ಶಿವಾನಂದ ಶೆಟ್ಟಿ ಅವರಿಗೆ 7ನೇ ಸ್ಥಾನ
ಏಜಿಯಸ್ ಫೆಡರಲ್ ಲೈಫ್ ಇನ್ಶೂರೆನ್ಸ್ 24 ಗಂಟೆಗಳ ಸ್ಟೇಡಿಯಂ ರನ್
Team Udayavani, Aug 31, 2021, 2:21 PM IST
ಮುಂಬಯಿ: ಎನ್‌ಇಬಿ ಸ್ಪೋರ್ಟ್ಸ್ ಎಂಟಟೈನ್‌ಮೆಂಟ್ ಪ್ರೈ. ಲಿ. ವತಿಯಿಂದ ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಸಹಯೋಗದಲ್ಲಿ ನಡೆದ “ಏಜಿಯಸ್ ಫೆಡರಲ್ ಲೈಫ್ ಇನ್ಶೂರೆನ್ಸ್ 24 ಗಂಟೆಗಳ ಸ್ಟೇಡಿಯಂ ರನ್’ ನಲ್ಲಿ ತುಳು, ಕನ್ನಡಿಗ ಶಿವಾನಂದ ಶೆಟ್ಟಿ ಅವರು 7ನೇ ಸ್ಥಾನ ಪಡೆದಿದ್ದಾರೆ.
ಮೈ ಸಮಯ್, ಬ್ರೂಕ್ಸ್, ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಸಿಟಿ ಹಾಸ್ಪಿಟಲ್, ಟ್ರಾಕ್ ಬೈ ಟೈಟಾನ್ ಅವರ ಪ್ರಾಯೋಜಕತ್ವದಲ್ಲಿ ಆ. 28, 29ರಂದು ಬಾಂದ್ರಾ ಪಶ್ಚಿಮ ವಿಂಗ್ಸ್ ಸ್ಪೋರ್ಟಿಂಗ್ ಸೆಂಟರ್‌ನಲ್ಲಿ ನಡೆದ “ಏಜಿಯಸ್ ಫೆಡರಲ್ ಲೈಫ್ ಇನ್ಶೂರೆನ್ಸ್ 24 ಗಂಟೆಗಳ ಸ್ಟೇಡಿಯಂ ರನ್’ನಲ್ಲಿ ಶಿವಾನಂದ ಶೆಟ್ಟಿ ಅವರು 24 ಗಂಟೆಗಳಲ್ಲಿ 138 ಕಿ. ಮೀ. ಗಳನ್ನು ಕ್ರಮಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ನಾಯಕರ ಬೆಳವಣಿಗೆ ಬಯಸದ ಕಾಂಗ್ರೆಸ್ : ಅಸಾದುದ್ದೀನ್ ಓವೈಸಿ
ಆ. 15ರಂದು “ಬ್ಯಾರ್ ಟೂ ಪೆಡಲ್ಸ್ ಸೈಕ್ಲಿಂಗ್ ಆನ್ ಪರ್ಪಸ್’ ಆಯೋಜಿಸಿದ್ದ ಸೈಕ್ಲಿಂಗ್‌ನಲ್ಲಿ ಅವರು 5 ಗಂಟೆ 23 ನಿಮಿಷಗಳಲ್ಲಿ 100 ಕಿ. ಮೀ. ಗಳನ್ನು ಕ್ರಮಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಪಟುವಾಗಿರುವ ಶಿವಾನಂದ ಶೆಟ್ಟಿ ಮ್ಯಾರಥಾನ್ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನೂರಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 45ರ ಹರೆಯದ ಇವರು ಹೊಟೇಲ್ ಕಾರ್ಮಿಕರಾಗಿದ್ದು, ಮೂಲತಃ ಮೂಡಬಿದ್ರೆ ನಿಡ್ಡೋಡಿ ನಂದಬೆಟ್ಟುವಿನವರು. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬ್ರೂನೈ, ಇಂಡೊನೇಷ್ಯಾದಲ್ಲಿ ನಡೆದ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಭಾಗವಹಿಸಿ ಐದು ಚಿನ್ನದ ಪದಕಗಳೊಂದಿಗೆ 19 ಪದಕಗಳನ್ನು ಗೆದ್ದಿದ್ದಾರೆ. ಇವರ ಕ್ರೀಡಾ ಸಾಧನೆಗಳನ್ನು ಗುರುತಿಸಿ ನಗರದ ವಿವಿಧ ಸಂಘಟನೆಗಳು ಅವರನ್ನು ಗೌರವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.