ಕುಸಿದು ಬೀಳುವ ಸ್ಥಿತಿಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ನೂತನ ಟ್ಯಾಂಕ್‌ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ ಮೌನಕ್ಕೆ ಶರಣಾಗಿರುವ ಗ್ರಾಪಂ ಅಧಿಕಾರಿಗಳು

Team Udayavani, Sep 1, 2021, 5:14 PM IST

ಕುಸಿದು ಬೀಳುವ ಸ್ಥಿತಿಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕುದೂರು: ಶಿಥಿಲವಾಗಿರುವ ನೀರಿನ ಓವರ್‌ ಹೆಡ್‌ಟ್ಯಾಂಕ್‌ ಯಾವಾಗ ಬೇಕಾದರೂ ಕುಸಿದು ಧರೆಗೆ ಬೀಳುವ ಹಂತಕ್ಕೆ ತಲುಪಿದ್ದರೂ ಕುದೂರು
ಹೋಬಳಿಯ ಹುಲಿಕಲ್‌ ಗ್ರಾಮಕ್ಕೆ ಸಂಬಂಧಿಸಿದಹುಲಿಕಲ್‌ ಗ್ರಾಪಂ ಅಧಿಕಾರಿಗಳು ಜನಪ್ರತಿನಿಧಿಗಳು ಇದರತ್ತ ಗಮನ ಹರಿಸದೆ ಮೌನಕ್ಕೆ
ಶರಣಾಗಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ ಈ ಓವರ್‌ ಹೆಡ್‌ಟ್ಯಾಂಕ್‌ ನಿರ್ಮಿಸಲಾಗಿತ್ತು. ಈಗ ಇದು ಸಂಪೂರ್ಣ ಶಿಥಿಲವಾಗಿದ್ದು.ಬೃಹತ್‌ ಗಾತ್ರದ
ಟ್ಯಾಂಕನ್ನು ಹೊತ್ತಿರುವ ಪಿಲ್ಲರ್‌ಗಳು ಸತ್ವಹೀನವಾಗಿದೆ. ಅಲ್ಲಲ್ಲಿ ಪಿಲ್ಲರ್‌ನ ಸಿಮೆಂಟ್‌ ಹೊದಿಕೆ ಕಿತ್ತುಹೋಗಿ ಕಂಬಿಗಳು ಕಾಣುತ್ತಿವೆ.
ಜೋರಾದ ಮಳೆ ಇಲ್ಲವೇ ಬಿರುಗಾಳಿ ಬೀಸಿದರೆ ಬೀಳುವ ಹಂತದಲ್ಲಿದೆ. ಇಷ್ಟಲ್ಲಾ ಆದರೂ ಇಡೀ ಗ್ರಾಮಕ್ಕೆ ಇದೇ ಟ್ಯಾಂಕ್‌ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ. ಟ್ಯಾಂಕ್‌ ಪೂರ್ಣ ತುಂಬಿದಾಗ ಯಾವಾಗ ಕುಸಿದು ಬೀಳುವುದೋ ಎಂಬ ಅತಂಕ ಸ್ಥಳೀಯರಲ್ಲಿ ಮನೆಮಾಡಿದೆ. ಓವರ್‌ಹೆಡ್‌ ಟ್ಯಾಂಕ್‌ ದುರಸ್ತಿ ಮಾಡಿ, ಇಲ್ಲದಿದ್ದರೇ ಸ್ಥಳದಿಂದ ಸ್ಥಳಾಂತರಿಸಿ ನೂತನ ಟ್ಯಾಂಕ್‌ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಗ್ರಾಪಂ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಟ್ಯಾಂಕ್‌ ಪಕ್ಕದಲ್ಲೇ ಶಾಲೆ: ಶಾಲೆಯ ಪಕ್ಕದಲ್ಲೇ ಓವರ್‌ಹೆಡ್‌ ಟ್ಯಾಂಕ್‌ ಇರುವುದರಿಂದ ಮಕ್ಕಳು ಆಟವಾಡುವ ಜಾಗದಲ್ಲಿದ್ದು ಯಾವಾಗಲೂ ಮಕ್ಕಳು ಇಲ್ಲಿಗೆ ತೆರಳುತ್ತಾರೆ. ಈ ವೇಳೆ ಟ್ಯಾಂಕ್‌ ಕುಸಿದರೆ ಅಪಾಯ ಸಂಭವಿಸುವ ಸನ್ನಿವೇಶ ಹೆಚ್ಚು ಎಂಬುದು ಶಿಕ್ಷಕರು ಮತ್ತು ಪೋಷಕರ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 214 ಅಂಕ ಕುಸಿತ, ನಿಫ್ಟಿ 56 ಅಂಕ ಇಳಿಕೆ

