![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 1, 2021, 2:50 PM IST
ಕಾಬೂಲ್: ಅಮೆರಿಕದಲ್ಲಿ 9/11 ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸಂಘಟನೆ ಅಲ್ ಖೈದಾ, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಗೆ ಅಭಿನಂದನೆ ಸಲ್ಲಿಸಿದೆ. ಅಲ್ಲದೇ ಅದೇ ರೀತಿ ಕಾಶ್ಮೀರವನ್ನು ಕೂಡಾ ಸ್ವತಂತ್ರಗೊಳಿಸಬೇಕು ಎಂದು ಕರೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ವಿಚಾರದಲ್ಲಿ ತಜ್ಞರು ಕೊಡುವ ವರದಿಯನ್ನು ಸರಕಾರ ಮೊದಲು ಅನುಸರಿಸಲಿ : ಕಿಮ್ಮನೆ
ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ಸಂಪೂರ್ಣವಾಗಿ ತೊರೆದು ಹೋದ ಬಳಿಕ ಅಲ್ ಖೈದಾ ಉಗ್ರಗಾಮಿ ಸಂಘಟನೆ ತನ್ನ ಪ್ರಕಟಣೆಯಲ್ಲಿ, ಇಸ್ಲಾಂನ ಶತ್ರುಗಳ ಹಿಡಿತದಲ್ಲಿರುವ ಲೆವಾಂಟ್, ಸೋಮಾಲಿಯಾ, ಯೆಮೆನ್ ಕಾಶ್ಮೀರ ಮತ್ತು ಇತರ ಪ್ರದೇಶಗಳನ್ನು ಸ್ವತಂತ್ರಗೊಳಿಸಬೇಕಾಗಿದೆ. ಓ ಅಲ್ಲಾಹ್..ಇಡೀ ಜಗತ್ತಿನಾದ್ಯಂತ ಇರುವ ಮುಸ್ಲಿಂ ಕೈದಿಗಳನ್ನು ಬಂಧಮುಕ್ತಗೊಳಿಸಬೇಕಿದೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಅಫ್ಘಾನಿಸ್ತಾನ ಈಗ ಪೂರ್ಣ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ತಾಲಿಬಾನ್ ಉಗ್ರರು ಘೋಷಿಸಿದ ಒಂದು ಗಂಟೆಯ ನಂತರ ಅಲ್ ಖೈದಾ ದೀರ್ಘವಾದ ಪ್ರಕಟಣೆಯನ್ನು ಹೊರಡಿಸಿತ್ತು. ಅಮೆರಿಕ ಸೇನಾ ಪಡೆ ಅಫ್ಘಾನಿಸ್ತಾನ ತೊರೆದು ಹೋಗಿದ್ದ ಹಿನ್ನೆಲೆಯಲ್ಲಿ ತಾಲಿಬಾನ್ ಗೆ ಅಭಿನಂದನೆ ಸಲ್ಲಿಸಿತ್ತು. ಬಹುದೀರ್ಘಕಾಲದ ಸ್ವಯಂ ಘೋಷಿತ ಕರೆಯಾದ ಪ್ಯಾಲೆಸ್ತಿನ್, ಲೆವಾಂಟ್, ಸೋಮಾಲಿಯಾ, ಕಾಶ್ಮೀರ ಹಾಗೂ ಯೆಮೆನ್ ಅನ್ನು ಸ್ವತಂತ್ರಗೊಳಿಸುವಂತೆ ಅಲ್ ಖೈದಾ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಆಗಸ್ಟ್ 30ರಂದು 12ಗಂಟೆಗೆ ಅಮೆರಿಕದ ಸೇನಾಪಡೆಗಳನ್ನು ಸಿ.17 ಕಾರ್ಗೋ ವಿಮಾನ ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ಮೂಲಕ ಅಮೆರಿಕದ ದೀರ್ಘಕಾಲದ ಯುದ್ಧ ಕೊನೆಗೊಂಡಂತಾಗಿತ್ತು.
9/11ರ ದಾಳಿ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರದಿಂದ ತೊಲಗುವಂತಾಗಿತ್ತು. ಇದೀಗ ಎರಡು ದಶಕಗಳ ಬಳಿಕ ತಾಲಿಬಾನ್ ಇಡೀ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮತ್ತೊಂದೆಡೆ ಪಂಜ್ ಶೀರ್ ಕಣಿವೆ ಪ್ರದೇಶದ ತಾಲಿಬಾನ್ ವಿರೋಧಿ ಪಡೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪಂಜ್ ಶೀರ್ ಕಣಿವೆಯನ್ನು ವಶಕ್ಕೆ ಪಡೆಯಲು ತಾಲಿಬಾನ್ ಪಡೆಗಳು ಹರಸಾಹಸ ಪಡುತ್ತಿರುವುದಾಗಿ ವರದಿ ತಿಳಿಸಿದೆ.
ಇದು ಹೊಸ ಜಗತ್ತು. ಭಯೋತ್ಪಾದನೆ ಬೆದರಿಕೆ ಅಫ್ಘಾನಿಸ್ತಾನವನ್ನು ಮೀರಿ ಜಗತ್ತಿನಾದ್ಯಂತ ಹಬ್ಬಿಕೊಂಡಿದೆ. ಸೋಮಾಲಿಯಾದ ಅಲ್ ಶಬಾಬ್ ನಿಂದ ನಾವು ಬೆದರಿಕೆ ಎದುರಿಸುತ್ತಿದ್ದೇವೆ, ಸಿರಿಯಾ ಮತ್ತು ಅರೇಬಿಯನ್ ಪ್ರಾಂತ್ಯದಲ್ಲಿ ಅಲ್ ಖೈದಾ ಪ್ರೇರಿತ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಎದುರಿಸುತ್ತಿದ್ದೇವೆ. ಸಿರಿಯಾ ಮತ್ತು ಇರಾಕ್ ನಲ್ಲಿ ಐಸಿಸ್ ಖಲಿಫತ್ ರಚಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ ಆಫ್ರಿಕಾ ಮತ್ತು ಏಷ್ಯಾದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಮುಂದಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.