ಸೆ.1 ರಿಂದ ಮಾರುತಿ ಕಾರುಗಳು ದುಬಾರಿ : ಕಂಪನಿಯಿಂದ ಸ್ಟಾಕ್ ಎಕ್ಸ್‌ಚೇಂಜ್‌ಗೆ ಲಿಖಿತ ಮಾಹಿತಿ
Team Udayavani, Aug 30, 2021, 5:23 PM IST
ಮುಂಬೈ: ದೇಶದ ಜನಪ್ರಿಯ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಸೆ.1ರಿಂದ ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ. ಪ್ರಸಕ್ತ ವರ್ಷದ ಜನವರಿ ಬಳಿಕ ಇದು ಮೂರನೇ ಏರಿಕೆಯಾಗಲಿದೆ.
ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಲಿಖಿತ ಮಾಹಿತಿ ನೀಡಿದ ಮಾರುತಿ ಸುಜುಕಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಭರಿಸಬೇಕಾಗಿದೆ. ಹೀಗಾಗಿ, ಗ್ರಾಹಕರ ಮೇಲೆ ಕೊಂಚ ಹೊರೆ ವರ್ಗಾಯಿಸಬೇಕಾಗಿದೆ. ಅದಕ್ಕಾಗಿ ಮುಂದಿನ ತಿಂಗಳ 1ನೇ ತಾರೀಕಿನಿಂದ ಬೆಲೆ ಹೆಚ್ಚಳವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ದರ ಹೆಚ್ಚಳದ ಪ್ರಮಾಣದ ಬಗ್ಗೆ ಕಂಪನಿ ಉಲ್ಲೇಖೀಸಿಲ್ಲ. ಜನವರಿಯಲ್ಲಿ ಕೆಲವೊಂದು ಮಾಡೆಲ್‌ಗಳ ಕಾರುಗಳ ಮೇಲೆ 34 ಸಾವಿರ ರೂ.ಗಳ ವರೆಗೆ ಏರಿಕೆ ಮಾಡಿತ್ತು. ಏಪ್ರಿಲ್‌ನಲ್ಲಿ ಶೇ.1.6ರಷ್ಟು ಬೆಲೆ ಹೆಚ್ಚಳ ಮಾಡಲು ಕಂಪನಿ ನಿರ್ಧರಿಸಿತ್ತು. ಜುಲೈನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ 1 ಲಕ್ಷ ರೂ.ವರೆಗೆ, ಈ ತಿಂಗಳ ಆರಂಭದಲ್ಲಿ ಟಾಟಾ ಮೋಟರ್ಸ್ ಕಾರುಗಳ ಬೆಲೆಯನ್ನು 36 ಸಾವಿರ ರೂ. ವರೆಗೆ ಹೆಚ್ಚಳ ಮಾಡಿದ್ದವು.
ಇದನ್ನೂ ಓದಿ :ಬೆಳಗಾವಿ: ತಲೆಗೆ ಗುಂಡು ಹಾರಿಸಿಕೊಂಡು ಏರ್ ಮ್ಯಾನ್ ಆತ್ಮಹತ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.