ಶೀಘ್ರ ಕಾಮಗಾರಿ ಅಗತ್ಯ: ಅಪಾಯದ ಸಾಧ್ಯತೆಗಳನ್ನು ಅರಿತು ಸ್ಥಳೀಯ ಸರ್ಕಾರ ದಂತಿರುವ ಗ್ರಾಪಂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ
ಗಮನಕ್ಕೆ ತಂದು ಆದಷ್ಟು ಬೇಗ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಟ್ಯಾಂಕ್‌ ಪಕ್ಕವೇ ಆಟದ ಮೈದಾನವಿದ್ದು, ಅಲ್ಲಿ ಆಟವಾಡಲು ಹೋಗುವ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರತಿದಿನ ಕಾಯುವಂತಾಗಿದೆ. ರಜಾದಿನಗಳಲ್ಲಿ ಮಕ್ಕಳು ಆಟವಾಡಲು ಬರುತ್ತಾರೆ. ಈ ವೇಳೆ ಟ್ಯಾಂಕ್‌ನಿಂದ ಏನಾದರೂ ಅಪಾಯ ಸಂಭವಿಸಬಹುದು ಎಂಬುದು ಪೋಷಕರ ಅಲವತ್ತುಕೊಂಡಿದ್ದಾರೆ. ಅನಾಹುತ ಸೃಷ್ಟಿಸುವ ಮೊದಲು ಗ್ರಾಪಂ ಎಚ್ಚೆತ್ತುಕೊಂಡು ದುರಸ್ತಿ ಅಥವಾ ನೂತನ ಟ್ಯಾಂಕ್‌ ನಿರ್ಮಿಸುವ ಕಾರ್ಯ ಮಾಡಿ ಆತಂಕ ದೂರಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಿಥಿಲಗೊಂಡಿರುವ ನೀರಿನ ಟ್ಯಾಂಕನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್‌ ನಿರ್ಮಾಣ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ ಸ್ಥಳಿಯರು ಮನವಿ ಮಾಡಿದರೂ, ಅಧಿಕಾರಿಗಳುಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ.
– ಕೃಷ್ಣಪ್ಪ ಹುಲಿಕಲ್‌ ನಿವಾಸಿ

ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ಒತ್ತಾಯಿಸಿದ್ದೇವೆ. ಪಕ್ಕದಲ್ಲೇ ಜಾಗಕೊಟ್ಟರೆ ಅಲ್ಲಿಯೇಕಟ್ಟಲಾಗುತ್ತದೆ. ಜಾಗಕೊಡದೆ ಇದ್ದರೆ ಈಗಿರುವ ಓವರ್‌ ಹೆಡ್‌ ಟ್ಯಾಂಕ್‌ ನೆಲಸಮಗೊಳಿಸಿ ಅಲ್ಲಿಯೇ ಹೊಸ ಟ್ಯಾಂಕ್‌ ನಿರ್ಮಿಸಲಾಗುತ್ತದೆ.
– ಪ್ರೇಮಾ, ಹುಲಿಕಲ್‌ ಗ್ರಾಪಂ ಪಿಡಿಒ

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.