ಶೇ.20.1ರಷ್ಟು ಜಿಡಿಪಿ ಏರಿಕೆ, ಆರ್ಥಿಕತೆ ಬೆಳೆಯುವ ಲಕ್ಷಣ


Team Udayavani, Sep 2, 2021, 6:00 AM IST

ಶೇ.20.1ರಷ್ಟು ಜಿಡಿಪಿ ಏರಿಕೆ, ಆರ್ಥಿಕತೆ ಬೆಳೆಯುವ ಲಕ್ಷಣ

ಕಳೆದ ಒಂದೂವರೆ ವರ್ಷದಿಂದ ದೇಶದ ಆರ್ಥಿಕತೆಗೆ ಕೊರೊನಾ ಕೊಡುತ್ತಿರುವ ಪೆಟ್ಟು ಅಷ್ಟಿಷ್ಟಲ್ಲ. ಕಳೆದ ವರ್ಷದ ಆರಂಭದಲ್ಲಿ ಕೊರೊನಾ ಶುರುವಾದಾಗ, ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌, ಜನತೆಯನ್ನು ಹಿಂಡಿ ಹಿಪ್ಪೆ ಮಾಡಿತ್ತು. ಆಗಂತೂ ಜನ ಕೆಲಸವಿಲ್ಲದೇ, ಕೈಗಾರಿಕೆಗಳು ಬೇಡಿಕೆ ಇಲ್ಲದೇ ಹೊಟೇಲ್‌ಗಳಲ್ಲಿ ವ್ಯಾಪಾರವಿಲ್ಲದೇ, ಹೆಚ್ಚು ಕಡಿಮೆ ಎಲ್ಲ ವಲಯಗಳು ಯಾವುದೇ ಕೆಲಸವಿಲ್ಲದೇ ನಷ್ಟಕ್ಕೀಡಾಗಿದ್ದವು. ಹೀಗಾಗಿ ಆಗ ದೇಶದಲ್ಲಿ ತೆರಿಗೆ ಸಂಗ್ರಹವೂ ಆಗಿರಲಿಲ್ಲ. ಜತೆಗೆ ದೇಶದ ಜಿಡಿಪಿ ಬೆಳವಣಿಗೆಯೂ ಆಗಿರಲಿಲ್ಲ.

ಅಷ್ಟೇ ಅಲ್ಲ, ಕಳೆದ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.-24.4ರಷ್ಟು ಏರಿಕೆಯಾಗಿತ್ತು. ಅಂದರೆ ದೇಶದ ಬೆಳವಣಿಗೆ ದರ ಋಣಾತ್ಮಕವಾಗಿತ್ತು. ಕೃಷಿ ಕ್ಷೇತ್ರವನ್ನು ಬಿಟ್ಟು, ಉಳಿದೆಲ್ಲ ವಲಯಗಳು ಋಣಾತ್ಮಕ ಬೆಳವಣಿಗೆ ಕಂಡು ತೀವ್ರ ನಷ್ಟ ಅನುಭವಿಸಿದ್ದವು. ಇದಾದ ಅನಂತರದದ ತ್ತೈಮಾಸಿಕಗಳಲ್ಲೂ ಋಣಾತ್ಮಕ ಬೆಳವಣಿಗೆಯಾಗಿತ್ತು. ವಾಸ್ತವವಾಗಿ ಕಳೆದ ಆರ್ಥಿಕ ವರ್ಷದ ಎರಡು ತ್ತೈಮಾಸಿಕ ಮತ್ತು ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲೇ ಜಿಡಿಪಿ ದರ ಧನಾತ್ಮಕ ಹಾದಿಗೆ ಬಂದಿದ್ದು.

ಈ ಹಣಕಾಸು ವರ್ಷದ ಮೊದಲ ತ್ತೈಮಾಸಿಕ ವರದಿ ಮಂಗಳವಾರವಷ್ಟೇ ಬಿಡುಗಡೆಯಾಗಿದೆ. ದೇಶದ ಜಿಡಿಪಿ ದರ ಶೇ.20.1ಕ್ಕೆ ಜಿಗಿದಿದ್ದು, ವಿತ್ತೀಯ ಕ್ಷೇತ್ರದಲ್ಲಿ ಚೇತೋಹಾರಿಯಾಗಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಸಾಂಖೀÂಕ ಸಂಸ್ಥೆ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. 2020-21ನೇ ವಿತ್ತೀಯ ವರ್ಷದ ಮೂರನೇ ಮತ್ತು ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ದರ ಕ್ರಮವಾಗಿ ಶೇ.0.5 ಮತ್ತು ಶೇ.1.6ರಷ್ಟಕ್ಕೆ ಏರಿಕೆಯಾಗಿತ್ತು. ಈಗ ಶೇ.20.1ರಷ್ಟಕ್ಕೆ ಜಿಡಿಪಿ ದರ ಏರಿಕೆಯಾಗಿದೆ.

