![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 30, 2021, 4:04 PM IST
ಚಿಕ್ಕಬಳ್ಳಾಪುರ: ಈ ಬಾರಿಯೂ ಗೌರಿ ಗಣೇಶಹಬ್ಬದ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ.ಈಗಾಗಲೇ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದೆ. ಅದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅನುಮತಿ ನೀಡಬೇಕೆಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿವೆ.
ಆದರೆ, ಸರ್ಕಾರದಿಂದ ಇದುವರೆಗೆ ಯಾವುದೇರೀತಿಯ ಪರಿಷ್ಕೃತ ಆದೇಶ ಬಂದಿಲ್ಲ. ಮತ್ತೂಂದಡೆಜಿಲ್ಲಾಡಳಿತ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಜನರಲ್ಲಿ ವ್ಯಾಪಕವಾಗಿಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ.
ಈ ಬಾರಿ ಬೀದಿಗಳಲ್ಲಿಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರ ನಿಷೇಧಹೇರಿರುವ ಕಾರಣ, ದೊಡ್ಡಗಣೇಶನ ಮೂರ್ತಿಗಳಿಗೆ ಬೇಡಿಕೆಇಲ್ಲ. ಹೀಗಾಗಿ ಮಾರಾಟಗಾರರು ದೊಡ್ಡ ಗಣೇಶಮೂರ್ತಿಗಳ ಮಾರಾಟಮಾಡುವುದನ್ನುಕೈಬಿಟ್ಟಿದ್ದಾರೆ.ಪರಿಸರಕ್ಕೆ ಧಕ್ಕೆ ಆಗುವಂತಹ ಪಿಒಪಿ ಗಣೇಶನಮೂರ್ತಿ ಮಾರಾಟ ನಿಷೇಧ ಮುಂದುವರಿದಿದೆ.
ಪರಸರ ಸ್ನೇಹಿ ಗಣೇಶೋತ್ಸವದ ಬಗ್ಗೆ ಅರಿವು:ಧಾರ್ಮಿಕ ಕಾರ್ಯಗಳನ್ನು ಕೋವಿಡ್ -19ಮಾರ್ಗಸೂಚಿ ಪಾಲಿಸಲು ಕಡ್ಡಾಯವಾಗಿ ಸೂಚನೆನೀಡುವ ಜೊತೆಗೆ ಜಿಲ್ಲೆಯಲ್ಲಿ ಪರಿಸರ ಸ್ನೇಹಿಗಣೇಶೋತ್ಸವ ಮಾಡಲು ಜಿಲ್ಲಾಡಳಿತದಿಂದ ಅರಿವುಮೂಡಿಸಲಾಗುತ್ತಿದೆ.
ವಿಶೇಷವಾಗಿ ಪರಿಸರ ಇಲಾಖೆಯ ಮೂಲಕ ಅರಿಶಿಣ ಗಣೇಶೋತ್ಸವದ ಕುರಿತು ಅರಿವು ಮೂಡಿಸುವ ಜೊತೆಗೆ ಅದನ್ನುಬಳಕೆ ಮಾಡಿಕೊಂಡು ಪರಿಸರ ಸಂರಕ್ಷಣೆ ಮಾಡಲುಮುಂದಾಗಿದ್ದಾರೆ.
ಅರಿಶಿಣ ಮೂರ್ತಿ ರೂಪಿಸಿ ದಾಖಲೆ ನಿರ್ಮಿಸಲು ಸಿದ್ಧತೆ
10 ಲಕ್ಷ ಅರಿಶಿಣ ಗಣೇಶನ ಮೂರ್ತಿಯನ್ನು ರೂಪಿಸಿ, ದಾಖಲೆ ಮಾಡಲು ಈಗಾಗಲೇ ಇಲಾಖೆಯಿಂದಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಈಸಂಬಂಧ ಪರಿಸರ ಸಚಿವರು ಸಹ ಮಾಹಿತಿ ನೀಡಿದ್ದಾರೆ.ಅದಕ್ಕಾಗಿ ಒಂದುವೆಬ್ ಲಿಂಕ್ ಸಹ ನೀಡಲಾಗಿದೆ. ಹಬ್ಬದದಿನದಂದುಅದನ್ನು ಬಳಸಿ ವಿಶ್ವದಾಖಲೆ ಮಾಡಲುಯೋಜನೆ ರೂಪಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಜಿಲ್ಲೆಯಲ್ಲಿ ಹಾಲಿನ ಪ್ಯಾಕೇಟ್ ಮೇಲೆ ಅರಿಶಿಣ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವಂತೆಅರಿವು ಮೂಡಿಸುತ್ತಿದ್ದೇವೆ. ಅದರ ಜೊತೆಗೆ ನೀರಿನ ಕ್ಯಾನ್, ಬಾಟಲ್‌ಗಳ ಮೇಲೆ ಸ್ಟಿಕರ್ ಅಂಟಿಸಲು ಸೂಚನೆನೀಡಿದ್ದೇವೆ. ಹಾಗೆಯೇ, ಕರೆಂಟ್ ಬಿಲ್‌ಗಳ ಮೂಲಕ, ಜವಳಿ ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಲ್ಲಿಸೋಮವಾರದಿಂದ ಜಾಗೃತಿ ಮೂಡಿಸುವಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಎಂ.ಎ.ತಮೀಮ್ ಪಾಷ
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.