ಅಳಿವಿನಂಚಿನ ಮಾಕಳಿ ಬೇರು ಕಳ್ಳಸಾಗಾಟದಿಂದ ಸಸ್ಯಕ್ಕೆ ಕುತ್ತು
Team Udayavani, Aug 30, 2021, 3:57 PM IST
ಯಳಂದೂರು: ಬಿಆರ್‌ಟಿ ಅರಣ್ಯ ಪ್ರದೇಶದವ್ಯಾಪ್ತಿಯಲ್ಲಿ ಮಾಕಳಿ ಬೇರಿನ ಅಕ್ರಮ ಸಂಗ್ರಹಣೆಮಾಡಿ ಮಾರಾಟ ಪ್ರಕರಣಗಳು ಹೆಚ್ಚಾಗಿದ್ದು,ಅಪರೂಪದ ಸಸ್ಯ ಮಾಕಳಿ (ಮೀಸೇಕಾಯಿ ಗಿಡ)ರಕ್ಷಣೆಗೆ ಮಾಡುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ,ಬಂಡೀಪುರ, ಕಾವೇರಿ ವನ್ಯಧಾಮ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ ಸೇರಿದಂತೆ ಇತರೆ ಕಲ್ಲು ಬಂಡೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಅಪೋಸೈನಿಸಿಯೆ ಕುಟುಂಬಕ್ಕೆಸೇರಿದ ವನ್ಯಸಸ್ಯ ಮಾಕಳಿಬೇರು ಇದನ್ನು ಮಾಗಳಿಬೇರು ಎಂತಲೂ ಕರೆಯುತ್ತಾರೆ. ಇದರಲ್ಲಿ ಬಿಡುವಕಾಯಿ ಮೀಸೆ ಆಕಾರದಲ್ಲಿರುವುದರಿಂದ ಮೀಸೇ ಕಾಯಿಬೇರು ಪರ್ಯಾಯನಾಮದಿಂದ ಕರೆಯುವ ವಾಡಿಕೆ ಇದೆ. ಇದರ ವೈಜ್ಞಾನಿಕಹೆಸರು ಡೆಕಾಲೆಪಿಸ್ ಹ್ಯಾಮಿಲ್‌ಟೋನಿ ಎಂದುಕರೆಯುತ್ತಾರೆ.
ದಕ್ಷಿಣ ಭಾರದದಲ್ಲೇಕಂಡುಬರುವ ಅಪರೂಪದ ಸಸ್ಯ ವರ್ಗವಾಗಿದೆ.ಬಂಡೆಗಳ ನಡುವೆ ಹೆಚ್ಚಾಗಿ ಬೆಳೆಯುತ್ತಿದೆ. ಈಸಸ್ಯ ವರ್ಗ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಅಳಿವಿನ ಅಂಚಿಗೆ ಸಾಗುತ್ತಿದೆ.
ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಯಳಂದೂರುವಲಯದಲ್ಲಿ ಇತ್ತೀಚಿನಕೆಲವು ದಿನಗಳಲ್ಲಿ ಎರಡುಪ್ರಕರಣಗಳಿಂದ 1300ಕೆ.ಜಿ.ಗಳಷ್ಟುಹಸಿಮಾಕಳಿ ಬೇರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದದನ್ನುಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹೆಚ್ಚಿ 5 ಜನಆರೋಪಿಗಳನ್ನು ಬಂಧಿಸಿದ್ದರು.
ಅಳಿವಿನಂಚಿನಲ್ಲಿರುವ ಮಾಕಳಿ ಬೇರಿಗೆತಮಿಳುನಾಡು, ಕೇರಳ ರಾಜ್ಯದಲ್ಲಿ ಅಪಾರಬೇಡಿಕೆ ಇದೆ. ಕಲ್ಲು ಬಂಡೆಗಳ ಕೆಳಗೆ ಬಳ್ಳಿಯಾಕಾರದಲ್ಲಿ ಸುಮಾರು 8 ಮೀಟರ್‌ವರೆಗೆಬೆಳೆಯುತ್ತದೆ. ಜುಲೈ, ಆಗಸ್ಟ್ ಸಮಯದಲ್ಲಿ ಈಬೇರನ್ನು ಸಂಗ್ರಹಿಸಲು ಸುಲಭವಾಗುತ್ತದೆ.
ಈಹಿನ್ನೆಲೆಯಲ್ಲಿ ಹೆಚ್ಚಾಗಿ ಮಳೆಗಾಲದಲ್ಲಿ ಈಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತದೆ.111ಔಷಧಿ ಗುಣವುಳ್ಳ ಮಾಕಳಿ111ಮಾಕಳಿ ಬೇರನ್ನು ಬಳಸಿಕೊಂಡು ಉಪ್ಪಿನಕಾಯಿತಯಾರಿಸಲಾಗುತ್ತದೆ. ಜೊತೆಗೆ ಔಷಧ ರೂಪದಲ್ಲಿಅಜೀರ್ಣ, ಹೆಂಗಸರ ಗುಪ್ತ ರೋಗಗಳ ನಿವಾರಣೆ,ಜ್ವರ,ಕೆಮ್ಮು, ಶೀತ ಸೇರಿದಂತೆ ಆಯುರ್ವೇದ,ಯುನಾನಿ, ಸಿದ್ಧ ಔಷಧಗಳಲ್ಲಿ ಇದರ ಬಳಕೆ ಅಧಿಕವಾಗಿದೆ.
ಈ ಬೇರಿನ ಪುಡಿಗೆಕಿಲೋಗೆ 500 ರಿಂದ600 ರೂ. ಮಾರುಕಟ್ಟೆ ದರವಿದೆ.ಕೆಲ ಸಂದರ್ಭದಲ್ಲಿಇನ್ನೂ ಹೆಚ್ಚಿನ ದರಕ್ಕೂ ಮಾರಾಟವಾಗುತ್ತದೆ. ಇದರಅಕ್ರಮ ಸಾಗಾಟವಾದಲ್ಲಿ ಜೀವ ಹಾಗೂ ಸಸ್ಯವೈವಿಧ್ಯತೆಗೆ ಮಾರಕವಾಗಿ ಪರಿಗಣಿಸುವ ಸಾಧ್ಯತೆಇದ್ದು, ಇದಕ್ಕೆಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತಷ್ಟುಕಠಿಣ ಕಾನೂನು ರೂಪಿಸಬೇಕಿದೆ.
ಫೈರೋಜ್‌ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.