ಕೆರೆಗಳಿಗೆ ಕಡೆಗೂ ಹರಿಯಿತು ಕಪಿಲಾ ನೀರು


Team Udayavani, Sep 1, 2021, 3:41 PM IST

ಕೆರೆಗಳಿಗೆ ಕಡೆಗೂ ಹರಿಯಿತು ಕಪಿಲಾ ನೀರು

ನಂಜನಗೂಡು, ಯಳಂದೂರು, ಚಾಮರಾಜನಗರ ತಾಲೂಕಿನ ಒಟ್ಟು 24 ಕೆರೆಗಳಿಗೆ ಕಪಿಲಾ ನದಿ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಗೆ ಮಂಗಳವಾರ ಪ್ರಾಯೋಗಿಕವಾಗಿ ಚಾಲನೆ ದೊರೆತಿದೆ. ಇಂದು, ನಾಳೆ, ನಾಡಿದ್ದು ನೀರುಬರುತ್ತದೆ ಎಂದು ಮೂರ್‍ನಾಲ್ಕು ವರ್ಷ ಗಳಿಂದ ಕಾಯುತ್ತಿದ್ದ ಜನತೆ ಮಂಗಳವಾರ ಕಡೆಗೂಹರಿದ ಗಂಗೆಯನ್ನು ಕಂಡು ಸಂತಸಪಟ್ಟರು. ಸಿದ್ದರಾಮಯ್ಯ ಅವಧಿಯಲ್ಲಿ 2016ರ ಡಿಸೆಂಬರ್‌ನಲ್ಲಿ 233 ಕೋಟಿರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಹಲವು ಅಡಚಣೆಗಳಿಂದ ವಿಳಂಬವಾದರೂಮಂಗಳವಾರ ಸುತ್ತೂರಿನ ಪಂಪ್‌ಹೌಸ್‌ನಿಂದ ನೀರು ಹರಿಸಲು ಪ್ರಾಯೋಗಿಕವಾಗಿ ಚಾಲನೆ ದೊರೆಯಿತು.

ನಂಜನಗೂಡು: ತಾಲೂಕಿನ ಬಿಳಗರೆ ಹೋಬಳಿಯ ದಶಕಗಳ ಕನಸಿನ ಫ‌ಲವಾಗಿ ಮಂಗಳವಾರ ತಗಡೂರಿನಕೊಮ್ಮನ ಕರೆಗೆಕಪಿಲಾ ನೀರು ಹರಿಯಿತು. ಸುತ್ತೂರು ಬಳಿಯ ಪಂಪ್‌ಹೌಸಿನಿಂದ ತಗಡೂರು ಕರೆಗೆ ಕಪಿಲಾ ನೀರು ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಕಾದಿದ್ದ ಜನತೆ ಯಲ್ಲಿ ಮಂಗಳವಾರ ನೀರು ಬಂದು ತಲುಪಿದಾಗ ಆನಂದ ಭಾಷ್ಪ ಕಾಣಿಸಿಕೊಂಡಿತು. ತಮ್ಮ ಕ್ಷೇತ್ರ ವ್ಯಾಪ್ತಿಯ ಕರೆಗೆ ನೀರು ಬರುವ ಸಮಯ ದಲ್ಲಿ ಖುದ್ದು ಹಾಜರಿದ್ದ ಶಾಸಕ ಡಾ|ಯತೀಂದ್ರಅವರುಜನತೆ ಸಂತೋಷದಕಡಲಲ್ಲಿತಾವೂ ಭಾಗಿಯಾಗಿದ್ದೂ ಅಲ್ಲದೆ ಆಗಮಿಸಿದ ನದಿ ನೀರಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ಕೆರೆಗೆ ನೀರು ಹರಿಯುವ ಮೂಲಕ ತಂದೆ ಸಿದ್ದರಾಮಯ್ಯ ಹಾಗೂ ತಮ್ಮ ಕನಸು ನನಸಾಗಿದೆ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ 233 ಕೋಟಿ ರೂ. ಯೋಜನೆ ಸಿದ್ಧಪಡಿಸಿ, ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಲಾಗಿತ್ತು. ನನ್ನ ಅವಧಿಯಲ್ಲಿ ನೀರು ಬಂದಿದೆ ಎಂದರು.

