೆಯಂತೆ ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಮೈಕ್ರೋ ಕಂಟೈನ್ಮೆಂಟ್ ಝೋನ್, ಸೋಂಕು ಪತ್ತೆಯಾದ 100 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚು ಪರೀಕ, ಹೆಚ್ಚು ಜನಸಂದಣಿ ಸೇರುವ ಸ್ಥಳ, ಆಪಾರ್ಟ್‌ಮೆಂಟ್, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ತಪಾಸಣೆಗಳ ಹೆಚ್ಚಳ ಸೇರಿದಂತೆ ಹಲವು ಮುಂಜಾಗ್ರತಾಕ್ರಮಗಳನ್ನುಕೈಗೊಳ್ಳಲಾಗಿದೆ.
ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಂದೇ ದಿನ 31 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದೆ. ಬೆಂಗಳೂರು ಪಕ್ಕದ ರಾಜ್ಯವಾಗಿರುವುದರಿಂದ ನಮ್ಮಲ್ಲಿಯೂ ಕೋವಿಡ್ ಸೋಂಕು ಹರಡುವ ಆತಂಕವಿದೆ. ನಗರದಲ್ಲಿ ಕಟ್ಟೆಚ್ಚರ ವಹಿಸಬೇಕಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಂಡಿದ್ದೇವೆ.
-ಗೌರವ್ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ
– ವಿಕಾಸ್ ಆರ್, ಪಿಟ್ಲಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.