ಅಪ್ರಾಪ್ತರ ಪ್ರೇಮ ಪ್ರಕರಣ : ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೂ ಆತ್ಮಹತ್ಯೆಗೆ ಶರಣು
Team Udayavani, Aug 31, 2021, 4:58 PM IST
ಮಂಡ್ಯ: ನಗರದ ಕಲ್ಲಹಳ್ಳಿಯ ಅಪ್ರಾಪ್ತ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಯುವತಿಯು ಡೆತ್‌ನೋಟ್ ಬರೆದಿಟ್ಟು ಬಾಲಮಂದಿರದಲ್ಲಿ ನೇಣಿಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನಡೆದಿದೆ.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಪುತ್ರಿ ಮಾನ್ವಿತಾ(17) ಕಲ್ಲಹಳ್ಳಿಯ ವಿವಿ ನಗರ ಬಡಾವಣೆಯ 14ನೇ ಕ್ರಾಸ್‌ನಲ್ಲಿರುವ ಬಾಲಮಂದಿರದ ಶೌಚಾಲಯದ ಕಿಟಿಕಿಗೆ ತನ್ನ ಚೂಡಿದಾರ್ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಮಾನ್ವಿತಾ ಪೋಷಕರು ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಈಗಾಗಲೇ ಜೈಲಿನಲ್ಲಿದ್ದಾರೆ. ಅದರಂತೆ ಮಾನ್ವಿತಾ ಮನೆಯಲ್ಲಿರಲು ಇಷ್ಟಪಡದ ಕಾರಣ ಆಕೆಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆಕೆ ಮಾನಸಿಕ ಖಿನ್ನತೆಯಿಂದ ಬಳಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಡಿವೈಎಸ್ಪಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಸ್.ರಾಜಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಾಲಮಂದಿರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್ ವಶಪಡಿಸಿಕೊಂಡಿರುವ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ :ಬೈಕ್ ಗಳ ನಡುವೆ ಅಪಘಾತ : ರಾಷ್ಟ್ರೀಯ ಖೋ-ಖೋ ಆಟಗಾರ ಸಾವು, ಇನ್ನೋರ್ವ ಗಂಭೀರ
ಘಟನೆ ವಿವರ:
ಕೊಲೆಯಾಗಿದ್ದ ದರ್ಶನ್(17) ಹಾಗೂ ಮೃತ ಮಾನ್ವಿತಾ ಇಬ್ಬರೂ ಕಲ್ಲಹಳ್ಳಿ ವಿವಿ ನಗರ ಬಡಾವಣೆಯ ನಿವಾಸಿಗಳಾಗಿದ್ದರು. ದರ್ಶನ್ 10ನೇ ತರಗತಿ ಅನುತ್ತೀರ್ಣನಾದ ನಂತರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಗರಸಭೆ ಸದಸ್ಯ ಶಿವಲಿಂಗು ಅವರ ಪುತ್ರಿಯಾಗಿದ್ದ ಮಾನ್ವಿತ ಇಬ್ಬರು ಸುಮಾರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಎರಡು ಮೂರು ಬಾರಿ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ.
ಈ ನಡುವೆ ಕಳೆದ ಏಪ್ರಿಲ್ 15ರಂದು ತಡರಾತ್ರಿ ದರ್ಶನ್‌ಗೆ ಕರೆ ಮಾಡಿದ್ದ ಮಾನ್ವಿತಾ, ಮನೆಗೆ ಬರುವಂತೆ ತಿಳಿಸಿದ್ದಳು. ಅದರಂತೆ ಮನೆಗೆ ಬಂದ ಆತನ ಮೇಲೆ 10ಕ್ಕೂ ಹೆಚ್ಚು ಜನರು ಮನಬಂದಂತೆ ಹಲ್ಲೆ ನಡೆಸಿದ್ದರು.
ಗಲಾಟೆ ಗಮನಿಸಿದ ಅಕ್ಕಪಕ್ಕದ ಮನೆಯವರು, ದರ್ಶನ್ ಮನೆಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರೆಲ್ಲರೂ ಬಂದು ಮಗನನ್ನು ಬಿಡುವಂತೆ ಮನವಿ ಮಾಡಿದರೂ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ತೀವ್ರ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡಿದ್ದ ದರ್ಶನ್‌ನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಈ ಸಂಬಂಧ ಮೃತ ಮಾನ್ವಿತ ತಂದೆ, ತಾಯಿ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.