ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ : ಡಿವೈಎಸ್ಪಿ ಕೆ.ಎಲ್.ಗಣೇಶ
Team Udayavani, Sep 1, 2021, 9:34 PM IST
ದಾಂಡೇಲಿ:ಕೋವಿಡ್ 3 ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ಅವಕಾಶವಿಲ್ಲವೆಂದು ದಾಂಡೇಲಿ ಉಪ ವಿಭಾಗದ ಡಿ.ವೈ.ಎಸ್ಪಿ ಕೆ.ಎಲ್. ಗಣೇಶ ಹೇಳಿದ್ದಾರೆ.
ಬುಧವಾರ ಸಂಜೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಗಸೂಚಿಯಂತೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಯನ್ನು ಕೋವಿಡ್ ಕಾರಣದಿಂದ ನಿಷೇಧಿಸಲಾಗಿದೆ. ಮನೆ, ದೇವಸ್ಥಾನ ಸಮುದಾಯ ಭವನ ಇಂತಹ ಸ್ಥಳಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಮಾತ್ರ ಅವಕಾಶವಿದೆ. ಇದರ ನಡುವೆ ಜನರು ಗುಂಪು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಡಿ.ಜೆಗಳನ್ನು ಬಳಸುವಂತಿಲ್ಲ, ಆದರೆ ಸರ್ಕಾರ ಸೆ. 5 ರಂದು ಮತ್ತೊಂದು ಸುತ್ತಿನ ಮಾರ್ಗಸೂಚಿ ಹೊರಡಿಸುವ ಸಾದ್ಯತೆಯಿದ್ದು, ಆ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ ಕೂಡಲೇ ದಾಂಡೇಲಿಯಲ್ಲಿರುವ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಮಾಹಿತಿ ನೀಡಲಾಗುವುದು. ಒಂದು ವೇಳೆ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡದಿದ್ದರೆ ಈಗಿರುವ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಣೆ ಮಾಡಬೇಕೆಂದು ಗಣೇಶ್.ಕೆ.ಎಲ್ ಕರೆ ನೀಡಿದರು.
ಇದನ್ನೂ ಓದಿ:ಕುಳಗಿ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ- ಪ್ರಕರಣ ದಾಖಲು
ತಹಶೀಲ್ದಾರ್ ಶೈಲೇಶ ಪರಮಾನಂದ ಮತ್ತು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರುಗಳು ಮಾತನಾಡಿ ಇನ್ನಿತರ ಸ್ಥಳಗಳಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹಬ್ಬುತ್ತಿದೆ ಆದರೆ ದಾಂಡೇಲಿ ಜನರು ಕೊಟ್ಟ ಸಹಕರದಿಂದ ಈಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಭರದಲ್ಲಿ ಜನರು ಅಪಾಯ ಆಹ್ವಾನಿಸಿಕೊಳ್ಳಬಾರೆದೆಂದು ಹೇಳಿದರು.
ಸಿಪಿಐ ಪ್ರಭು ಗಂಗನಹಳ್ಳಿ ಮತ್ತು ಪಿಎಸೈ ಯಲ್ಲಪ್ಪ.ಎಸ್ ಅವರು ಮಾತನಾಡಿ ಗಣೇಶ ಚತುರ್ಥಿಯಂದು ಸಹಜವಾಗಿ ಬೆಂಗಳೂರು, ಮಹಾರಾಷ್ಟ್ರ ಹಾಗೂ ಇನ್ನಿತರ ಸ್ಥಳಗಳಿಂದ ಊರಿಗೆ ಜನರು ಬರುವುದು ಸಹಜ ಇಂತಹ ಸಮಯದಲ್ಲಿ ಸಾರ್ವಜನಿಕರು ಜಾಗೃತೆಯಿಂದ ಇರುವುದು ಅವಶ್ಯಕತೆಯಿದೆ. ಸಾರ್ವಜನಿಕರ ಸಹಕಾರದಿಂದ ಪ್ರತಿವರ್ಷ ದಾಂಡೇಲಿ ನಗರದಲ್ಲಿ ಗಣೇಶೋತ್ಸವ ಸರಳವಾಗಿ ನಡೆದಿದೆ ಅದರಂತೆ ಈ ವರ್ಷವು ಸರಳವಾಗಿ ಹಬ್ಬ ಆಚರಣೆಗೆ ಮಹತ್ವ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸಾರ್ವಜನಿಕ ಗಣೆಶೋತ್ಸವ ಮಂಡಳಗಳಪದಾಧಿಕಾರಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯ ಪಿಎಸೈ ಯಲ್ಲಾರಲಿಂಗ ಕೊಣ್ಣೂರ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಅನಿಲ್ ನಾಯ್ಕರ, ಮುಖಂಡರುಗಳಾದ ತಸ್ವರ ಸೌದಗಾರ, ರವಿ ಸುತಾರ, ವಿಷ್ಣು ನಾಯರ್, ಗೌರೀಶ ಬಾಬ್ರೇಕರ, ಗಣೇಶ ಹೆಬ್ಬಾರ, ಉದಯ ಶೆಟ್ಟಿ, ವಿನೋದ ಬಾಂದೇಕರ, ಸುಭಾಷ ಅರ್ವೇಕರ, ಲಕ್ಷ್ಮಣ ಉಪ್ಪಾರ, ಚೆನ್ನಬಸಪ್ಪ ಮುರುಗೋಡ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.