ಕೃಷ್ಣನೆಂದರೇ, ಮಧುರ ಪ್ರೇಮದ ಅಮರ ನಾಯಕ..!
Team Udayavani, Aug 30, 2021, 4:03 PM IST
ಪ್ರಾತಿನಿಧಿಕ ಚಿತ್ರ
ಕೃಷ್ಣ ಎಂದರೆ ಪರಮ ತುಂಟ ಮಗು, ಮಧುರ ಪ್ರೇಮದ ಅಮರ ನಾಯಕ, ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತು ಕಂಡ ಅತ್ಯಂತ ಕಲರ್‌ಫುಲ್ ದೇವರು. ಮತ್ತು ಹೀಗೆಲ್ಲಾಇದ್ದೂ ದೇವರಾಗಬಹುದಾ ಎಂಬ ಅಚ್ಚರಿಗೆ ಕಾರಣವಾದ ಪರಮ ಸಾಮಾನ್ಯ.
ಬದುಕಿನ ಕಷ್ಟಕಾಲದಲ್ಲಿರುವ ಕುಚೇಲರಿಗೆ ಕೃಷ್ಣನೊಬ್ಬ ಒಲಿದು ಬರಬಾರದೇ ಎಂಬ ಕಾತುರ, ಸೋಲಿನ ಸುಳಿಗೆ ಸಿಕ್ಕಿದವರಿಗೆ ದಾರಿ ತೋರುವ ಕೃಷ್ಣನೊಬ್ಬನಿದ್ದರೆ ಎಂಬ ಆತುರ. ಒಳ್ಳೆಯ ಫ್ರೆಂಡ್, ಅಷ್ಟೇ ಅಲ್ಲ ಸದಾಕಾಲವೂ ಜೀವಂತಿಕೆ ತುಂಬಿ ತುಳುಕುತ್ತದೆ ಎಂಬ ನಂಬಿಕೆ.
ಕೃಷ್ಣ ಯಾವ ವಯಸ್ಸಿಗೆ ಹೇಗಿರಬೇಕೋ ಹಾಗೇ ಬೆಳೆದಿದ್ದ. ಏನೇನು ಮಾಡಬೇಕೋ ಅದನ್ನೆಲ್ಲವನ್ನೂ ಪರಿಪೂರ್ಣವಾಗಿ ಮಾಡಿದ್ದ. ಹಾಗಾಗಿಯೇ ಅವನ ಬದುಕು ಎಲ್ಲ ವಯಸ್ಸಿನವರಿಗೂ ಇಷ್ಟವಾಗುವುದು.
ಇದನ್ನೂ ಓದಿ : ಅಫ್ಘಾನ್ ಗೆ ಮರಳಿದ ಒಸಾಮ ಬಿನ್ ಲಾಡೆನ್ ನ ಮಾಜಿ ಆಪ್ತ ಸಹಾಯಕ ಅಮಿನ್ ಉಲ್ ಹಖ್
ದ್ವಿಪೂರ್ವ ಯುಗದಲ್ಲಿ ಭೂಮಿಯ ಮೇಲೆ ಅಲೌಕಿಕ ಶಕ್ತಿಯೊಂದಿಗೆ ದೈವಿಕ ಅವತಾರದಲ್ಲಿ ಹುಟ್ಟಿಬಂದವನು ಶ್ರೀ ಕೃಷ್ಣ. ದಕ್ಷಿಣ ಭಾರತೀಯರ ಪ್ರಕಾರ ಕೃಷ್ಣನು ಶ್ರಾವಣ ಮಾಸದಲ್ಲಿ ಜನಿಸಿದ್ದನು ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸ ಬಿಟ್ಟರೆ ಒಂದೇ ದಿನದಂದು ಆಚರಣೆ ಮಾಡಲಾಗುವುದು.
ಮಥುರ ರಾಜನಾದ ಕಂಸನು ದಬ್ಬಾಳಿಕೆಯ ರೂಪದಲ್ಲಿ ಆಳ್ವಿಕೆಯನ್ನು ನಡೆಸಿಕೊಂಡು ಬರುತ್ತಿದ್ದನು. ಅವನ ದಬ್ಬಾಳಿಕೆಯನ್ನು ಜನರು ಸಹಿಸಲು ಕಷ್ಟವಾಗುತ್ತಿತ್ತು. ಆದರೆ ಇವನು ತನ್ನ ತಂಗಿ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ.
ಈ ಸಂದರ್ಭದಲ್ಲಿ ದೇವಕಿಯನ್ನು ವಾಸುದೇವನಿಗೆ ಕೊಟ್ಟು ವಿವಾಹ ಮಾಡಿಸಿದನು. ನಂತರ ದಂಪತಿಯನ್ನು ಕರೆದೊಯ್ಯುತ್ತಿರುವಾಗ ದೇವಕಿ ಮತ್ತು ವಾಸುದೇವನ 8 ನೇ ಮಗುವಿನಿಂದ ಕಂಸನ ಮರಣ ಉಂಟಾಗುವುದು ಎಂದು ಆಕಾಶವಾಣಿ ತಿಳಿದುಬಂದಿತ್ತು .
