ಗಣೇಶನ ಹಬ್ಬಕ್ಕಿಲ್ಲ ‘ಭಜರಂಗಿ-2’ ದರ್ಶನ | ಅಭಿಮಾನಿಗಳ ಕ್ಷಮೆ ಕೋರಿದ ಶಿವಣ್ಣ
Team Udayavani, Aug 30, 2021, 4:37 PM IST
ಬೆಂಗಳೂರು: ‘ಸೆಪ್ಟೆಂಬರ್ 10’ನ್ನು ಕಾತರದಿಂದ ಕಾಯುತ್ತಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಳಿಗೆ ನಿರಾಶೆಯಾಗಿದೆ. ಗಣೇಶ ಚತುರ್ಥಿ (ಸೆ.10) ಯಂದು ತೆರೆ ಕಾಣಬೇಕಿದ್ದ ಶಿವಣ್ಣನ ಭಜರಂಗಿ-2 ಸಿನಿಮಾ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ.
ಸೆಪ್ಟೆಂಬರ್ 1 ರಂದು ಟ್ರೇಲರ್ ಹಾಗೂ ಗಣೇಶನ ಹಬ್ಬದ ನಿಮಿತ್ತ (ಸೆ.10) ಭಜರಂಗಿ-2 ಚಿತ್ರವನ್ನು ಬೆಳ್ಳಿ ಪರದೆ ಮೇಲೆ ಬಿಡುಗಡೆ ಮಾಡುವುದಾಗಿ ಇತ್ತೀಚಿಗೆ ಚಿತ್ರತಂಡ ಹೇಳಿ ಕೊಂಡಿತ್ತು. ಆದರೆ, ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಹಾಗೂ ವಾರಾಂತ್ಯದ ಲಾಕ್‌ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಟ್ರೇಲರ್ ಹಾಗೂ ಸಿನಿಮಾ ಬಿಡುಗಡೆಯ ದಿನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇಂದು (ಆ.30) ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ ಶಿವಣ್ಣ, ‘ಕೋವಿಡ್ ಪ್ರಕರಣಗಳು ಜಾಸ್ತಿ ಆಗುತ್ತಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್‌ಡೌನ್ ಇರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಆದಷ್ಟು ಬೇಗೆ ಬಿಡುಗಡೆ ದಿನಾಂಕ ಘೋಷಿಸುತ್ತೇವೆ. ಬಹಳ ತಡ ಮಾಡುವುದಿಲ್ಲ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲು ನೋಡುತ್ತೇವೆ. ಜನ ಹೌಸ್‌ಫುಲ್‌ನಲ್ಲಿ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಟ್ರೇಲರ್ ರಿಲೀಸ್ ಮಾಡುತ್ತೇವೆ. ಟ್ರೇಲರ್‌ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದಿದ್ದಾರೆ.
Sorry to inform Bhajarangi 2 trailer & film release has been postponed ?????@NimmaShivanna about #Bhajarangi2 release postpone @NimmaAHarsha @JayannaFilms @ArjunJanyaMusic pic.twitter.com/MTBIv9ReAr
— NammaAppu (@NammaAppu) August 30, 2021
ಇನ್ನು ಈ ತಿಂಗಳು ರಾಜ್ಯ ಸರ್ಕಾರ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎನ್ನುವ ಭರವಸೆ ಹೊಂದಿದ್ದ ಬಿಗ್‌ಬಜೆಟ್ ಚಿತ್ರತಂಡಗಳು, ಜುಲೈ ಅಂತ್ಯದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದವು. ಆದರೆ, ಸರ್ಕಾರ ಈ ಕುರಿತು ಇಲ್ಲಿಯವರೆಗೂ ಯಾವುದೇ ಆದೇಶ ಹೊರಡಿಸದೇ ಇರುವುದರಿಂದ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.