ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Sep 1, 2021, 3:33 PM IST
ಚಿಕ್ಕಮಗಳೂರು: ಮಳೆಯಿಂದ ಕುಸಿತಕ್ಕೊಳಗಾಗಿಬಿರುಕು ಬಿಟ್ಟಿರುವ ಸಿ.ಎನ್.ಆರ್. ಪುರ ರಸ್ತೆಯನ್ನುಕೂಡಲೇ ದುರಸ್ತಿಪಡಿಸುವಂತೆ ಒತ್ತಾಯಿಸಿ ಸಿಪಿಐಕಾರ್ಯಕರ್ತರು ತಾಲೂಕಿನ ಶಿರವಾಸೆಯಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ಗ್ರಾಮದ ವೃತ್ತದಿಂದ ಮೆರವಣಿಗೆನಡೆಸಿದ ಕಾರ್ಯಕರ್ತರು ಗ್ರಾಪಂ ಕಚೇರಿ ಎದುರುಪ್ರತಿಭಟನೆ ನಡೆಸಿ ರಸ್ತೆ ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ವಿರುದ್ಧ ತೀವ್ರಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2 ತಿಂಗಳ ಹಿಂದೆ ಸುರಿದ ಭಾರೀ ಮಳೆಗೆಸಿ.ಎನ್.ಆರ್. ಪುರ ರಸ್ತೆ ಹೊನ್ನಾಳ ಚೆಕ್‌ಪೋಸ್ಟ್‌ಸಮೀಪ 15 ಮೀಟರ್‌ನಷ್ಟು ಸಂಪೂರ್ಣಕುಸಿತಕ್ಕೊಳಗಾಗಿ 10ಮೀಟರ್‌ನಷ್ಟು ಬಿರುಕುಬಿಟ್ಟಿದೆ.
ಇದರಿಂದಾಗಿ ವಾಹನ ಮತ್ತು ಜನಸಂಚಾರಕ್ಕೆ ತೀವ್ರಅಡಚಣೆಯುಂಟಾಗಿದೆ ಎಂದು ಆರೋಪಿಸಿದರು.ಶಿರವಾಸೆ, ಗಾಳಿಗುಡ್ಡೆ, ಸುಗುಡವಾನಿ, ಕಡವಂತಿ, ಬೆಳಗೊಳ, ಜಾಗರ, ಬೊಗಸೆ, ಹುಲುವತ್ತಿ,ಮೇಲುಹುಲುವತ್ತಿ ಮತ್ತು ಕೊಳಗಾಮೆ ಗ್ರಾಮಗಳ ಜನರಿಗೆ ಓಡಾಡಲು ಈ ರಸ್ತೆಯೊಂದೇ ಆಧಾರವಾಗಿದ್ದು, ಇದೀಗ ಹಾಳಾಗಿರುವುದರಿಂದಾಗಿ ಅಗತ್ಯ ವಸ್ತುಗಳ ಖರೀದಿ, ತೋಟ, ಜಮೀನು, ಆಸ್ಪತ್ರೆಮತ್ತು ಚಿಕ್ಕಮಗಳೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂಪ್ರಯೋಜನವಾಗಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದ ಕಾರ್ಯಕರ್ತರು ಕೂಡಲೇ ರಸ್ತೆದುರಸ್ತಿಪಡಿಸದಿದ್ದಲ್ಲಿ ಲೋಕೋಪಯೋಗಿ ಇಲಾಖೆಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಪ್ರೇಮಾಕ್ಷಿ ಅವರಿಗೆ ಮನವಿಸಲ್ಲಿಸಲಾಯಿತು. ಸಿಪಿಐ ತಾಲೂಕು ಕಾರ್ಯದರ್ಶಿಜಾರ್ಜ್ ಆಸ್ಟಿನ್, ಸಹ ಕಾರ್ಯದರ್ಶಿಎಸ್.ಕೆ. ದಾನು, ವಲಯ ಕಾರ್ಯದರ್ಶಿ ಕೆ.ರವಿ,ಜಿ.ಎಸ್. ತಾರಾನಾಥ್, ಕೆ. ರಾಜು, ಗಂಗಯ್ಯ,ದೇಜು, ವಾಸು ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.