ದೇವಕಿಗೆ ಹುಟ್ಟಿದ ಎಲ್ಲಾ ಶಿಶುಗಳನ್ನು ಕೊಲ್ಲಲು ಕಂಸ ನಿರ್ಧಾರ ಮಾಡಿದ. ಜೊತೆಗೆ ತನ್ನ ತಂಗಿ ಹಾಗೂ ಬಾವನನ್ನು ಸೆರೆಮನೆಗೆ ತಳ್ಳಿದನು. ಏಳನೇ ಮಗು (ಬಲರಾಮ) ದೈವಿಕ ಶಕ್ತಿಯಿಂದ ರೋಹಿಣಿ ಗರ್ಭಕ್ಕೆ ಅತೀಂದ್ರಿಯವಾಗಿ ವರ್ಗಾವಣೆಗೊಳ್ಳುವವರೆಗೂ ಕಂಸ ದೇವಕಿಯ ಎಲ್ಲಾ ಶಿಶುಗಳನ್ನು ಕೊಂದನು. ಅನಂತರ ಹುಟ್ಟಿದಾಗ ವಾಸುದೇವನು ಅವನನ್ನು ಗೋಕುಲ ಗ್ರಾಮದ ಮುಖ್ಯಸ್ಥ ನಂದನ ಮನೆಗೆ ರಹಸ್ಯವಾಗಿ ಕರೆದೊಯ್ದು, ಅಲ್ಲಿಯ ಮಗು ಮತ್ತು ತನ್ನ ಮಗನನ್ನು ಬದಲಾಯಿಸಿಕೊಂಡು ಬಂದನು.
ಪ್ರೀತಿಗೆ ಹೆಸರೇ ರಾಧಾಕೃಷ್ಣ, ಪವಿತ್ರವಾದ ಪ್ರೇಮ ಇಂದಿಗೂ ಶಾಶ್ವತವಾಗಿರುತ್ತದೆ. ಎಲ್ಲಾ ಗೋಪಿಕೆಯರ ಅಚ್ಚುಮೆಚ್ಚು ಗೋಪಾಲ. ಈ ಜಗತ್ತಿಗೆ ಪ್ರೀತಿಯ ಸಾರನ್ನು ತಿಳಿಸಿಕೊಟ್ಟ ಶ್ರೀಕೃಷ್ಣ ಪರಮಾತ್ಮ. ಕೃಷ್ಣನು ಚಿಕ್ಕವನಿರುವಾಗ ಮೊಸರು ಹಾಗೂ ಬೆಣ್ಣೆ ಅಂದರೆ ಅಚ್ಚುಮೆಚ್ಚು. ಯಶೋದ ಕಣ್ಣು ತಪ್ಪಿಸಿ ಕದ್ದು ತಿನ್ನುತ್ತಿದ್ದ ಬೆಣ್ಣೆಯನ್ನು ಈ ಹಿನ್ನಲೆಯಲ್ಲಿ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳ ಕಾಲ ಆಚರಿಸುತ್ತಾರೆ.
ಈ ದಿನದಂದು ಪುಟಾಣಿ ಮಕ್ಕಳು ಕೃಷ್ಣನ ವೇಷ ಧರಿಸಿ ಮತ್ತಷ್ಟು ಮುದ್ದಾಗಿ ಕಾಣುತ್ತಾರೆ ಹಾಗೆ ಫ್ಯಾನ್ಸಿ ಡ್ರೆಸ್ ಇನ್ನಿತರ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸುತ್ತಾರೆ. ಅದರಲ್ಲೂ ಈ ಕೃಷ್ಣಾಷ್ಟಮಿಯಂದು ವಿಶೇಷವಾಗಿ ಮಡಿಕೆ ಒಡೆಯುವ ಮೂಲಕ ಸಂಭ್ರಮಿಸುತ್ತಾರೆ. ಆಗಸ್ಟ್ 30 2021 ರಂದು ಕೃಷ್ಣ ಅಷ್ಟಮಿಗೆ ಜನ ಸೇರೋ ಹಾಗೆಲ್ಲ, ಏಕೆಂದರೆ ಹಬ್ಬಕ್ಕಿಂತ ಆರೋಗ್ಯ ಮುಖ್ಯ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಸರಳವಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿ ಕೊಳ್ಳಬೇಕು . ಹಾಗಾಗಿಯೇ ಅವನನ್ನು ದೇವಾ ಎನ್ನುವುದಕ್ಕಿಂತಲೂ ಮಗುವೇ ಎಂದು ಮುದ್ದಿಸುವವರ ಸಂಖ್ಯೆ ದೊಡ್ಡದು. ಮನದ ಒಡೆಯನಾಗಿ ಆರಾಧಿಸುವವರು, ಗೆಳೆಯನಾಗಿ ಕುಣಿದಾಡುವವರು, ಮಗನಾಗಿ ಕಾಣುವವರೇ ಹೆಚ್ಚು.
– ಆಕರ್ಷ ಆರಿಗ
ಇದನ್ನೂ ಓದಿ : ಕೊಣಾಜೆ : ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಪ್ರತಿಭಟನೆ : ಸಿಎಫ್ ಐ ಕಾರ್ಯಕರ್ತರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.