ವಿಶ್ವಬ್ಯಾಂಕ್‌, ಆರ್‌ಬಿಐ ಸೇರಿದಂತೆ ಬಹುತೇಕ ಸಂಸ್ಥೆಗಳು ಎಪ್ರಿಲ್‌ನಿಂದ ಜೂನ್‌ವರೆಗಿನ ತ್ತೈಮಾಸಿಕದಲ್ಲಿ ಭಾರತದ ದೇಶೀಯ ಉತ್ಪಾದನ ದರ(ಜಿಡಿಪಿ) ಶೇ.20ರಷ್ಟು ಏರಿಕೆಯಾಗಬಹುದು ಎಂದೇ ಭವಿಷ್ಯ ನುಡಿದಿದ್ದವು. ಇದಕ್ಕೆ ಕಾರಣವೂ ಇದೆ. ಕೊರೊನಾದಿಂದ ಸ್ಥಗಿತಗೊಂಡಿದ್ದ ಬಹುತೇಕ ವಲಯಗಳಲ್ಲಿ ಉತ್ಪಾದನ ಚಟುವಟಿಕೆ ಜಿಗಿತುಕೊಂಡಿದೆ. ಉತ್ಪಾದನೆಗೆ ತಕ್ಕಂತೆ ಬೇಡಿಕೆ ಸೃಷ್ಟಿಯಾಗಿದ್ದು, ಪೂರೈಕೆಯೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಡಿಪಿ ಹೆಚ್ಚಳವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಪ್ರಮುಖವಾಗಿ ನಿರ್ಮಾಣ ವಲಯ ಶೇ.68.3ರಷ್ಟು ಏರಿಕೆಯಾಗಿದ್ದರೆ, ವ್ಯಾಪಾರ, ಹೊಟೇಲ್‌, ಸಾರಿಗೆ, ಸಂಪರ್ಕ, ಸೇವಾ ವಲಯದಲ್ಲಿ ಶೇ.34.3, ಗಣಿಗಾರಿಕೆ ಶೇ.18.6, ವಿದ್ಯುತ್‌, ಗ್ಯಾಸ್‌, ನೀರು ಪೂರೈಕೆ, ಇತರ ವಲಯದಲ್ಲಿ ಶೇ.14.3ರಷ್ಟು ಬೆಳವಣಿಗೆಯಾಗಿದೆ. ಅಂತೆಯೇ ಕೃಷಿ ವಲಯದಲ್ಲಿ ಶೇ.4.5ರಷ್ಟು ಪ್ರಗತಿಯಾಗಿದೆ.

ಕೃಷಿ ಹೊರತುಪಡಿಸಿದರೆ, ಉಳಿದೆಲ್ಲ ವಲಯಗಳು ಕಳೆದ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಋಣಾತ್ಮಕ ಬೆಳವಣಿಗೆ ಸಾಧಿಸಿದ್ದವು. ಈಗ ಮತ್ತೆ ಧನಾತ್ಮಕ ಬೆಳವಣಿಗೆಗೆ ಬಂದಿರುವುದು ಖುಷಿಯ ಸಂಗತಿಯೇ ಸರಿ. ಆದರೂ, ಕೊರೊನಾ ಕಾರಣದಿಂದಾಗಿ ದೇಶ ಮತ್ತೆ ಮತ್ತೆ ಲಾಕ್‌ಡೌನ್‌ನಂಥ ನಿಬಂಧನೆಗಳತ್ತ ಹೊರಳಬಾರದು. ಇದು ಆಗಬಾರದು ಎಂದಾದರೆ, ಸರಕಾರಗಳ ಜತೆಯಲ್ಲಿ ಜನರೂ ಜವಾಬ್ದಾರಿಯಿಂದ ವರ್ತಿಸಿ, ಕೊರೊನಾ ನಿಯಮಗಳ ಪಾಲನೆ ಮಾಡಬೇಕು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.