ಇದನ್ನೂ ಓದಿ:ಯಶವಂತಪುರ : RTO ಕಚೇರಿ ಮುಂದಿನ ರಸ್ತೆ ಅಗಲೀಕರಣಕ್ಕೆ ಕೂಡಲೇ ಕ್ರಮ

ಈ ಕೆರೆಯೊಂದಿಗೆ ತಾಲೂಕಿನ ಚಿಕ್ಕಹೊಮ್ಮದ ಕೆರೆ ಹಾಗೂ ಉಮ್ಮತ್ತೂರು ಕೆರೆ ಸೇರಿದಂತೆ 11 ಕೆರೆಗಳಿಗೆ ಮೊದಲನೇ ಹಂತದಲ್ಲಿ ನೀರು ಹರಿಯಲಿದ್ದು, ಉಳಿದ 13ಕೆರೆಗಳಿಗೆ2 ಹಂತದಲ್ಲಿ ಕಪಿಲಾ ನೀರು ತಲುಪಲಿದೆ ಎಂದು ತಿಳಿಸಿದರು. ಈ ಎಲ್ಲ ಕೆರೆಗಳನ್ನೂ ತುಂಬಿಸುವು
ದರೊಂದಿಗೆ ಮಳೆಯಾಶ್ರಿತ ಪ್ರದೇಶವಾದ ನಂಜನ ಗೂಡು, ಚಾ.ನಗರ, ಯಳಂದೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದರು. ಈ ವೇಳೆ ತಗಡೂರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಆರ್‌.ಮಹದೇವು, ತಗಡೂರು
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಹಾಡ್ಯ ರಂಗಸ್ವಾಮಿ ಸೇರಿದಂತೆ ತಗಡೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಉಮ್ಮತ್ತೂರು ಕೆರೆಯತ್ತ ಕಪಿಲಾ ನೀರು
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ದೊಡ್ಡಕೆರೆಗೆ ನಂಜನಗೂಡು ತಾಲೂಕಿನ ಸುತ್ತೂರಿನ ಪಂಪ್‌ಹೌಸ್‌ನಿಂದ ನೀರು ಹರಿಸಲು ಮಂಗಳವಾರ ಚಾಲನೆ ನೀಡಲಾಗಿದೆ.

ಸುತ್ತೂರಿನ ಕಬಿನಿ ನದಿಯಿಂದ ಪೈಪ್‌ ಮೂಲಕ ನೀರು ಹರಿಸುವಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಅಲ್ಲಿಂದ ನಂಜನಗೂಡು
ತಾಲೂಕಿನ ತಗಡೂರು ಗ್ರಾಮದಕೊಮ್ಮಗೆರೆಗೆ ನೀರು ತಲುಪಿತು. ಅಲ್ಲಿಂದ ಉಮ್ಮತ್ತೂರುಕೆರೆಯ ಕಡೆಗೆ ಹರಿಸಲಾಗಿದೆ. ಆ ನೀರು ನಂಜನಗೂಡು ತಾಲೂಕಿನ ಚುಂಚನಹಳ್ಳಿ ಹಾಗೂ ಹನುಮನಪುರ ನಡುವೆ ಇರುವ ವಿತರಣಾ ತೊಟ್ಟಿಗೆ ಮಂಗಳವಾರ ಸಂಜೆ ತಲುಪಿದೆ. ಇಲ್ಲಿಂದ ತಾಲೂಕಿನ ಉಮ್ಮತ್ತೂರು ಕೆರೆಗೆ3 ಕಿ.ಮೀ. ಅಂತರದವರೆಗೆ ಪೈಪ್‌ಲೈನ್‌ ಮೂಲಕ ಹರಿದು, ನಂತರ2 ಕಿ.ಮೀ. ದೂರ ಭೂಮಿಯ ಮೇಲೆ ಗುರುತ್ವಾಕರ್ಷಣ ಶಕ್ತಿಯ ಮೂಲಕ ಹರಿದು ಉಮ್ಮತ್ತೂರುಕೆರೆಗೆ ನೀರು ತಲುಪಬೇಕಿದೆ. ವಿದ್ಯುತ್‌ ಅಡಚಣೆ ಉಂಟಾಗದಿದ್ದಲ್ಲಿ ಬುಧವಾರ ಬೆಳಗಿನ ಜಾವದ ವೇಳೆಗೆ ಉಮ್ಮತ್ತೂರುಕೆರೆಗೆ ನೀರು ಬರಬಹುದೆಂದು ನಿರೀಕ್ಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉಮ್ಮತ್ತೂರು ಕೆರೆ ಪಕ್ಕ ಕೊಟ್ಟೂರು ಬಸವೇಶ್ವರ ದೇವಾಲಯದ ಮುಂದೆ ರೈತರು ನಡೆಸುತ್ತಿದ್ದ ಚಳವಳಿಯನ್ನು ತಾತ್ಕಾಲಿಕ ವಾಗಿ ಹಿಂತೆಗೆದುಕೊಳ್ಳಲಾಯಿತು. ಕೆರೆಗೆ ನೀರು ತುಂಬಿದ ಬಳಿಕ ಸೆ.2ರಂದು ಶಾಸಕ ಎನ್‌. ಮಹೇಶ್‌ ನೇತೃತ್ವದಲ್ಲಿ ಗಂಗೆ ಪೂಜೆ ಸಲ್ಲಿಸುವುದು. ಒಂದು ವೇಳೆ ನೀರು ಮತ್ತೆ ಸ್ಥಗಿತವಾದರೆ ಅದೇ ಸ್ಥಳದಲ್ಲಿ ನಾನೂ ನಿಮ್ಮ ಜೊತೆ ಪ್ರತಿಭಟನೆ ಮುಂದುವರಿಸುತ್ತೇನೆ ಎಂದು ಶಾಸಕ ಎನ್‌. ಮಹೇಶ್‌ ಭರವಸೆ ನೀಡಿದ್ದಾರೆ ಎಂದು ಕಬ್ಬುಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ತಿಳಿಸಿ ದರು. ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎನ್‌. ಮಹೇಶ್‌, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘಟನೆ ಗಳ ಮುಖಂಡ ಸಿ.ಎಂ. ಕೃಷ್ಣಮೂರ್ತಿ ಭೇಟಿ ನೀಡಿದ್ದರು. ಜಿಲ್ಲಾಧ್ಯಕ್ಷಹೊನ್ನೂರು ಪ್ರಕಾಶ್‌,ಹೆಬ್ಬಸೂರು ಬಸವಣ್ಣ, ಹಾಡ್ಯವಿ, ಮಹೇಶ್‌,ಕುಮಾರ್‌ ಇತರರಿದ್ದರು.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.