ಆತ್ಮರಕ್ಷಣೆಗೆ ಮಹಿಳೆಯರಿಗೆ ಬಂದೂಕು ಲೈಸನ್ಸ್ ಕೊಡಿ: ಆನಂದ್ ಸಿಂಗ್
Team Udayavani, Aug 31, 2021, 5:16 PM IST
ಬೆಂಗಳೂರು: ಆತ್ಮರಕ್ಷಣೆ ಮಾಡಿಕೊಳ್ಳಲು ಸರ್ಕಾರದಿಂದ ಮಹಿಳೆಯರಿಗೆ ಬಂದೂಕು ಪರವಾನಗಿ ನೀಡಿದರೆ ಉತ್ತಮ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಸಚಿವರು ಈ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತರ ಪ್ರೇಮ ಪ್ರಕರಣ : ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೂ ಆತ್ಮಹತ್ಯೆಗೆ ಶರಣು
ಗ್ಯಾಂಗ್ ರೇಪ್ ಪ್ರಕರಣ ಹೀನ ಕೃತ್ಯವಾಗಿದ್ದು,ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವುದು ಶತಃಸಿದ್ದ.ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬದ್ದ. ಆದರೂ ಸಹ ಮಹಿಳೆ ಇಂತಹ ನೀಚ ಕೃತ್ಯಗಳಿಂದ, ಸ್ವಾವಲಂಬಿಯಾಗಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಸರ್ಕಾರದಿಂದ ಮಹಿಳೆಯರಿಗೆ ಬಂದೂಕು ಪರವಾನಗಿ ನೀಡಿದರೆ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಆನಂದ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.